Friday, October 03, 2014

Daily Crime Reports as on 03/10/2014 at 07:00 Hrs



ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 01.10.2014 ರಂದು ನಡ್ಸಾಲು ಗ್ರಾಮದ ಬಂಟರ ಭವನದ ಎದುರು ರಾ.ಹೆ 66 ರಲ್ಲಿ ಕೆಎ-19-ಇ.ಹೆಚ್-8000 ನೇ ಮೋಟಾರು ಸೈಕಲ್ ಸವಾರರಾದ ವೆಲ್ವಿನ್ ಕರ್ಕಡ ಎಂಬವರು ಮೋಟಾರು ಸೈಕಲ್ ನ್ನು ಕೆಳ ಪೇಟೆಯಿಂದ ಹಳೆಯಂಗಡಿ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಆಗಿ ನೆಲಕ್ಕೆ ಬಿದ್ದ ಪರಿಣಾಮ ತಲೆಯ ಹಿಂಬದಿಯ ಬಲ ಭಾಗಕ್ಕೆ ರಸ್ತೆ ತಾಗಿ ರಕ್ತಗಾಯವಾಗಿರುತ್ತದೆ ಹಾಗೂ ಕಾಲು ಮತ್ತು ಕೈಗಳಿಗೆ ತರಚಿದ ಗಾಯವಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಅಭಿರಾಮ್ (19) ತಂದೆ ಅಮರೇಂದ್ರ ಆಚಾರ್ಯ ವಾಸ ಸಂಸ್ಕ್ರತಿ, ಮಧ್ವನಗರ, ನಡ್ಸಾಲು ಗ್ರಾಮ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: