Monday, October 06, 2014

Daily Crime Reports as on 06/10/2014 at 17:00 Hrsಕಳವು ಪ್ರಕರಣ

  • ಮಣಿಪಾಲ: ದಿನಾಂಕ 05-10-14ರಂದು ರಾತ್ರಿ 20:30 ಗಂಟೆಯಿಂದ ದಿನಾಂಕ 06-10-14ರ ಬೆಳಿಗ್ಗೆ 05:30ಗಂಟೆಯ ಮಧ್ಯಾವಧಿಯಲ್ಲಿ ಸರಳಬೆಟ್ಟು, ಶಿವಪಾಡಿಯಲ್ಲಿರುವ ಶ್ರೀಉಮಾ ಮಹೇಶ್ವರದಿ ದೇವಸ್ಥಾನಕ್ಕೆ ಯಾರೋ ಕಳ್ಳರು ಒಳ ಪ್ರವೇಶಿಸಿ ದೇವಸ್ಥಾನದಲ್ಲಿದ್ದ 1)ದೇವರ ಬೆಳ್ಳಿಯ ದೃಷ್ಟಿಗಳು 5, 2)ಬೆಳ್ಳಿಯ ದೊಡ್ಡ ಹರಿವಾಣ-1, 3)ಬೆಳ್ಳಿಯ ಕವಳಿಗೆ-1, 4)ಬೆಳ್ಳಿಯ ಚಿಕ್ಕ ಹರಿವಾಣ-1, 6) ಬೆಳ್ಳಿಯ ಸಂಪುಟ ತಟ್ಟೆ-1, 7)ಹುಂಡಿಯ ಹಣ ಅಂದಾಜು ರೂ 10000/-ನ್ನು ಕಳವು ಮಾಡಿಕೊಂಡು ಹೋಗಿದ್ದಾಗಿರುತ್ತದೆ. ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 171/14 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 05/10/2014 ರಂದು ಸಂಜೆ 07:30 ಗಂಟೆಯ ವೇಳೆಗೆ ಕುಂದಾಪುರ ತಾಲುಕು ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿನ ಮಹಾಗಣಪತಿ ದೇವಸ್ಥಾನದ ಎದುರುಗಡೆ ಇರುವ ರಾ.ಹೆ 66 ರಲ್ಲಿ ಬೈಂದೂರು ಕಡೆಯಿಂದ ಕುಂದಾಪುರದ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾನಸಿಕ ಅಸ್ವಸ್ಥನಾದ ಮಹಮ್ಮದ್‌ ಜಾಫರ್‌ ಎಂಬುವವನಿಗೆ ಡಿಕ್ಕಿಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಸ್ಥಳದಲ್ಲಿ ಇದ್ದ ಪಿರ್ಯಾಧಿ ಇಸ್ಮಾಯಿಲ್‌ ರವರು ಅಪಘಾತದಿಂದ ತೀವೃವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಮ್ಮದ್‌ ಜಾಫರ್‌ ಎಂಬುವವರನ್ನು ಒಂದು ಅಂಬುಲೆನ್ಸ ವಾಹನವನ್ನು ತರಿಸಿ ಚಿಕಿತ್ಸೆಯ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಯ ಕಡೆಗೆ ಕಳುಹಿಸಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಸಮಯ ಸುಮಾರು ಸಂಜೆ 07:50 ಗಂಟೆಗೆ ಮಹಮ್ಮದ್‌ ಜಾಫರನು ಮೃತ ಪಟ್ಟಿರುವುದಾಗಿದೆ ಹಾಗೂ ಅಪಘಾತ ನಡೆಸಿದ ಕಾರನ್ನು ಅದರ ಚಾಲಕನು ಅಪಘಾತ ನಡೆಸಿದ ಬಳಿಕ ನಿಲ್ಲಿಸದೇ ಹಾಗೂ ಅಪಘಾತದಿಂದ ತೀವೃವಾಗಿ ಗಾಯಗೊಂಡ ಮಹಮ್ಮದ್‌ ಜಾಫರನಿಗೆ ಚಿಕಿತ್ಸೆ ಕೊಡಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ  ಬೈಂದೂರು  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/14 ಕಲಂ:  279, 304()  ಐಪಿಸಿ    134(ಎ)(ಬಿ) & 187  ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಮಾಸೆಬೈಲು: ಜಯರಾಮ ಶೆಟ್ಟಿ ಎಂಬುವವರು ಸುಮಾರು ವರ್ಷದ ಹಿಂದಿನಿಂದ ಹೊಟ್ಟೆನೋವು ಕಾಯಿಲೆ ಇದ್ದು ಹಾಗೂ ಸ್ವಲ್ಪ ಮದ್ಯ ಪಾನ ಸೇವಿಸುವ ಅಭ್ಯಾಸವಿದ್ದು ಹೊಟ್ಟೆನೋವಿಗೆ ಚಿಕಿತ್ಸೆ ಮಾಡುತಿದ್ದು ಗುಣ ಮುಖವಾಗದೇ ಇದ್ದು,  ದಿನಾಂಕ 05/10/2014 ರಂದು ರಾತ್ರಿ 7:30 ಗಂಟೆಗೆ ಮನೆಯಲ್ಲಿ ಯಾವುದೇ ವಿಷ ಪಧಾರ್ಥ ಸೇವಿಸಿ ಮೃತ ಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ 11/2014 ಕಲಂ: 174 ಸಿ.ಅರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: