Saturday, October 04, 2014

Daily Crime Reports as on 04/10/2014 at 17:00 Hrsಜೂಜು ಪ್ರಕರಣ

  • ಅಮಾಸೆಬೈಲು: ದಿನಾಂಕ 03/10/2014 ರಂದು 18:00 ಗಂಟೆಗೆ ರವಿ ಎನ್ ಎನ್ ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲು ಠಾಣೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ, ಸಿಬ್ಬಂದಿಯವರೊಡನೆ ಹೊಸಂಗಡಿ ಗ್ರಾಮದ ಬಾಳೆಜೆಡ್ಡು ಎಂಬಲ್ಲಿ ಹಾಡಿಯಲ್ಲಿ 18:45 ಗಂಟೆಗೆ ದಾಳಿ ನಡೆಸಿದಾಗ ಇಸ್ಪಿಟ್ ಎಲೆಗಳನ್ನು ಉಪಯೋಗಿಸಿ ಹಣವನ್ನು ಪಣವಾಗಿರಿಸಿ ಅಂದರ್- ಬಾಹರ್ ಜುಗಾರಿ ಆಟ ಆಡುತ್ತಿದ್ದು  5 ಆರೋಪಿಗಳಾದ  ಭುಜಂಗ ಶೆಟ್ಟಿ, ಸುಕುಮರ ಶೆಟ್ಟಿ, ನಾಗರಾಜ, ಪ್ರಕಾಶ, ಅಬ್ದುಲ್ ರೆಹಮನ್ ಇವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ ಪೇಪರ್, ಇಸ್ಪಿಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟ ನಗದು ರೂಪಾಯಿ 7900/- ಅನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 40/2014 ಕಲಂ 87 ಕೆ ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: