Sunday, October 05, 2014

Daily Crime Reports as on 05/10/2014 at 10:00 Hrsಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 29/09/2014 ರಂದು 14:45 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಭೈರಂಪಳ್ಳಿ ಗ್ರಾಮದ ಕಂಚಿಗುಂಡಿ ಎಂಬಲ್ಲಿ KA20-S-6323 ನೇ ನಂಬ್ರದ ಪಲ್ಸರ್ ಬೈಕ್ ಸವಾರ ಪ್ರಕಾಶ್ ಆಚಾರ್ಯ ಎಂಬವರು ನಾಗರಾಜ್ ಆಚಾರ್ಯ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಪೆರ್ಡೂರು ಕಡೆಯಿಂದ ಹರಿಖಂಡಿಗೆ ಕಡೆಗೆ 407 ಟೆಂಪೋವನ್ನು ಓವರ್ ಟೇಕ್ ಮಾಡಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ  ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಬೈಕ್ ನಲ್ಲಿ ಸಹಸವಾರನಾಗಿದ್ದ ನಾಗರಾಜ ಆಚಾರ್ಯ ರವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಮ್,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2014 U/s 279,304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 04/10/2014 ರಂದು ಮದ್ಯಾಹ್ನ 02:30 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿಯ ವಿನಾಯಕ ಹೋಟೆಲ್‌ ಎದುರುಗಡೆ ಇರುವ ರಾ.ಹೆ 66 ರಲ್ಲಿ KA 20 W 3778 ನೇ ಮೋಟಾರ್‌ ಸೈಕಲನ್ನು ಅದರ  ಸವಾರನು ರತ್ನಾ ಹಾಗೂ ಸಂಜನಾ ಎಂಬುವವರನ್ನು ಸಹ ಸವಾರರನ್ನಾಗಿ  ಕುಳ್ಳಿರಿಸಿಕೊಂಡು ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ತ್ರಾಸಿಯಿಂದ ಬೈಂದೂರು ಕಡೆಗೆ KA 20 P 3071 ನೇ ಕಾರಿನ ಚಾಲಕನು ಆತನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ನಲ್ಲಿ ಇದ್ದ  ರತ್ನಾ, ಸಂಜನಾ ಹಾಗೂ ಪ್ರಕಾಶ್‌  ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಸಾದಾ ಹಾಗೂ ತೀವೃ ಸ್ವರೂಪದ ರಕ್ತ ಗಾಯವಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ  ಬೈಂದೂರು  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 204/2014  ಕಲಂ:  279, 337,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 03/10/2014 ರಂದು 19:30  ಗಂಟೆಯ ವೇಳೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ನಾವುಂದ ಪೆಟ್ರೋಲ್‌ ಬಂಕ್‌  ಎದುರುಗಡೆ ಇರುವ ರಾ.ಹೆ 66 ರಲ್ಲಿ ಪಿರ್ಯಾಧಿ ಮೊಹಮ್ಮದ್‌ ರನೀಮ್‌ ತನ್ನ ಬಾಬ್ತು  KA 19 EK 3928 ನೇ ಮೋಟಾರ್‌ ಸೈಕಲನ್ನು ಗೋಕರ್ಣ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ KA 53 Z 6905 ನೇ ನ್ಯಾನೋ ಕಾರಿನ ಚಾಲಕನು ಆತನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ನಲ್ಲಿ ಸವಾರಿ ಮಾಡುತ್ತಿದ್ದ ಪಿರ್ಯಾಧಿದಾರರ ಬಲಕಾಲಿನ ತೊಡೆ, ಮಣಿಗಂಟಿಗೆ ತೀವೃ ಸ್ವರೂಪದ ರಕ್ತ ಗಾಯವಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ  ಬೈಂದೂರು  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 205/2014  ಕಲಂ:  279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ : ಹರೀಶ ಎಂಬವರು ದಿನಾಂಕ 04/10/2014ರಂದು ಅಲ್ಬಾಡಿ ಗ್ರಾಮದ ಆರ್ಡಿ ಅರುಣ ಕುಮಾರ್‌ ಶೆಟ್ಟಿಯವರ ಮನೆಗೆ ಹೊಂದಿಕೊಂಡಿರುವ ಬಾಡಿಗೆ ರೂಂ ನಲ್ಲಿ   ವಿಪರೀತ ಮದ್ಯ ಸೇವಿಸಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ 26/2014 ಕಲಂ: 174 ಸಿ.ಅರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: