Wednesday, October 01, 2014

Daily Crime Reports as on 01/10/2014 at 17:00 Hrsಹುಡುಗಿ ಕಾಣೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶೇಖರ ದೇವಾಡಿಗ (54)  ತಂದೆ: ರಾಜು ದೇವಾಡಿಗ ವಾಸ: ಸೂಜಿ ಮನೆ ಹೊಸಪೇಟೆ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಗಳು ಶ್ವೇತಾ (21) ವರ್ಷ ಎಂಬವಳು ದಿನಾಂಕ 30.09.2014 ರಂದು ಬೆಳಿಗ್ಗೆ 09:00 ಗಂಟೆಗೆ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಈತನಕ ಬಾರದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ಶೇಖರ ದೇವಾಡಿಗ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2014 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಾಣೆಯಾದವಳ ಚಹರೆ: ಎತ್ತರ 5 ಅಡಿ ಗೋಧಿ ವರ್ಣ ಮೈ ಬಣ್ಣ ಕಿವಿಯಲ್ಲಿ ಅರ್ಟಿಫೀಶಿಯಲ್ ರಿಂಗ್, ಚೂಡಿದಾರ ಧರಿಸಿರುತ್ತಾಳೆ.
No comments: