Sunday, October 05, 2014

Daily Crime Reports as on 05/10/2014 at 17:00 Hrs

ಅಪಘಾತ ಪ್ರಕರಣಗಳು :
  • ಬ್ರಹ್ಮಾವರ : ದಿನಾಂಕ 02/10/2014 ರಂದು16.30 ಗಂಟೆಗೆ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಶಿರೂರು ಮೂರು ಕೈ ಬಳಿ ಆರೋಪಿ ಕೃಷ್ಣಮೂರ್ತಿ ಶಟ್ಟಿಯು ಮೈರುಕೋಮೆ ಕಡೆಯಿಂದ ತನ್ನ ಬಾಬ್ತು ಕೆಎ-20-ಪಿ-9115ನೇ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕೆಎ-20-ಎಸ್-5338 ನೇ ಮೊಟಾರು ಸೈಕಲಿಗೆ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಹಾಗೂ ಸಹ ಸವಾರಿ ಮಾಡುತ್ತಿದ್ದ ಪಿರ್ಯಾದಿ ದಿವ್ಯ ಎಂ ಶೆಟ್ಟಿ, ವಾಸ: ನಿತಿನ್ ಹೌಸ್, ಬನ್ನಾಡಿ ಅಂಚೆ, ಬನ್ನಾಡಿ ಗ್ರಾಮ ಉಡುಪಿ ತಾಲೂಕು ಹಾಗೂ ಮಕ್ಕಳು ರಸ್ತೆಗೆ ಬಿದ್ದು ಪರಿಣಾಮ ದಿವ್ಯರವರ ಗಂಡ ಮಹೇಶ್ ಶೆಟ್ಟಿಯವರಿಗೆ ತೀವ್ರ ಸ್ವರೂಪದ ಗಾಯ ಹಾಗೂ ದಿವ್ಯ ಮತ್ತು ಅವರ ಮಕ್ಕಳಿಗೆ ಸಾದಾ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ದಿವ್ಯ ಶೆಟ್ಟಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆ ಅಪರಾದ ಕ್ರಮಾಂಕ 185/14 ಕಲಂ. 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 
  • ಹಿರಿಯಡ್ಕ : ಮೋಹನ ಸಿ.ವಿ. ತಂದೆ; ಎಸ್‌.ಎಮ್‌ ಚಂದ್ರ ರೆಡ್ಡಿ ವಾಸ; ನಂ 40, ಗುಳ್ಳರೆಡ್ಡಿ ಲೇಔಟ್‌, ಚಂದಾಪುರ ಆನೆಕಲ್ಲ್‌ ತಾಲೂಕು ಬೆಂಗಳೂರು ಇವರು ಕುಟುಂಬ ಸಮೇತ ತನ್ನ ಬಾಬ್ತು ಕೆಎ 51 ಎಮ್‌ಬಿ 1231 ನೇ ಕಾರನ್ನು  ಚಲಾಯಿಸುತ್ತಾ  ಉಡುಪಿಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿರುವಾಗ, ದಿನಾಂಕ 04/10/14 ರಂದು ಸಂಜೆ 04-30 ಗಂಟೆಗೆ ಬೊಮ್ಮರ ಬೆಟ್ಟು ಗ್ರಾಮದ ಗುಡ್ಡೆಯಂಗಡಿ ಸಮೀಪದ ಮುತ್ತುರ್ಮೆ ಕ್ರಾಸ್‌ ಬಳಿ ತಲುಪುವಾಗ ಅವರ ಎದುರು ಬದಿಯಿಂದ ಅಂದರೆ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಕೆಎ 20 ಪಿ 1570 ನೇ ಮಾರುತಿ ಆಲ್ಟೋ ಕಾರನ್ನು ಅದರ ಚಾಲಕ ರಮೇಶ ಕೋಟ್ಯಾನ್‌ ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ಮೋಹನ್‌ರವರ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು ಅಲ್ಲದೆ ಆರೋಪಿ ರಮೇಶ ಕೋಟ್ಯಾನ್‌ ಕೂಡ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಮೋಹನ್‌ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆ  ಅಪರಾದ ಕ್ರಮಾಂಕ 93/14 ಕಲಂ. 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.  
  • ಕುಂದಾಪುರ : ದಿನಾಂಕ 05/10/2014 ರಂದು ಸಮಯ  ಸುಮಾರು ಬೆಳಿಗ್ಗೆ  7:00  ಗಂಟೆಗೆ, ಕುಂದಾಪುರ  ತಾಲೂಕು  ವಡೇರಹೋಬಳಿ ಗ್ರಾಮದ,  ಬಿಸಿ ರಸ್ತೆಯ  ಹುಣ್ಸೆಕಟ್ಟೆ  ಸೇತುವೆಯ ಬಳಿ ರಾಜ್ಯ  ರಸ್ತೆಯಲ್ಲಿ, ಆಪಾದಿತ  ಅಮ್ಸರ್‌  ಎಂಬವರು KA20-C-3688ನೇ ಇನ್ಸುಲೇಟರ್‌ ಲಾರಿಯನ್ನು ಕುಂದಾಪುರ ಕಡೆಯಿಂದ ಬಸ್ರೂರು ಕಡೆಗೆ ಅತೀವೇಗ  ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಕೊಂಡು ಬಂದು, ಉಮೇಶ್ ಡಿ ಪೂಜಾರಿ, ತಂದೆ ದೇವಪ್ಪ ಪೂಜಾರಿ ವಾಸ: ಗೌಡಿ ನಿಲಯ, ನಾವುಂದ ಗ್ರಾಮ  &  ಅಂಚೆ ಕುಂದಾಪುರ  ತಾಲೂಕು ಇವರು ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  KA20-V-4586ನೇ ಬೈಕನ್ನು ಓವರ್‌ಟೇಕ್‌ ಮಾಡುತ್ತಿರುವಾಗ, ಎದುರುಗಡೆ ಯಿಂದ ಬಂದ ಕಾರನ್ನು ನೋಡಿ ಆಪಾದಿತ ಚಾಲಕ ಅಮ್ಸರ್‌ನು ವಾಹನವನ್ನು ಒಮ್ಮಲೆಯ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಉಮೇಶ್ ಡಿ ಪೂಜಾರಿರವರ ಬೈಕಿಗೆ ಹಿಂಬದಿಯಿಂದ ಅಪಘಾತಪಡಿಸಿದ ಪರಿಣಾಮ ಉಮೇಶ್ ಡಿ ಪೂಜಾರಿಯವರು ಬೈಕ್‌  ಸಮೇತ ರಸ್ತೆಗೆ ಬಿದ್ದು ಅವರ ಬಲಭುಜಕ್ಕೆ ಒಳನೋವು ಹಾಗೂ ಮೈ ಕೈಗೆ ಒಳನೋವು ಉಂಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿವೇಕ ಆಶ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಉಮೇಶ್ ಡಿ ಪೂಜಾರಿರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆ ಅಪರಾದ ಕ್ರಮಾಂಕ 121/14 ಕಲಂ. 279,337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
  • ಬೈಂದೂರು : ದಿನಾಂಕ 04-10-2014 ರಂದು ರಾತ್ರಿ 08:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಬೀಜೂರು ಗ್ರಾಮದ ಮೇಲ್ತಾರು ಮನೆಯ ಬಳಿ ಇರುವ ರಸ್ತೆಯಲ್ಲಿ ಆಪಾಧಿತ ದಶರಥನು KA 20 X 1860 ನೇ ಮೋಟಾರ್‌ ಸೈಕಲ್‌ನ್ನು ಗಂಟಿಹೊಳೆ ಕಡೆಯಿಂದ ಉಪ್ಪುಂದ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಜುನಾಥ ತಂದೆ: ದಿ/ರಾಮ ಪೂಜಾರಿ ವಾಸ: ಬಾಳೆಮನೆ, ಕಬ್ಸೆ ಕಾಲ್ತೋಡು ಗ್ರಾಮ ಕುಂದಾಪುರ ಇವರ ಎದುರಿನಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ಅಣ್ಣಪ್ಪ ಪೂಜಾರಿಯವರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಣ್ಣಪ್ಪ ಪೂಜಾರಿಯವರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ತಲೆಗೆ ಪೆಟ್ಟಾಗಿರುತ್ತದೆ. ಕೂಡಲೇ ಅಣ್ಣಪ್ಪ ಪೂಜಾರಿಯವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿನ್ಮಯಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಅಣ್ಣಪ್ಪ ಪೂಜಾರಿಯವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 05/10/2014 ರಂದು ಬೆಳಿಗ್ಗೆ 09:15 ಗಂಟೆಗೆ ಅಣ್ಣಪ್ಪ ಪೂಜಾರಿಯವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಮಂಜುನಾಥರವರು ನೀಡಿದ ದೂರಿನಂತೆ ಬೈಂದೂರು ಠಾಣೆ ಅಪರಾದ ಕ್ರಮಾಂಕ 203/14 ಕಲಂ. 279,304(A) ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣಗಳು :
  • ಕೋಟ : ಮಂಜುನಾಥ ನ್ಯಾರಿ ಪ್ರಾಯ;37 ವರ್ಷ ತಂದೆ;ರಾಮ ನ್ಯಾರಿ  ವಾಸ;ಶ್ರೀಕೃಷ್ಣ ಕುಂಜಿಗುಡಿಬೆಟ್ಟು,ಕಾರ್ಕಡ ಗ್ರಾಮ ,ಉಡುಪಿ ಇವರ ತಾಯಿಯಾದ ಸುಮಾರು 75 ವರ್ಷ ಪ್ರಾಯದ ಗಿರಿಜಾ ರವರಿಗೆ ಕಣ್ಣಿನ ದೃಷ್ಟಿ ದೋಷವಿದ್ದು ಈ ಬಗ್ಗೆ ಸುಮಾರು 3 ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡಿದ್ದರು. ದಿನಾಂಕ  04/10/2014 ಗಿರಿಜಾ ರವರು ರಾತ್ರಿ ಸಮಯ ಸುಮಾರು 09.30 ಗಂಟೆಗೆ ಉಡುಪಿ ತಾಲೂಕು ಕಾರ್ಕಡ ಗ್ರಾಮದ ಕುಂಜಿಗುಡಿಬೆಟ್ಟು ಎಂಬಲ್ಲಿರುವ ತನ್ನ ಮನೆಯಲ್ಲಿ ರಾತ್ರಿ ಮಲಗಿದ್ದವರು ಮೂತ್ರ ವಿಸರ್ಜನೆಗೆಂದು ಮನೆಯ ಹೊರಗಡೆ ಅಂಗಳಕ್ಕೆ ಬಂದಾಗ ಕಣ್ಣಿನ ದೃಷ್ಟಿ ದೋಷದಿಂದ  ಮನೆಯ ಅಂಗಳದಲ್ಲಿರುವ ಆವರಣವಿಲ್ಲದ ನೀರು ತುಂಬಿದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಂಜುನಾಥರವರು ನೀಡಿದ ದೂರಿನಂತೆ ಕೋಟಾ ಠಾಣೆ ಯುಡಿಆರ್‌ ಕ್ರಮಾಂಕ 46/14 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ.  
  • ಕಾರ್ಕಳ ನಗರ : ರಾಜು ಶೆಟ್ಟಿ, ತಂದೆ: ದಿ ಪೂವಪ್ಪ ಶೆಟ್ಟಿ, ವಾಸ: ಜನನಿ ನಿವಾಸ,ಏದೊಟ್ಟು.ರೆಂಜಾಳ ಗ್ರಾಮ, ಕಾರ್ಕಳ ಇವರ ಹೆಂಡತಿಯ ತಮ್ಮ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಬಲಿಪಾರ ಪಾಡಿ  ನಿವಾಸಿ 50 ವರ್ಷ ಪ್ರಾಯದ ಸುಧಾಕರ ಶೆಟ್ಟಿ ಎಂಬವರು ದಿನಾಂಕ ತನಗಿರುವ ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಬೇಸತ್ತು ದಿನಾಂಕ: 04/10/2014 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ :05/10/2014ರ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಮನೆ ಸಮೀಪದ ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಾಜು ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ನಗರ  ಠಾಣೆ  ಯುಡಿಆರ್‌ ಕ್ರಮಾಂಕ 43/14 ಕಲಂ.174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ.   
  • ಬ್ರಹ್ಮಾವರ : ದಿನಾಂಕ: 04/10/2014 ರಂದು 09.00 ಗಂಟೆಯಿಂದ ದಿನಾಂಕ: 05/10/2014 ರಂದು 09.00 ಗಂಟೆಯ ಮದ್ಯದ ಅವಧಿಯಲ್ಲಿ ಆನಂದ ಆಚಾರ್ಯ ತಂದೆ: ದಿ. ಗಣಪಯ್ಯ ಆಚಾರ್ಯ ವಾಸ: ಮಾತೃಶ್ರೀ ಕೃಪಾ ನೀಲಾವರ ಗ್ರಾಮ  ಉಡುಪಿ ತಾಲೂಕು ಇವರ ಮನೆಯ ಹಿಂದುಗಡೆ ಇವರ ಅಣ್ಣನಾದ ಸುಮಾರು 57 ವರ್ಷ ಪ್ರಾಯದ ದೇವದಾಸ್ ಆಚಾರ್ಯ ಎಂಬವರು ವಿಪರೀತ ಅಮಲು ಸೇವನೆ ಮತ್ತು ಹಣದ ಅಡಚಣೆಯಿಂದ ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು  ಯಾವುದೋ ವಿಷ ಪದಾರ್ಥ ಸೇವಿಸಿ ಮನೆಯ ಹಿಂದುಗಡೆಯ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಆನಂದ ಆಚಾರ್ಯರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆ ಯುಡಿಆರ್‌ ಕ್ರಮಾಂಕ 52/14 ಕಲಂ.174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ.   
  • ಮಣಿಪಾಲ : ಕೆಂಚಪ್ಪ, ತಂದೆ: ಸಿದ್ದಪ್ಪ, ಕುಂಜಿಬೆಟ್ಟು, ಉಡುಪಿ ಇವರ ತಂದೆ ಸಿದ್ದಪ್ಪ(45)ರವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಅಭ್ಯಾಸವಿದ್ದು, ದಿ. 04.10.14ರಂದು ರಾತ್ರಿ 9:30ಗಂಟೆಗೆ ಮನೆಯಿಂದ ಹೋದವರು ವಾಪಸ್ಸು ಬಾರದೇ ಇದ್ದಾಗ ಕೆಂಚಪ್ಪರು ರಾತ್ರಿ 10:00ಗಂಟೆಗೆ ಪೋನ್‌ ಮಾಡಿ ಎಲ್ಲಿದ್ದೀರಿ ಎಂದು ವಿಚಾರಿಸಿದಾಗ ತಾನು ಮನೆಗೆ ಬರುವುದಿಲ್ಲ ಎಂದು ಪೋನ್‌ ಕಟ್‌ ಮಾಡಿರುತ್ತಾರೆ. ದಿನಾಂಕ 05-10-14ರಂದು ಬೆಳಿಗ್ಗೆ 07:30ಗಂಟೆಗೆ ಮಣಿಪಾಲ ಪೊಲೀಸ್‌ರವರು ಕೆಂಚಪ್ಪರವರ ತಂದೆಯ ಮೊಬೈಲ್‌ನಿಂದ ಪೋನ್‌ ಮಾಡಿ ಶಿವಳ್ಳಿ ಗ್ರಾಮದ ಪೆರಂಪಳ್ಳಿ ರೈಲ್ವೇ ಬ್ರಿಜ್ಡ್‌‌ನಲ್ಲಿ ಒಂದು ಅಪರಿಚಿತ ಶವ ಇದೆ ಬಂದು ನೋಡಿ ಎಂದು ಹೇಳಿದ್ದು, ಸದ್ರಿ ಸ್ಥಳಕ್ಕೆ ಬಂದು ನೋಡಲಾಗಿ ಸದ್ರಿ ಶವವು ತಂದೆ ಸಿದ್ದಪ್ಪರವರಾಗಿದ್ದಾಗಿರುತ್ತದೆ ಹಾಗೂ ತಂದೆ ಸಿದ್ದಪ್ಪರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿಯಿಂದ 2:30ಗಂಟೆಗೆ ರಾತ್ರಿ ಬಾರಕೂರು ಕಡೆಗೆ ಹೋಗುವ ರೈಲ್ವೇ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕೆಂಚಪ್ಪರವರು ನೀಡಿದ ದೂರಿನಂತೆ ಮಣಿಪಾಳ ಯುಡಿಆರ್‌ ಕ್ರಮಾಂಕ : 30/14 ಕಲಂ. 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: