Thursday, October 23, 2014

Daily Crime Reports as on 23/10/2014 at 17:00 Hrs



ಕಳ್ಳತನಕ್ಕೆ ಪ್ರಯತ್ನ
  • ಮಲ್ಪೆ: ದಿನಾಂಕ 22/10/2014 ರಂದು ರಾತ್ರಿ 4:00 ಗಂಟೆಗೆ ಪಿರ್ಯಾದಿದಾರರಾದ ಖೈರುನ್ನೀಸಾ (40) ಗಂಡ ಪೈರುಸ್ ಅಹಮ್ಮದ್ ವಾಸ ದಾರು ಸಲಾಂ ಕಾಂಪ್ಲೆಕ್ಸ್, ಹೂಡೆ, ಪಡುತೋನ್ಸೆ ಗ್ರಾಮ ಎಂಬವರ ಮನೆಗೆ ಯಾರೋ ಅಪರಿಚಿತ ವ್ಯಕ್ತಿ ಮನೆಯ ಅಡುಗೆ ಕೋಣೆಯ ಮಾಡಿನ ಹಂಚು ತೆಗೆದು ಒಳಗೆ ಬಂದು ಮೊಬೈಲ್‌ನಿಂದ ಟಾರ್ಚ್‌ ಹಾಕಿ ಕಳ್ಳತನ ಮಾಡಲು ಪ್ರಯತ್ನಿಸಿದ್ದು, ಆ ಸಮಯ ಪಿರ್ಯಾದಿದಾರರು ಎಚ್ಚರಗೊಂಡು ಬೊಬ್ಬೆ ಹಾಕಿದಾಗ ಓಡಿ ಹೋಗಿರುತ್ತಾನೆ ಮನೆಯಲ್ಲಿ ಯಾವುದೇ ಸೊತ್ತು ಕಳ್ಳತನವಾಗಿರುವುದಿಲ್ಲ ಎಂಬುದಾಗಿ ಖೈರುನ್ನೀಸಾ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2014 ಕಲಂ 457, 511 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 23/10/2014 ರಂದು ಸಮಯ ಬೆಳಿಗ್ಗೆ 7:30 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ  ಗ್ರಾಮದ, ಶಾಸ್ತ್ರಿಸರ್ಕಲ್  ಬಳಿಯ ಗಾಂಧಿ ಮೈದಾನ ಎದುರಿನ ರಾ.ಹೆ 66  ರಸ್ತೆಯಲ್ಲಿ, ಆಪಾದಿತ ಮಂಜುನಾಥ ಎಂಬವರು  KA 20-C-6203ನೇ ಶ್ರೀ ದುರ್ಗಾಂಭಾ ಬಸ್ಸನ್ನು ಬೆಂಗಳೂರಿನಿಂದ ಕುಂದಾಪುರಕ್ಕೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ಯಾವುದೇ ಸೂಚನೆ ನೀಡದೇ ಒಮ್ಮಲೆ ಬ್ರೇಕ್‌ ಹಾಕಿದ ಪರಿಣಾಮ ಶಾಸ್ತ್ರಿ ಸರ್ಕಲ್ ಬಳಿ ಬಸ್ಸಿಂದ ಇಳಿಯಲು ಬಸ್ಸಲ್ಲಿ ನಿಂತ್ತಿದ್ದ ಪಿರ್ಯಾದಿದಾರರಾದ ಶ್ರೀಮತಿ ಶಕುಂತಲ ಎಮ್‌ ಬಾಳಿಕೆರೆ (68) ಗಂಡ: ಮುಡುರ ಬಾಳಿಕೆರೆ  ವಾಸ: ಪೂಜಾರಿ ಮನೆ, ಕಲ್ಮಾಡಿ, ವಂಡ್ಸೆ ಗ್ರಾಮ ಕುಂದಾಪುರ ತಾಲೂಕು ರವರು ಬಸ್ಸಿನಲ್ಲಿ ಬಿದ್ದು ಅವರ ಸೊಂಟಕ್ಕೆ, ತಲೆಗೆ,  ಬಲಕೈ, ಬಲ ಬುಜಕ್ಕೆ ಒಳನೋವು ಹಾಗೂ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ ಶಕುಂತಲ ಎಮ್‌ ಬಾಳಿಕೆರೆ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2014 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ

  • ಕುಂದಾಪುರ: ದಿನಾಂಕ 22.10.2014 ರಂದು ಕುಂದಾಪುರ ಪೊಲೀಸ್ ಠಾಣೆಯ ಮಹಿಳಾ ಎ.ಎಸ್‌.ಐ ರವರಾದ ಸುಧಾ ಪ್ರಭು ರವರು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಗ್ಗಿನ ಜಾವ 03:00 ಗಂಟೆಗೆ ಕುಂಭಾಸಿ ಗ್ರಾಮದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಸ್ವಾಗತ ಗೋಪುರದ ಬಳಿ ಗೂಡಂಗಡಿಯ ಹಿಂಬದಿಯಲ್ಲಿ ಓರ್ವ ವ್ಯಕ್ತಿ ಮುಖ ಮರೆಮಾಚಲು ಅವಿತು ಕುಳಿತುಕೊಂಡಿರುವುದು ಕಂಡು ಬಂದು ಆತನು ಓಡಲು ಪ್ರಾರಂಭಿಸಿದ್ದು, ಆತನನ್ನು ಹಿಡಿದು ವಿಚಾರಿಸಲಾಗಿ, ಆತನು ನಾಗರಾಜ ವಂಡ್ಸೆ ಕುಂದಾಪುರ ಎಂದು ತಿಳಿಸಿದ್ದು, ಸಂಶಯಗೊಂಡು ಪುನಃ ಕೇಳಿದಾಗ ತನ್ನ ಹೆಸರು ಅಶೋಕ ದೇವಾಡಿಗ (41) ತಂದೆ: ಅಣ್ಣಯ್ಯ ದೇವಾಡಿಗ ವಾಸ: 5 ಸೆಂಟ್ಸ್‌, ಗುಡ್ರಿ ಕೆಂಚನೂರು, ಕೆಂಚನೂರು ಗ್ರಾಮ, ಕುಂದಾಪುರ ಎಂದು ತಿಳಿಸಿದ್ದು, ಸದ್ರಿ ಸ್ಥಳದಲ್ಲಿ ಅವಿತುಕೊಂಡ ಬಗ್ಗೆ ವಿಚಾರಿಸಿದಾಗ ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಈತನು ಅಪರ ರಾತ್ರಿಯಲ್ಲಿ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ಇರಬಹುದಾಗಿದ್ದು, ಮುಂದಿನ ಕ್ರಮಕ್ಕಾಗಿ ಆತನ ವಿರುದ್ದ ಕಲಂ: 109 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: