Tuesday, October 07, 2014

Daily Crime Reports as on 07/10/2014 at 07:00 Hrs
ಅಪಘಾತ ಪ್ರಕರಣಗಳು  

  • ಉಡುಪಿ: ದಿನಾಂಕ 6.10.2014 ರಂದು 17:25 ಗಂಟೆಗೆ ಪಿರ್ಯಾದಿದಾರರಾದ ಫಾತಿಮಾ (35) ಗಂಡ: ಖಾಸಿಂ ಸಾಬ್‌, ವಾಸ: ಮಕಾಸಿ, ಮುಕ್ಕಾಂ, ಜಲಿಗೇರಿ ಗ್ರಾಮ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಹಾಲಿ ವಾಸ: ಹೈವೆ ಗ್ಯಾರೇಜ್‌ ಬಳಿ, ಸಂತೆಕಟ್ಟೆ, ಉಡುಪಿ ಎಂಬವರ ಮಗ ಮುಬಾರಕ್‌ (14) ಮತ್ತು ಪಕ್ಕದ ಮನೆಯ ಸಾವಿತ್ರಿ (11) ರವರು ಇತರ ಮಕ್ಕಳೊಂದಿಗೆ ಸಂತೆಕಟ್ಟೆ ಮಾರ್ಕೆಟ್‌ ನಿಂದ ಸ್ವಲ್ಪ ಹಿಂದೆ ರಾ. ಹೆ. 66 ರ ಚತುಷ್ಪಥ ಕಾಮಗಾರಿ ನಡೆಸಲು ಸಮತಟ್ಟು ಮಾಡಿದ್ದ ಮಣ್ಣು ರಸ್ತೆಯ ಪೂರ್ವ ಬದಿಯ ಖಾಲಿ ಜಾಗದಲ್ಲಿ ಆಟವಾಡುತ್ತಿದ್ದು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಸಿ-0015 ನೇ ಟಾಟಾ ಏಸ್‌ ಟೆಂಪೋ ಚಾಲಕ ಮಂಜುನಾಥನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್‌ ಟೆಂಪೋ ರಸ್ತೆಯಿಂದ ಪೂರ್ವ ಬದಿಯ ಮಣ್ಣು ರಸ್ತೆಗೆ ಉರುಳಿ ಬಿದ್ದು ಅಲ್ಲಿ ಆಟವಾಡುತ್ತಿದ್ದ ಮುಬಾರಕ್‌ ಮತ್ತು ಸಾವಿತ್ರಿ ರವರಿಗೆ ಟಾಟಾ ಏಸ್‌ ಟೆಂಪೋ ತಾಗಿ ಮುಬಾರಕ್‌ ಹಣೆಯ ಮೇಲ್ಬಾಗದಲ್ಲಿ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಎದೆಯ ಕೆಳಭಾಗದಲ್ಲಿ ಗುದ್ದಿದ ಜಖಂ ಆಗಿದ್ದು, ಅಲ್ಲದೇ ಸಾವಿತ್ರಿ ಗೆ ಎಡಭುಜ, ಎಡಸೊಂಟಕ್ಕೆ ಒಳ ಜಖಂ ಆಗಿದ್ದು ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಆಟೋರಿಕ್ಷಾದಲ್ಲಿ ಹೈಟೆಕ್‌ ಆಸ್ಪತ್ರಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಫಾತಿಮಾ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2014 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 06/10/2014 ರಂದು ಮದ್ಯಾಹ್ನ 14:15 ಗಂಟೆಗೆ ಪಿರ್ಯಾದಿದಾರರಾದ ಶಬೀದ್‌ (26) ತಂದೆ ದಿ. ಮೂಸಾ ವಾಸ: ತಿಡಿಲ್ ಹೌಸ್ ನಿಯರ್ಬಿಬಿ ರಸ್ತೆ ಕಾಞ್ಞಂಗಾಡ್ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ ಎಂಬವರು ತನ್ನ ಸಂಬಂಧಿ ಶಫೀರ್ ನೊಂದಿಗೆ ಮಂಗಳೂರಿನಿಂದ ಮಣಿಪಾಲ ಕಡೆಗೆ ರಾ ಹೆ 66 ರಲ್ಲಿ ತನ್ನ ಕಾರು ನಂಬ್ರ KL 60C 9911 ನೇದನ್ನು ಚಲಾಯಿಸಿಕೊಂಡು ಬರುತ್ತಾ ಕಟಪಾಡಿ ಪೆಟ್ರೋಲ್ ಬಂಕ್ ನಿಂದ ಸುಮಾರು 250 ಅಡಿ ಹಿಂದೆ ಕೂಡು ರಸ್ತೆ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಉಡುಪಿಯಿಂದ ಮಂಗಳೂರು ಕಡೆಗೆ ಲಾರಿ ನಂಬ್ರ KA17 A 9574 ನೇದನ್ನು ಅದರ ಚಾಲಕ ಪಕೀರಪ್ಪ ಎಂಬವರು ಲಾರಿಯನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರಸ್ತೆಯ ತೀರಾ ಪಶ್ಚಿಮ ಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಎದುರು ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಕಾರಿನಲ್ಲಿದ್ದ ಶಫೀರ್ ರವರು ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಶಬೀದ್ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 199/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೊಲ್ಲೂರು: ದಿನಾಂಕ 06/10/2014 ರಂದು ಹಗಲು 12:45 ಗಂಟೆಗೆ ಪಿರ್ಯಾದಿದಾರರಾದ ಅಭಿಜಿತ್ ಶೆಟ್ಟಿ (23) ತಂದೆ: ಗಣಪಯ್ಯ ಶೆಟ್ಟಿ ವಾಸ: ನಡುಬೆಣ್ಕಲ್  ಇಡೂರು ಕುಂಜ್ಙಾಡಿ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಾವನಾದ ರಾಜೀವ್ ಶೆಟ್ಟಿ (48) ಎಂಬವರು ಚಿತ್ತೂರು ಗ್ರಾಮದ ಚಿತ್ತೂರು ಬಸ್ ನಿಲ್ದಾಣದಲ್ಲಿ ಇಡೂರಿಗೆ ಹೋಗುವರೆ ಬಸ್ಸಿಗಾಗಿ ಕಾಯುತ್ತಿದ್ದಾಗ ಕೊಲ್ಲೂರು ಕಡೆಯಿಂದ ಕೆ,ಎಲ್,07.ಬಿ,ವಿ2816 ನೇ ಕಾರನ್ನು ಅದರ ಚಾಲಕ ಅನಿಲ್ ಕುಮಾರ್ ಎಂಬಾತ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದುದರ ಪರಿಣಾಮ ಕಾರು ತೀರಾ ಬಲ ಬದಿಗೆ ಸಾಗಿ ಬಂದು ರಾಜೀವ್ ಶೆಟ್ಟಿ ರವರನ್ನು ಡಿಕ್ಕಿ ಹೊಡೆದುದರಿಂದ ರಾಜೀವ ಶೆಟ್ಟಿರವರು ರಸ್ತೆಗೆ ಬಿದ್ದು ತಲೆಯ ಬಲ ಕೆನ್ನೆಗೆ ರಕ್ತಗಾಯ ಹಾಗೂ ಬಲಭುಜದ ಬಳಿ ಗಾಯವಾಗಿದ್ದು ಸದ್ರಿಯವರು ವಿನಯ ಆಸ್ಪತ್ರೆಯಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಅಭಿಜಿತ್ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

  • ಶಂಕರನಾರಾಯಣ: ದಿನಾಂಕ 06/10/2014 ರಂದು 15:15 ಗಂಟೆಗೆ ಆರೋಪಿ ಗಣೇಶ್ ಶೆಟ್ಟಿ ತಂದೆ: ರಘುರಾಮ ಶೆಟ್ಟಿ ವಾಸ: ತಟ್ಟುವಟ್ಟು, ಕುಂದಾಪುರ ತಾಲೂಕು ಎಂಬಾತನು ಕುಂದಾಪುರ ತಾಲೂಕು 28 ಹಾಲಾಡಿ ಗ್ರಾಮದ ಹನುಮಂತ ಎಂಬವರ ಮನೆಯ ಹತ್ತಿರ ಫಿರ್ಯಾದಿದಾರರಾದ ಕೆ ಕೃಷ್ಣಯ್ಯ (59) ತಂದೆ ದಿ: ಅನಂತ ಶೆಟ್ಟಿ ವಾಸ: ಸಟ್ಟಾಗಿ ಕುಂದಾಪುರ ತಾಲೂಕು ಎಂಬವರ ಪರಿಚಯದ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುತ್ತಿದ್ದು, ಇದನ್ನು ಕಂಡ ಫಿರ್ಯಾದಿದಾರರು ಆರೋಪಿಯಲ್ಲಿ ಅವರಿಗೆ ಸುಮ್ಮನೆ ಯಾಕೆ ಆ ರೀತಿ ಹೊಡೆಯುತ್ತೀರಿ, ದಯವಿಟ್ಟು ಹೊಡೆಯಬೇಡಿ ಎಂದಿದ್ದಕ್ಕೆ ಆರೋಪಿಯು ಫಿರ್ಯಾದಿದಾರರ ತಲೆಯ ಎಡಭಾಗಕ್ಕೆ ಹೊಡೆದು, ಗಲ್ಲಕ್ಕೆ ತುಳಿದು ಕಾಲು ಮುರಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿದೆ ಎಂಬುದಾಗಿ ಕೆ ಕೃಷ್ಣಯ್ಯ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2014 ಕಲಂ 323, 341, 324, 355, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಇತರೇ ಪ್ರಕರಣ

  • ಗಂಗೊಳ್ಳಿ:  ಹೆರಿಯ ದೇವಾಡಿಗ ಪ್ರಾಯ 64 ವರ್ಷ ತಂದೆ ಗೋವಿಂದ ದೇವಾಡಿಗ ವಾಸ ಸೇನಾಪುರ, ಸೇನಾಪುರ  ಗ್ರಾಮ ಕುಂದಾಪುರ ತಾಲೂಕು ಎಂಬವರು ತನ್ನ ಮಗಳು  ಅನಿತಾ 28 ವರ್ಷ ಎಂಬವಳನ್ನು ಸಂಪ್ರದಾಯದಂತೆ ಗುರುಹಿರಿಯರ ಸಮ್ಮುಖದಲ್ಲಿ  ಭಾಸ್ಕರ ದೇವಾಡಿಗ ಎಂಬವನಿಗೆ  ಕೊಟ್ಟು ದಿನಾಂಕ  15/04/2012 ರಂದು  ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಮದುವೆಮಾಡಿದ್ದು, ಮದುವೆಯ ನಂತರ ಅನಿತ ಗಂಡನ ಜೊತೆಯಲ್ಲಿ ಸಂಸಾರಮಾಡಿಕೊಂಡು ಬೆಂಗಳೂರಿನದ್ದು  ಭಾಸ್ಕರನು ಪದೇ ಪದೇ ಬಂದು ಅನಿತಳಿಗೆ 10 ಲಕ್ಷ ರೂ ವರದಕ್ಷಿಣೆ ಹಣ ತರುವಂತೆ  ಮಾನಸಿಕ ಹಿಂಸೆ ನೀಡಿ ಹೋಗುತ್ತಿದ್ದನು. ದಿನಾಂಕ 03/10/14 ರಂದು ಭಾಸ್ಕರನು ಅನಿತಳಿಗೆ 10 ಲಕ್ಷ ರೂ ವರದಕ್ಷಿಣೆ ಹಣ ತಂದಲ್ಲಿ ಜೊತೆಯಲ್ಲಿ ಕರೆದುಕೊಂಡು ಹೋಗುವುದಾಗಿಯೂ ಇಲ್ಲವಾದಲ್ಲಿ ನನ್ನ ಮನೆಯಲ್ಲಿಯೇ ಬಿದ್ದರು ಎಂದು ಮನಸಿಗೆ ನೋವಾಗುವಂತೆ ಬೈದು ಹೊರಟುಹೋಗಿದ್ದು  ಆ ಬಳಿಕ ಅನಿತ ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದಳು ಅದೇ ನೋವಿನಲ್ಲಿ  ದಿನಾಂಕ: 06/10/14 ರಂದು ಮಧ್ಯಾಹ್ನ  12-30 ಗಂಟೆಯಿಂದ 1-00 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಸೇನಾಪುರ ನಿರ್ಮಿತ ಕಂಪೌಂಡ್ ಎಂಬಲ್ಲಿ ಯಾವುದೋ ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ:  173/2014 ಕಲಂ 498(A), 304(B)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: