Saturday, October 04, 2014

Daily Crime Reports as on 04/10/2014 at 07:00 Hrs

ಕಳವು ಪ್ರಕರಣ
  • ಉಡುಪಿ: ದಿನಾಂಕ 03/10/2014 ರಂದು ಪಿರ್ಯಾದಿದಾರರಾದ ರತ್ನಾಕರ ಸುವರ್ಣ (45) ತಂದೆ ದಿ. ನಾಥು ಸುವರ್ಣ ವಾಸ ಕಂಗಿ ತೋಟ ಮಠದಬೆಟ್ಟು ಮೂಡನಿಂಡಂಬೂರು ಉಡುಪಿ ತಾಲೂಕು ರವರು ಮನೆಗೆ ಸಮಯ ಸುಮಾರು 11:45 ಗಂಟೆಗೆ ಬೀಗ ಹಾಕಿ ಬನ್ನಂಜೆ ನಾರಾಯಣಗುರು ಮಂದಿರದಲ್ಲಿ ನಡೆಯುವ ತಾಯಿಯ ವೈಕುಂಠ ಸಮಾರಾಧನೆ ಕಾರ್ಯಕ್ರಮಕ್ಕೆ ಹೋಗಿದ್ದು ಮಧ್ಯಾಹ್ನ 3.00 ಗಂಟೆಗೆ ಮನೆಗೆ ವಾಪಾಸು ಬಂದಾಗ ಮನೆಯ ಬೀಗ ಹಾಕಿದಂತೆ ಇದ್ದು, ರೂಮಿನಲ್ಲಿರುವ ಪಿರ್ಯಾದಿದಾರರ ಹೆಂಡತಿಯ ಗೋಡ್ರೇಜಿನಲ್ಲಿ ಇಟ್ಟಿದ (1) 4 ಪವನಿನ ಲಾಂಗ್ ಚೈನ್ – 1 ಅಂದಾಜು ಮೌಲ್ಯ 80,000/-, (2) ಲಕ್ಷೀಯ ಪೆಂಡೆಂಟ್ ಇರುವ 4 ಪವನಿನ ಚಿನ್ನದ ಸರ – 1  ಅಂದಾಜು ಮೌಲ್ಯ 80,000/-, (3) ಅರ್ಧ ಪವನಿನ ಬಿಳಿ ಕಲ್ಲಿನ ಬೆಂಡೋಲೆ ಜೊತೆ, ಅಂದಾಜು ಮೌಲ್ಯ 10,000/-,(4) ಬಂಗಾರದ ಬೆಂಡೋಲೆ 1 ಜೊತೆ ಅಂದಾಜು ಮೌಲ್ಯ 15,000/-, (5) 5 ಕಲ್ಲುಗಳಿರುವ ಅರ್ಧ ಪವನಿನ ಬಂಗಾರದ ಉಂಗುರ 1 ಜೊತೆ ಅಂದಾಜು ಮೌಲ್ಯ 10,000/-,ಮತ್ತು ನಗದು ರೂಪಾಯಿ 2,400 ಕಳವಾಗಿರುವುದಾಗಿದೆ, ಸದ್ರಿ ಕಳವನ್ನು ಮನೆಯ ಹಿಂಬದಿಯ ಮರದ ಕಿಟಿಕಿಯ 2 ರೀಪನ್ನು ಕಿತ್ತು ಯಾರೋ ಕಳ್ಳರು ಕಳವು ಮಾಡಿದ್ದು, ನಗದು ಸೇರಿ ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 1,97,400/- ಆಗಿರುತ್ತದೆ ಎಂಬುದಾಗಿ ರತ್ನಾಕರ ಸುವರ್ಣ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 282/2014 ಕಲಂ 454, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 ಜುಗಾರಿ ದಾಳಿ ಪ್ರಕರಣ
  • ಕುಂದಾಪುರ: ದಿನಾಂಕ 03/10/2014 ರಂದು 19:30 ಗಂಟೆಗೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ನಾಸೀರ್ ಹುಸೇನ್ ರವರು ಸಿಬ್ಬಂದಿಗಳೊಂದಿಗೆ ಕುಂದಾಪುರ ಕಸಬಾ ಗ್ರಾಮದ ಕುಂದಾಪುರ ಬೃಂದಾವನ ಹೋಟೇಲಿನ ಹಿಂದಿನ ಖಾಲಿ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟವಾಡುತ್ತಿದ್ದಲ್ಲಿಗೆ ದಾಳಿ ನಡೆಸಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ (1). ಸಂತೋಷ (44) ತಂದೆ: ಅಣ್ಣಪ್ಪಯ್ಯ ವಾಸ: ಕೋಡಿ ಕುಂದಾಪುರ ತಾಲೂಕು, (2) ಸುಧಾಕರ (48) ತಂದೆ:  ಬಚ್ಚಯ್ಯ ಶೆಟ್ಟಿ ವಾಸ: ಚಿಕ್ಕನ್‌ಸಾಲ್‌ ರಸ್ತೆ ಕುಂದಾಪುರ, (3) ಗುಂಡು (53) ತಂದೆ: ಹಿರಿಯಣ್ಣ ವಾಸ ಅಂಕದಕಟ್ಟೆ ಕೋಟೇಶ್ವರ ಕುಂದಾಪುರ ತಾಲೂಕು, (4) ಗಣೇಶ (48) ತಂದೆ: ಸದಾಶಿವ ವಾಸ: ಮಲ್ಯಾಡಿ ತೆಕ್ಕಟ್ಟೆ ಕುಂದಾಪುರ ತಾಲೂಕು, (5) ರಾಜು (45) ತಂದೆ:  ಕೃಷ್ಣಯ್ಯ ಶೆಟ್ಟಿ ವಾಸ: ಜೆ.ಎಲ್.ಬಿ .ರಸ್ತೆ  ಕುಂದಾಪುರ ತಾಲೂಕು, (6) ಅಜೀತ್ (41) ತಂದೆ: ನಾಗಯ್ಯ ಶೆಟ್ಟಿ ವಾಸ: ದೇವಲ್ಕುಂದ ಗ್ರಾಮ, ಕುಂದಾಪುರ ತಾಲೂಕು, (7) ಯೋಗೇಶ (65) ತಂದೆ: ದಿವಂಗತ ಶಾಂತಾ ಶೆಟ್ಟಿ ವಾಸ: ಹಕ್ಲಾಡಿ ಕುಂದಾಪುರ ತಾಲೂಕು, (8) ಸದಾನಂದ (56) ತಂದೆ: ಮಂಜಯ್ಯ ವಾಸ: ಕಟ್ಟಿಗೆ ಮನೆ ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ಆರೋಪಿತರ ವಶದಲ್ಲಿದ್ದ ಒಟ್ಟು 52 ಇಸ್ಪಿಟು ಕಾರ್ಡ್ ಮತ್ತು ನಗದು ರೂಪಾಯಿ 8,310=00 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 334/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: