Thursday, October 16, 2014

Daily Crime Reported As On 16/10/2014 At 17:00 Hrsಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿ ಜಮಾಲ್‌ರವರು ದಿನಾಂಕ 15/10/2014 ರಂದು ತನ್ನ ತಮ್ಮ ಮಹಮ್ಮದ್‌ರವರ ಮಗ ಫಯಾಜ್‌‌ನನ್ನು ಕರೆದುಕೊಂಡು ಮನೆಯ ಬಳಿಯ ಅಪೂರ್ವ ಕಾಂಪ್ಲೆಕ್ಸ್‌ ನ ಅಂಗಡಿಗೆ ಹೋಗಿ ಸಾಮಾನು ಖರೀದಿಸಿ ವಾಪಸ್ಸು ಮನೆಯ ಕಡೆಗೆ ಪೆರಂಪಳ್ಳಿ ದೊಡ್ಡಣಗುಡ್ಡೆಯ ರಸ್ತೆಯ ಬದಿಯಲ್ಲಿ ನಡೆದುಕೊಂಡು ಅಪೂರ್ವ  ಕಾಂಪ್ಲೆಕ್ಸ್‌‌ ನಿಂದ ಸ್ವಲ್ಪ ಮುಂದೆ ಬರುತ್ತಿರುವಾಗ್ಗೆ ಸಂಜೆ ಸುಮಾರು 6:00ಗಂಟೆಗೆ ಹಿಂದಿನಿಂದ ಪೆರಂಪಳ್ಳಿ ಕಡೆಯಿಂದ ಕೆಎ20ಡಬ್ಲ್ಯೂ9028ನೇ ಸ್ಕೂಟಿಯನ್ನು ಅದರ ಸವಾರ ಶ್ರೀಕಾಂತ್‌ರಾವ್‌ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಫಯಾಜ್‌‌ನಿಗೆ ಢಿಕ್ಕಿ ಹೊಡೆದನು,  ಪರಿಣಾಮ ಫಯಾಜ್‌ನು ರಸ್ತೆಗೆ ಬಿದ್ದು ಅವರ ತಲೆಗೆ ತೀವ್ರ ತರಹದ ರಕ್ತಗಾಯಗೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 174/2014 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಬ್ರಹ್ಮಾವರ:  ದಿನಾಂಕ: 16/10/2014 ರಂದು ಬೆಳಗ್ಗಿನ ಜಾವ 02.45 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಬಸ್ಸ್ ನಿಲ್ದಾಣದ ಬಳಿ ಆರೋಪಿ ಕಾರ್ತಿಕ್ ಕುಮಾರ್ ಎಮ್ (22) ತಂದೆ: ಮಹೇಂದ್ರ ವಾಸ: ನಾಗಪ್ಪ ಹೌಸ್ ಸ್ವತಂತ್ರ ನಗರ 2 ನೇ ಕ್ರಾಸ್ ಕೆ.ಆರ್.ಪುರಂ ಬೆಂಗಳೂರು, ಹಾಲಿ: ಹೆಬ್ಬೆಲಿಸಿನ ಕೊಡ್ಲು ನಂಚಾರು ಗ್ರಾಮ ಉಡುಪಿ ತಾಲೂಕು. ಈತನು ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಇದ್ದು  ಸಮವಸ್ತ್ರದಲ್ಲಿದ್ದ ಸುರೇಶ್ ಕುಮಾರ್ ಹೆಚ್.ಸಿ ಹಾಗೂ ಸಿಬ್ಬಂದಿಯವರನ್ನು ಕಂಡು ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ಇದ್ದುದರಿಂದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಆತನ ವಿರುದ್ಧ ಬ್ರಹ್ಮಾವರ ಅಪರಾಧ ಕ್ರಮಾಂಕ: 293/14 ಕಲಂ:109 ಸಿ.ಆರ್.ಪಿ.ಸಿ.ಯಂತೆ ಪ್ರಕರಣವನ್ನು ದಾಖಲಿಸಲಾಗಿದೆ.

No comments: