Tuesday, October 21, 2014

Daily Crime Reports as on 21/10/2014 at 17:00 Hrsಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿ ಜೋತ್ಸ್ನಾ ಲೋಬೋ ಇವರು ತನ್ನ ಬಾಬ್ತು ಕಾರು ನಂಬ್ರ ಕೆಎ19ಎಮ್‌‌ಎ8875ನೇದನ್ನು ಚಲಾಯಿಸಿಕೊಂಡು ತಮ್ಮ ಮನೆಯಿಂದ ಕಚೇರಿ ಕಡೆಗೆ ಹೋಗುತ್ತಾ ಟ್ಯಾಪ್ಮಿ ರಸ್ತೆ, ಪೆಟ್ರೋಲ್‌ ಬಂಕ್‌ ಬಳಿ ತಲುಪುವಾಗ್ಗೆ ಹಿಂದಿನಿಂದ ಕೆಎ20ಎಕ್ಸ್‌‌‌5064ನೇದರ ಬೈಕಿನ ಸವಾರ ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಜಖಂಗೊಂಡಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/14 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರೇ ಪ್ರಕರಣ

  • ಮಣಿಪಾಲ: ದಿನಾಂಕ 20.10.14ರಂದು ಬೆಳಿಗ್ಗೆ 11:00ಗಂಟೆಗೆ ಪಿರ್ಯಾದಿ ರೆಜಿನಾ ರಾಡ್ರಿಗಸ್‌‌ ಇವರ ಬಾಬ್ತು ಜಾಗ ಸರ್ವೆ ನಂಬ್ರ 112/4ಕ್ಕೆ ಹಾಕಿದ ಕಲ್ಲು ಕಂಬಗಳನ್ನು ಮತ್ತು ತಂತಿಯನ್ನು ಶ್ರೀಮತಿ ಸೆರ್ಫಿನ್‌ ನೊರೋನ್ನಾ, ಅಬ್ಬೀನ್‌ ನೊರೋನ್ಹ್ನಾ, ಜೆರಾಲ್ಡ್‌ ನೊರೋನ್ಹ್ನಾ ಮತ್ತು ಅವರ ಪತ್ನಿಯರು  ತುಂಡು ಮಾಡಿ ಹಾಕಿರುತ್ತಾರೆ. ಈ ಬಗ್ಗೆ ರೆಜಿನಾ ರಾಡ್ರಿಗಸ್‌‌ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 181/14 ಕಲಂ: 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಶಶಿಕಾಂತ ಕಾಂಚನ್  ಪ್ರಾಯ: 27 ವರ್ಷ ಎಂಬವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಬಗ್ಗೆ ಚಿಕಿತ್ಸೆ ಕೊಡಿಸಿದ್ದರು, ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:21/10/2014 ರಂದು ಬೆಳಿಗ್ಗೆ 06:00 ಗಂಟೆಯಿಂದ 08:30 ಗಂಟೆ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಕೋಟತಟ್ಟು  ಗ್ರಾಮದ  ಪಡುಕೆರೆ ಉಸ್ಮಾನ ಸಾಹೇಬರ ಬಾಬ್ತು ಹಾಳು ಬಿದ್ದ ಮನೆಯ ಅಡಿಗೆ ಕೋಣೆಯಲ್ಲಿ  ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 47/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: