Tuesday, October 21, 2014

Daily Crime Reports as on 21/10/2014 at 07:00 Hrs



ಅಪಘಾತ ಪ್ರಕರಣ


  • ಉಡುಪಿ: ದಿನಾಂಕ 20/10/2014 ರಂದು ಸಂಜೆ 04.15 ಗಂಟೆಗೆ  ಪಿರ್ಯಾದಿ ಅಶೋಕ ರವರು ತನ್ನ ಬಾಬ್ತು ಕೆಎ 20 ವೈ 5910 ನೇ ಮೋಟಾರ್ ಸೈಕಲ್ ನಲ್ಲಿ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನ ಎದುರಿನ ರಸ್ತೆಯಿಂದಾಗಿ ಪಿಪಿಸಿ ಕಾಲೇಜ್ ಕಡೆಗೆ ಹೋಗುತ್ತಾ ಒಳಕಾಡು ಜಂಕ್ಷನ್ ಬಳಿ ತಲುಪುವಾಗ ಹುಂಡೈ ಐ10 ನೇ ಕಾರಿನ ಚಾಲಕ ಮೇಲ್ವೀನ್ ಲೂವಿಸ್ ಎಂಬುವವರು ಉಡುಪಿ ತಾಲೂಕು ಕಛೇರಿ ಕಡೆಯಿಂದ ಒಳಕಾಡು ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಏಕಾಏಕಿ ಕಾರನ್ನುಒಮ್ಮೆಲೆ  ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಮುಂಬಾಗ ಕಾರಿನ ಬಲ ಹಿಂಬದಿಯ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಭುಜದ ಬಳಿ ಒಳ ಜಖಂ ಆಗಿದ್ದು, ಬಲ ಕಾಲಿನ ಹೆಬ್ಬೆರಳ ಬಳಿ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/14 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ


  • ಉಡುಪಿ: ದಿನಾಂಕ 20/10/2014 ರಂದು ಬೆಳಗ್ಗೆ 8:00 ಗಂಟೆಗೆ ಪಿರ್ಯಾದಿ ಅಶೋಕ್ ಕುಮಾರ್ ಇವ ಅಕ್ಕನ ಗಂಡನಾದ ಅಣ್ಣು ಸೇರಿಗಾರವರು ಕುಕ್ಕಿಕಟ್ಟೆಯ ಕಲ್ಯಾಣನಗರ ಎಂಬಲ್ಲಿನ ಮಹೇಶ್ ಶೆಟ್ಟಿಯವರ ಮನೆಯ ಗಾರೆಯ ಕೆಲಸಕ್ಕೆ ಹೋಗಿದ್ದು, ಅಲ್ಲಿ ಸಾಧು ಮೇಸ್ತ್ರಿಯವರು ಗುತ್ತಿಗೆದಾರರಾಗಿದ್ದು, ಮನೆಯ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಆ ಮನೆಯ ಕೆಲಸವನ್ನು ಅಣ್ಣು ಸೇರಿಗಾರರೊಂದಿಗೆ ಇತರ 5 ಜನ ಕೆಲಸ ಮಾಡುತ್ತಿದ್ದರು, ಫಿರ್ಯಾದಿದಾರರಿಗೆ ಮಧ್ಯಾಹ್ನ 1:30 ಗಂಟೆಗೆ ಕುಕ್ಕಿಕಟ್ಟೆ ಡಯಾನ ಟಾಕೀಸ್ ಬಳಿ ಇರುವಾಗ ಸಾಧು ಮೇಸ್ತ್ರಿಯವರು ದೂರವಾಣಿ ಕರೆ ಮಾಡಿ ನಿಮ್ಮ ಅಕ್ಕನ ಗಂಡ ಅಣ್ಣು ಸೇರಿಗಾರರವರು  ದಿನ ಮಹೇಶ್ ಶೆಟ್ಟಿಯವರ ಮನೆ  ಕೆಲಸ ಮಾಡುತ್ತಿರುವಾಗ ಸಮಯ ಸುಮಾರು 11:00 ಗಂಟೆಗೆ ಅಟ್ಟಣಿಗೆಯಲ್ಲಿ ನಿಂತು ಗಾರೆ ಕೆಲಸ ಮಾಡುತ್ತಿರುವಾಗ ಅಟ್ಟಣಿಗೆಯ ಹಲಗೆ ಜಾರಿ ಅಟ್ಟಣಿಗೆಯ ಒಂದು ಬದಿಯ ಪೈಪು ಅಣ್ಣು ಸೇರಿಗಾರರವರ ಎದೆಯ  ಭಾಗಕ್ಕೆ ಚುಚ್ಚಿ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಮ್ಸಿ ಆಸ್ಪತ್ರೆಗೆ ತಂದಿರುವುದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮತ್ತು ಅವರ ಅಕ್ಕ ಆಸ್ಪತ್ರೆಗೆ ಹೋಗಿ ನೋಡಲಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸುಮಾರು ಸಂಜೆ 4:30 ಗಂಟೆಗೆ ಅಣ್ಣು ಸೇರಿಗಾರರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆಅಣ್ಣು ಸೇರಿಗಾರರವರು ಗಾರೆ ಕೆಲಸ ಮಾಡುತ್ತಿರುವ ಸಮಯ ಆರೋಪಿತರಾದ ಮಹೇಶ್ ಶೆಟ್ಟಿ ಮತ್ತು ಸಾಧು ಮೇಸ್ತ್ರಿಯವರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ್ದು ಘಟನೆಗೆ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 306/14  ಕಲಂ: 288, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾರ್ಕಳ: ದಿನಾಂಕ:20.10.2014 ರಂದು ಪಿರ್ಯಾದಿ ಎಸ್ ಸುಧಾಕರ ಶೆಟ್ಟಿ ಪಂಚಾಯತ್ ಅಭಿವೃದಿ ಅಧಿಕಾರಿ ಮಾಳ ಪಂಚಾಯತ್  ಮಾಳ ಗ್ರಾಮ ಕಾರ್ಕಳ ತಾಲೂಕ ಇವರು  ಮಧ್ಯಾಹ್ನ 2:15 ಗಂಟೆ ಸಮಯಕ್ಕೆ ತನ್ನ ಕಛೇರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಆರೋಪಿ ರಿಪ್ರಸಾದ ಇರ್ವತಾಯ ವಾಸ:ಒಡಿಲ್ನಾಳ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಈತನು ಸದ್ರಿಯವರ ಕಛೇರಿಗೆ ಹಾಜರಾಗಿ ಕೇಳಿರುವ ದಾಖಲೆಗಳನ್ನು  ಪಡೆದುಕೊಂಡ ಬಗ್ಗೆ ಸ್ವೀಕೃತಿಯನ್ನು ನೀಡಲು ಸದ್ರಿಯವರಲ್ಲಿ ಪಿರ್ಯಾದಿದಾರರು ಕೇಳಿದಾಗ ನಿನ್ನ ಪುಸ್ತಕ್ಕೆ ಸಹಿ ಹಾಕುವುದಿಲ್ಲ ನೀನು ಎನು ಮಾಡುತ್ತಿಯೋ ಮಾಡಿಕೋ, ನಿನ್ನನ್ನು ಹೀಗೆಯೇ ಬಿಡುವುದಿಲ್ಲ ಎಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿ ಕಛೇರಿಯಲಿದ್ದ ಇತರ ಸಿಬ್ಬಂದಿಗಳು ಹಾಗೂ ಪಂಚಾಯತ್ ಸದ್ಯಸರ ಎದುರಿನಲ್ಲಿ ಪಿರ್ಯಾದಿದಾರರ ಸರ್ಕಾರಿ ರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/14  ಕಲಂ: 353, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
  • ಉಡುಪಿ: ದಿನಾಂಕ: 19/10/2014ರಂದು ರಾತ್ರಿ ಸುಮಾರು 21:30ಗಂಟೆಗೆ ಫಿರ್ಯಾದಿ ಮಹೇಶ್ ಇವರ ಸಾಯಿ ರಾಧ ಸ್ಟಾರ್‌ ಅಪಾರ್ಟಮೆಂಟ್‌ ಅಂಬಲಪಾಡಿ ಎದುರುಗಡೆ ಕಾರನ್ನು ಪಾರ್ಕ್‌ ಮಾಡುವಾಗ  ಫಿರ್ಯಾದಿದಾರರು ವಾಸವಾಗಿರುವ ಅಪಾರ್ಟಮೆಂಟ್‌ನಲ್ಲಿ ವಾಸವಾಗಿರುವ ಸಂಜೀವ ಕರ್ಕೆರ ಎಂಬವರು ಫಿರ್ಯಾದಿದಾರರ ಕಾರಿಗೆ ಅಡ್ಡ ಬಂದು ತಡೆದು ನಿಲ್ಲಿಸಿ ಕಣ್ಣು ಕಾಣುವುದಿಲ್ಲವಾ ಎಂದು ಅವಾಚ್ಯ ಶಬ್ಧಗಳಿಂದ ಬೈದು  ಫಿರ್ಯಾದಿದಾರರನ್ನು ಕೊಲ್ಲದೇ ಬಿಡುವುದಿಲ್ಲ  ಎಂದು ಯಾವುದೋ ಒಂದು ಹರಿತವಾದ ವಸ್ತುವಿನಿಂದ ನನ್ನ ಹೊಟ್ಟೆಯ ಬಲ ಭಾಗಕ್ಕೆ ಗೀರಿರುತ್ತಾನೆ ಇದರಿಂದ ಫಿರ್ಯಾದಿದಾರರ ಹೊಟ್ಟೆಯ ಬಲ ಭಾಗದಲ್ಲಿ ಗೀರಿದ ರಕ್ತ ಗಾಯವಾಗಿರುತ್ತದೆ.   ಈ ಬಗ್ಗೆ ಉಡುಪಿ ನಗರ  ಠಾಣೆಯಲ್ಲಿ ಅಪರಾಧ ಕ್ರಮಾಂಕ: 304/14  341, 504, 506, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ದಿನಾಂಕ: 19/10/2014ರಂದು ರಾತ್ರಿ ಸುಮಾರು 21:30ಗಂಟೆಗೆ ಫಿರ್ಯಾದಿ ಸಂಜೀವ ಕರ್ಕೇರ ಸಾಯಿ ರಾಧ ಸ್ಟಾರ್‌ ಅಪಾರ್ಟಮೆಂಟ್‌ ಅಂಬಲಪಾಡಿ ಕೆಳಗೆ ಪಾರ್ಕಿಂಗ್‌ ಜಾಗದಲ್ಲಿ ವಾಕಿಂಗ್‌  ಮಾಡಿಕೊಂಡಿರುವಾಗ   ಫಿರ್ಯಾದಿದಾರರು ವಾಸವಾಗಿರುವ ಅಪಾರ್ಟ್‌ಮೆಂಟ್‌ನ 3ನೇ ಮಹಡಿಯಲ್ಲಿ  ವಾಸವಾಗಿರುವ  ಮಹೇಶ ಮತ್ತು ಅವರ ತಮ್ಮ ಇಂಡಿಕಾ ಕಾರಿನಲ್ಲಿ ಬರುತ್ತಿದ್ದು ಫಿರ್ಯದಿದಾರರನ್ನು ನೋಡಿ ಕಾರನ್ನು ಜೋರಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಹತ್ತಿರ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದು ಬಂದು ಫಿರ್ಯದಿದಾರರನ್ನು ಅಡ್ಡಗಟ್ಟಿ  ತಡೆದು ನಿಲ್ಲಿಸಿ   ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರನ್ನು  ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕೈಯಿಂದ ಹೊಡೆದಿರುತ್ತಾರೆ. ಈ ಬಗ್ಗೆ ಉಡುಪಿ ನಗರ  ಠಾಣೆಯಲ್ಲಿ ಅಪರಾಧ ಕ್ರಮಾಂಕ: 305/14 341, 504, 506, 323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: