Saturday, October 18, 2014

Daily Crime Reports as on 18/10/2014 at 07:00 Hrs



ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 17.10.2014 ರಂದು ಸಂಜೆ 17:45 ಗಂಟೆಗೆ ಕೆ.ಎ 20 ಬಿ 7666 ನೇ ನಂಬ್ರದ ವಿಶಾಲ್ ಎಂಬ ಹೆಸರಿನ ಬಸ್‌ನ್ನು ಅದರ ಚಾಲಕ ಶ್ರೀನಿವಾಸನು ಕಾರ್ಕಳ - ಪಡುಬಿದ್ರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪಡುಬಿದ್ರೆ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೆದಿಂಜೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ತನ್ನ ಬಸ್‌ನ್ನು ತೀರಾ ಬಲಕ್ಕೆ ತಿರುಗಿಸಿದ ಪರಿಣಾಮ ಎದುರುಗಡೆಯಿಂದ ಅಂದರೆ ಪಡುಬಿದ್ರೆ ಕಡೆಯಿಂದ ಬರುತ್ತಿದ್ದ ಕೆ.ಎ 20 ಎ 7869 ನೇ ನಂಬ್ರದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ಆಟೋರಿಕ್ಷಾ ಮತ್ತು ಬಸ್ ಪಲ್ಟಿಯಾಗಿ ರಸ್ತೆ ಬಲಬದಿಯಲ್ಲಿದ್ದ ತಗ್ಗು ಪ್ರದೇಶಕ್ಕೆ ಬಿದ್ದಿದ್ದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಜಮೀಲಾ,ಮೊಹಮ್ಮದ್ ಶರೀಫ್, ಮೊಹಮ್ಮದ್ ಪೈಜಲ್,ರುಕ್ಸಾನಾ, ಮಗು ನೇಹಾ ಮತ್ತು ನಿದಾ ಇವರಿಗೆ ತೀವೃ ಗಾಯವಾಗಿದ್ದಲ್ಲದೇ ಬಸ್ಸಿನಲ್ಲಿದ್ದ ಸುಮಾರು 9 ಜನ ಪ್ರಯಾಣಿಕರಿಗೆ ಗಾಯವಾಗಿದ್ದು ಗಾಯಾಳುಗಳ ಪೈಕಿ ತೀವೃ ಗಾಯಗೊಂಡ ಶ್ರೀಮತಿ ಜಮೀಲಾ ಇವರಿಗೆ ಚಿಕತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮದ್ಯೆ ಮೃತಪಟ್ಟಿರುವುದಾಗಿದೆ ಮತ್ತು ಮಗು ನೇಹಾ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಉಳಿದ ಗಾಯಾಳುಗಳು ಉಡುಪಿಯ ವಿವಿದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಫಾರೂಕ್ (35) ತಂದೆ: ದಿ, ಇಸ್ಮಾಯಿಲ್, ವಾಸ: ವಿಶ್ಮಾ ಮಂಜಿಲ್, ಜ್ಯೂನಿಯರ್ ಕಾಲೇಜಿನ ಬಳಿ, ಬಸ್ದ ಪಡ್ಪು, ಶಿವನಗರ ಹೆಜಮಾಡಿ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2014 ಕಲಂ 279, 337, 338, 304(A) ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆ ಪ್ರಕರಣ
  • ಮಣಿಪಾಲ: ಪಿರ್ಯಾಧಿದಾರರಾದ ಶ್ಯಾಮ ಪ್ರಸಾದ್ (37) ತಂದೆ: ಕೆ.ಜಿ ನಾಯಕ್ ವಾಸ: ಶ್ರಿ ದ್ವಾಪರ ಮನೆ, 80 ಬಡಗಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವರು ಜೂನ್ 2014 ನೇ ತಿಂಗಳಿನಲ್ಲಿ ಆಪಾದಿತ ಮೋಹನ್ ಕೃಷ್ಣ ಡೋರ್ ನಂಬ್ರ 2/309, ಕೋಟಪುರ ಮನೆ, ಎರ್ನಾಕುಲಂ ನಗರ, ಕೇರಳ ರಾಜ್ಯ ಎಂಬಾತನಿಗೆ ರೂ 1,00,000/- ಹಣವನ್ನು ಸಾಲವಾಗಿ ನೀಡಿದ್ದು ಈ ಬಗ್ಗೆ ಮರುಪಾವತಿಗಾಗಿ ಆಪಾದಿತರು ರೂ 1,00,000/- ರ ಸಿಂಡಿಕೇಟ್ ಬ್ಯಾಂಕ್, ಮಹಾದೇವಿ ಶಾಖೆಯ ಚೆಕ್ ನಂಬ್ರ 313221 ನ್ನು ನೀಡಿದ್ದು, ಸದ್ರಿ ಚೆಕ್ ಆಪಾದಿತನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಅಮಾನ್ಯಗೊಂಡಿರುತ್ತದೆ. ಆಪಾದಿತರು ಪಿರ್ಯಾದುದಾರಿಗೆ ಕೊಡಬೇಕಾದ ಹಣವನ್ನು ಕೊಡದೇ ಚೆಕ್ ನಗದೀಕರಿಸಲು ಖಾತೆಯಲ್ಲಿ ಸಾಕಷ್ಟು ಹಣ ಹಾಕದೇ  ಪಿರ್ಯಾಧಿದಾರರಿಗೆ ಮೋಸ ಮಾಡಿರುವುದಾಗಿದೆ ಎಂಬುದಾಗಿ ಶ್ಯಾಮ ಪ್ರಸಾದ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 177/2014 ಕಲಂ 420 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣಗಳು  
  • ಉಡುಪಿ: ಫಿರ್ಯಾದಿದಾರರಾದ ರತ್ನಾಕರ ಜಿಎಸ್ ತಂದೆ: ಗಿರಿಯ ಸೇರಿಗಾರ ವಾಸ: ಮನೆ ನಂ 5-1-100 ಚಂದುಮೈದಾನ  ಹತ್ತಿರ, ಬೈಲೂರು 76 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಎಂಬವರು ಉಡುಪಿಯ ದೇವಾಡಿಗರ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದು ದಿನಾಂಕ 17/10/2014 ರಂದು ಸಂಘದ ಮಾಸಿಕ ಸಭೆಯನ್ನು ಉಡುಪಿ ಚಿಟ್ಪಾಡಿಯಲ್ಲಿರುವ ದೇವಾಡಿಗರ ಸಭಾ ಭವನದಲ್ಲಿ ಸಭೆ ನಡೆಯುತ್ತಿರುವಾಗ ಸಂಜೆ ಸುಮಾರು 18:00 ಗಂಟೆಗೆ ಏಕಾಏಕಿ ಶ್ರೀಧರ ದೇವಾಡಿಗ, ಮಂಜುನಾಥ ದೇವಾಡಿಗ,ಕಾರ್ತಿಕ್ ದೇವಾಡಿಗ,ಪ್ರದೀಪ್,ಗೋಪಾಲ ಸೇರಿಗಾರ,ಉಮೇಶ್ ದೇವಾಡಿಗ,ಚಂದ್ರಕಾಂತ ದೇವಾಡಿಗ,ಜೀವರತ್ನಾ ದೇವಾಡಿಗ, ಎಂಬವರು ಸಭಾ ಭವನದ ಒಳಗೆ ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಫಿರ್ಯಾದಿದಾರರಿಗೆ, ಮತ್ತು ದಿನಕರ ಸೇರಿಗಾರ, ಸಂಘದ ಅಧ್ಯಕ್ಷರಾದ ಗಣೇಶ್ ದೇವಾಡಿಗ, ನಿತ್ಯಾನಂದ ಸೇರಿಗಾರರಿಗೆ ಕೈಯಿಂದ ಹೊಡೆದು ಸಂಘದ ಪುಸ್ತಕವನ್ನು ಹರಿದು ಚೆಲ್ಲ ಪಿಲ್ಲಿ ಮಾಡಿ ಮುಂದೆ ನಿಮ್ಮನ್ನೆಲ್ಲ  ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಗಲಾಟೆಯಲ್ಲಿ ಫಿರ್ಯಾದಿದಾರರ ನವರತ್ನದ ಉಂಗುರ ಬಿದ್ದು ಹೋಗಿರುತ್ತದೆ. ಎಂಬುದಾಗಿ ರತ್ನಾಕರ ಜಿ ಎಸ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 298/2014 ಕಲಂ 143,147,341,504,323,427,506,ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 17/10/2014 ರಂದು ಚಿಟ್ಪಾಡಿಯ ದೇವಾಡಿಗರ ಸಭಾ ಭವನದಲ್ಲಿ ಮಾಸಿಕ ಸಭೆ ಆಯೋಜಿಸಿದ್ದು  ಈ ಸಭೆಗೆ ಫಿರ್ಯಾದಿದಾರರಾದ ಯು ಮಂಜುನಾಥ ದೇವಾಡಿಗ ತಂದೆ:  ಕೆ ಮುದ್ದು ಮೊಹಿಲಿ  ವಾಸ: ಮನೆ ನಂ 8-2-85 ಬೈಲಕೆರೆ ಉಡುಪಿ ತಾಲೂಕು ರವರು ಹಾಗೂ ಇತರ ಸದಸ್ಯರು ಹಾಜರಿದ್ದು, ಸಂಜೆ ಸುಮಾರು 18:15 ರ ಸಮಯಕ್ಕೆ ಸಂಘದ ಕಾರ್ಯದರ್ಶಿ ನಿತ್ಯಾನಂದ ಸೇರಿಗಾರರವರು ಹಿಂದಿನ ಸಭೆಯ ಮಾಸಿಕ ವರದಿಯನ್ನು ಓದಿ ಹೇಳಿದ್ದು,  ಆ ಸಮಯ ಫಿರ್ಯಾದಿದಾರರು ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ನಿತ್ಯಾನಂದ ಎನ್ನುವವರು ಫಿರ್ಯಾದಿದಾರನ್ನು ಕೈಯಿಂದ ದೂಡಿದ್ದು ಕೆಳಗೆ ಬಿದ್ದು ಮುಂದೆ ಹೋಗಲು ಪ್ರಯತ್ನಿಸಿದಾಗ ರತ್ನಾಕರ ಜಿ.ಎಸ್ ಸುದರ್ಶನ ದೇವಾಡಿಗ, ಗಣೇಶ, ದಿನಕರ, ಸೀತಾರಾಮ ,ಕೃಷ್ಣ ಸೇರಿಗಾರ, ಎಂಬವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ, ಫಿರ್ಯಾದಿದಾರರನ್ನು ಬಿಡಿಸಲು ಬಂದ ಶ್ರೀಧರ ದೇವಾಡಿಗರವರಿಗೆ ಕೈಯಿಂದ ಎದೆಗೆ ತಲೆಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ ಫಿರ್ಯಾದಿದಾರರಿಗೆ ಆರೋಪಿತರು ಹೊಡೆದು ಕಾಲಿನಿಂದ ತುಳಿದ ಪರಿಣಾಮ ಎಡಕಾಲಿಗೆ ಗುದ್ದಿದ ನೋವುಂಟಾಗಿರುತ್ತದೆ, ಆರೋಪಿತರು  ಫಿರ್ಯಾದಿದಾರರನ್ನು ಮತ್ತು ಶ್ರೀಧರ ದೇವಾಡಿಗರನ್ನು ಉದ್ದೇಶಿಸಿ ಇನ್ನು ಮುಂದೆ ಸಂಘಕ್ಕೆ ಬಂದರೆ ಕಾಲು ಕಡಿಯುತ್ತೇವೆ ಹಾಗೂ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ. ಗಾಯದ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಯು ಮಂಜುನಾಥ ದೇವಾಡಿಗ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 299/2014 ಕಲಂ 143,147,341,323,506,ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ನೀಡಿದ ಪ್ರಕರಣ
  • ಉಡುಪಿ: ದಿನಾಂಕ 17/10/2014 ರಂದು ಸಂಜೆ 18:00 ಗಂಟೆಗೆ ಫಿರ್ಯಾದಿದಾರರಾದ ವೆಂಕಟೇಶ್ ತಂದೆ: ಗದಿಗೆಪ್ಪ ವಾಸ: ಜ್ಯೋತಿ ನಿಲಯ ಶಾಂತಿ ನಗರ ಬೈಲುರು 76 ಬಡಗುಬೆಟ್ಟು ಗ್ರಾಮ ಎಂಬವರು ತಮ್ಮ ಟಾಟಾ ಸುಮೊ ವಾಹನದ ಟಯರ್ ಪಂಚಾರ್ ಆಗಿದ್ದರಿಂದ ಹಳೆ ಟೈಯರ್ ಬದಲಿಸಿ ಹೊಸ ಟೈಯರ್ ಹಾಕಿಸುವರೇ ಉಡುಪಿಯ ಜನತಾ ಟೈಯರ್ ಅಂಗಡಿಗೆ  ಹೋಗಿ ಟೈಯರ್ ಖರೀದಿಸಿ ಅದರ ಬಾಬ್ತು ಹಣವನ್ನು ನಗದು ರೂಪದಲ್ಲಿ ಅಂಗಡಿ ಮಾಲೀಕರಾದ ಚಂದ್ರಶೇಖರ್ ರವರಿಗೆ  ನೀಡಿ ಅವರು ಕೆಲಸದವರಲ್ಲಿ ಹಾಕಿ ಕೊಡುವಂತೆ ಹೇಳಿ ಫಿರ್ಯಾದಿದಾರರು ವಾಹನವನ್ನು ಆರೋಪಿತರ ಅಂಗಡಿಯ ಮುಂದೆ ನಿಲ್ಲಿಸಿ ಕೃಷ್ಣ ಮಠಕ್ಕೆ ಹೋಗಿ ವಾಪಾಸು ವಾಹನವನ್ನು ಪರೀಶೀಲಿಸಿದಾಗ ವಾಹನದ ಟೈಯರ್ ಬದಲಿಸದೆ ಇದ್ದು ಟೈಯರ್ ಟ್ಯೂಬ್ ಸಮೇತ ಒಡೆದು ಹೋಗಿದ್ದು ಈ ಬಗ್ಗೆ ಅಂಗಡಿಯ ಕೆಲಸದವರಲ್ಲಿ ಕೇಳಿದಾಗ ನನಗೆ ಸಂಬಂಧವಿಲ್ಲ ಎಂದು ಹೇಳಿ ಆತ ಧಣಿಯವರಾದ ಚಂದ್ರಶೇಖರ್ ರಲ್ಲಿ ವಿಚಾರಿಸುವಂತೆ ಹೇಳಿದ್ದು ನಂತರ ಆರೋಪಿತರಾದ ಚಂದ್ರಶೇಖರ್ ರವರಲ್ಲಿ ಕೇಳಿದಾಗ  ನಿನಗೆ ಟೈಯರ್ ಕೊಡಲಿಕ್ಕೆ ಆಗುವುದಿಲ್ಲ. ಹಾಗೂ ಯಾವುದೋ ಒಂದು ಪಿಸ್ತೂಲನ್ನು ತೋರಿಸಿ ನಿನ್ನನ್ನು ಕೊಂದು ಬಿಡುವುದಾಗಿ ಹೆದರಿಸಿರುತ್ತಾರೆ ಎಂಬುದಾಗಿ ವೆಂಕಟೇಶ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 300/2014 ಕಲಂ 506 ಐ.ಪಿ.ಸಿ 5 ಜೊತೆಗೆ 25 ಆರ್ಮ್ಸ ಆಕ್ಟ್  ನಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಉಡುಪಿ: ಫಿರ್ಯಾದಿದಾರರಾದ ಸುನೀಲ್ ವಿ ತಂದೆ: ವಿರೂಪಾಕ್ಷ ವಿಳಾಸ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯ ಬಳಿ ಜಾನೆಕೆರೆ ಗ್ರಾಮ ಅರೆಕೆರೆ ಅಂಚೆ ಸಕಲೇಶಪುರ ತಾಲೂಕು ಹಾಸನ ಜಿಲ್ಲೆ ಎಂಬವರು ಕುಕ್ಕಿಕಟ್ಟೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ ವಾಸ ಮಾಡಿಕೊಂಡಿದ್ದು ದಿನಾಂಕ 17/102014 ರಂದು ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ ಫಿರ್ಯಾದಿದಾರರು ಊಟ ಮಾಡಿ  ನೀರು ತರಲು ಹಾಲ್ ಗೆ ಹೋದಾಗ ಆ ಸಮಯ ಉಮೇಶ, ರಾಘು, ರವಿ, ಹಾಗೂ ಕರುಣಾಕರ ಅಲ್ಲಿ ಇದ್ದು ಅವರುಗಳು ಫಿರ್ಯಾದಿದಾರರನ್ನು ಉದ್ದೇಶಿಸಿ ಯಾಕೆ ದುರುಗುಟ್ಟಿ ನೋಡುತ್ತಿ ಎಂದು ಕೇಳಿದಾಗ ಫಿರ್ಯಾದಿದಾರರು ಯಾರನ್ನು ದೂರಗುಟ್ಟಿ ನೋಡಿಲ್ಲ ಎಂಬುದಾಗಿ ಹೇಳಿದ್ದು ಆಗ ಆರೋಪಿತರ ಪೈಕಿ ಯಾರೋ ಒಬ್ಬರು ಫಿರ್ಯಾದಿದಾರರಿಗೆ ಕಬ್ಬಿಣದ ಚೆರ್ ನಿಂದ ಮುಖಕ್ಕೆ ಹೊಡೆದಿದ್ದು, ಪರಿಣಾಮ ಫಿರ್ಯಾದಿದಾರರ ಮುಖಕ್ಕೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಸುನೀಲ್ ವಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 301/2014 ಕಲಂ 324, 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ಪಿರ್ಯಾಧಿದಾರರಾದ ಪವನ್‌ (19) ತಂದೆ: ಶಿವರಾಮ ವಾಸ: ಮಂಕಿಮನೆ ಮಸ್ಕಿ ನಾವುಂದ ಗ್ರಾಮ  ಕುಂದಾಪುರ ತಾಲೂಕು ಎಂಬವರ ಮಾವ ಸುರೇಶ್‌ ಪ್ರಾಯ (46) ರವರು ಸುಮಾರು 9 ವರ್ಷಗಳಿಂದ ಪಕ್ಷವಾತ ಖಾಯಿಲೆಯಿಂದ ಬಳಲುತ್ತಿದ್ದು ಕುಂದಾಪುರ ವಿನಯ ಆಸ್ಪತ್ರೆಯಿಂದ ಔಷದ ಪಡೆಯುತ್ತಿದ್ದರೂ ಗುಣಮುಖವಾಗದ ಕಾರಣ ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 17/10/2014 ರ ಬೆಳಿಗ್ಗೆ 05:00 ಗಂಟೆಯಿಂದ 05:30 ಗಂಟೆಯ ನಡುವಿನ ಅವದಿಯಲ್ಲಿ ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿ ಮಂಕಿಮನೆ ಎಂಬಲ್ಲಿ ಮೃತರಿಗೆ ಸಂಬಂದಿಸಿದ ಜಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಪವನ್‌ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 39/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: