Wednesday, October 01, 2014

Daily Crime Reports as on 01/10/2014 at 19:30 Hrs

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ದಿನಾಂಕ 01/10/2014ರಂದು ಪಿರ್ಯಾದಿದಾರರಾದ ವಾಸು ದೇವಾಡಿಗ (48), ತಂದೆ ಬಾಡು ದೇವಾಡಿಗ, ವಾಸ ವಿಶ್ವ ನಿಲಯ ಪನಿಯೂರು ಬೆಳಪು ಗ್ರಾಮ ಉಡುಪಿ ಇವರು ಯಾರೋ ಸಾರ್ವಜನಿಕರು 15:00 ಗಂಟೆಗೆ ಪೋನ್‌ ಮಾಡಿ ಪಿರ್ಯಾದಿದಾರರ ಅಣ್ಣ ರಾಮ ದೇವಾಡಿಗರವರು ಬಸ್ಸ್‌‌ ನಿಲ್ದಾಣದಲ್ಲಿ  ಕುಳಿತಲ್ಲಿಯೇ  ಕುಸಿದು ಬಿದ್ದಿದ್ದು ಅವರನ್ನು ಅಲ್ಲಿ ಸೇರಿದ ಜನರು 108 ವಾಹನದಲ್ಲಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು  ಪರೀಕ್ಷಿಸಿ ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ ಪಿರ್ಯಾದಿದಾರರು ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ ಅಣ್ಣ ರಾಮದೇವಾಡಿಗರ ಮೃತ ಶರೀರವಾಗಿರುತ್ತದೆ. ಪಿರ್ಯಾದಿದಾರರ ಅಣ್ಣ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾಯಿಲೆಯಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ವಾಸು ದೇವಾಡಿಗ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 60/14 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: