Thursday, October 16, 2014

Daily Crime Reported As On 16/10/2014 At 07:00 Hrs

ಜಾತಿ ನಿಂದನೆ ಪ್ರಕರಣ
  • ಉಡುಪಿ: ದಿನಾಂಕ 28/09/14 ರಂದು ಆರೋಪಿತ ಮ್ಯಾಕ್ಸಿಮ್ ಗೂ ಹಾಗೂ ಇಂದಿರಾ ನಗರದ ನಿವಾಸಿಗಳಿಗೂ ಗಲಾಟೆಯಾಗಿ ಇಂದಿರಾನಗರದ ನಿವಾಸಿಗಳಿಗೆ ಆರೋಪತನು ಚೂರಿ ಹಾಕಿದ್ದು, ಚೂರಿ ಇರಿತಕ್ಕೆ ಒಳಗಾದವರು ಪಿರ್ಯಾದಿದಾರರಾದ ಶಿವಾನಂದ [40] ತಂದೆ: ದಿ ನಾರಾಯಣ ವಾಸ: ಪೂಜಾ ನಿಲಯ,2ಬಿ,56ಬಿ ಇಂದಿರಾನಗರ ಕುಕ್ಕಿಕಟ್ಟೆ , 76 ಬಡಗುಬೆಟ್ಟು ಗ್ರಾಮ ಉಡುಪಿ ತಾಲುಕು ರವರು ಇಂದಿರಾನಗರದವರಾಗಿರುವುದರಿಂದ ಇದನ್ನೆಲ್ಲ ಪಿರ್ಯಾದಿದಾರರು ಮಾಡಿಸುತ್ತಿರುವುದೆಂದು ದೂರು ನೀಡಿದ್ದು ದಿನಾಂಕ 14/10/2014 ರಂದು ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರು ಈ  ದೂರಿಗೆ ಸಂಬಂಧಿಸಿದಂತೆ ತನಿಖೆ ಬಗ್ಗೆ ವೃತ್ತ ನಿರೀಕ್ಷಕರ ಕಛೇರಿಗೆ ಎರಡು ಕಡೆಯವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದು, ಪಿರ್ಯಾದಿದಾರರು ವಿಚಾರಣೆಯನ್ನು ಮುಗಿಸಿ  ವೃತ್ತ ಕಛೇರಿಯ ಕಾಂಪೌಂಡ್ ಹೊರಗೆ ಬಂದಾಗ ಆರೋಪಿತರಾದ ಮ್ಯಾಕ್ಸಿಮ್ ಮತ್ತು ಆತನ ಹೆಂಡತಿ ವನಜಾಕ್ಷಿಯವರು ಪಿರ್ಯಾದಿದಾರರನ್ನು ಉದ್ದೇಶಿಸಿ ಆವಾಚ್ಯ ಶಬ್ಧಗಳಿಂದ ಬೈದು, ಜಾತಿ ನಿಂದನೆ ಮಾಡಿ, ಪಿರ್ಯಾದಿದಾರರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶಿವಾನಂದ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 294/14  ಕಲಂ 3(1)(10) ಎಸ್‌ಸಿ /ಎಸ್ಟಿ ಆಕ್ಟ್ , ಮತ್ತು 506,504,ಜೊತೆಗೆ 34  ಐ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಇತರ ಪ್ರಕರಣ
  • ಉಡುಪಿ: ದಿನಾಂಕ 27-09-14 ರಂದು ಫಿರ್ಯಾದಿದಾರರಾದ  ಮ್ಯಾಕ್ಸಿಮ್ ವಿಕ್ಟರ್ ಮೆನೆಜಸ್ [38]ತಂದೆ:ಬೆಂಜಮಿನ್ ಮೆನೆಜಸ್ ವಾಸ: ಶಾಂತಿ ನಿಲಯ ಬೋಳಾರಗುಡ್ಡೆ ಉದ್ಯಾವರ ಗ್ರಾಮ ಉಡುಪಿ ತಾಲೂಕು ರವರು ಮಧ್ಯಾಹ್ನ ಸುಮಾರು 2:30 ರ ಸಮಯಕ್ಕೆ ಉಡುಪಿ ಬನ್ನಂಜೆಯ ನಾರಾಯಣಗುರು ಮಂದಿರದ ಬಳಿ ರಿಕ್ಷಾದಲ್ಲಿ ಕುಳಿತ್ತಿದ್ದಾಗ ಉಡುಪಿಯ ಕುಕ್ಕಿಕಟ್ಟೆ ನಿವಾಸಿಗಳಾದ ಸಂತೋಷ್,ಕಿರಣ,ಸುರೇಶ,ಸುಧಾಕರ ಹಾಗೂ ಮತ್ತೋರ್ವರು ಪಿರ್ಯಾದಿದಾರರ ಬಳಿ ಬಂದು ಕುಕ್ಕಿಕಟ್ಟೆಗೆ ಹೋಗಲು ರಿಕ್ಷಾ ಬಾಡಿಗೆಗೆ ಕೇಳಿದ್ದು ಪಿರ್ಯಾದಿದಾರರು ಮೂವರಿಗೆ ಮಾತ್ರ ರಿಕ್ಷಾದಲ್ಲಿ ಹೋಗಲು ಒಪ್ಪಿಕೊಂಡಿದ್ದು, ಆರೋಪಿತರು ಯಾಕೇ ನೀನು 5 ಜನ ಹಾಕಿಕೊಳ್ಳುವುದಿಲ್ಲ.ಎಂದು ಕೇಳಿ ಆರೋಪಿತರು ಪಿರ್ಯಾದಿದಾರರ ಕುತ್ತಿಗೆಗೆ ಕೈಹಾಕಿ ಆ ಸಮಯ ಅವರಿಂದ ತಪ್ಪಿಸಿಕೊಳ್ಳಲು ಉರುಳಾಡಿದಾಗ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೈಯಲ್ಲಿದ್ದ ಬ್ರ್ಯಾಸ್ ಲೈಟ್,ನ್ನು ಆರೋಪಿತರು ಬಲವಂತವಾಗಿ ಲೂಟಿ ಮಾಡಿರುತ್ತಾರೆ ಹಾಗೂ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರುಗಟ್ಟುವಂತೆ ಮಾಡಿದ್ದು ಆ ಸಮಯ ಬೊಬ್ಬೆಹಾಕಿದಾಗ ಆರೋಪಿತರು ಓಡಿ ಹೋಗಿರುತ್ತಾರೆ ಪಿರ್ಯಾದಿದಾರರಿಗಾದ ಗಾಯದ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿಕೊಂಡಿರುತ್ತಾರೆ. ಈ ಕೃತ್ಯವೆಸಗಲು ಇಂದಿರಾ ನಗರದ ಶಿವಾನಂದ ಎಂಬವರ ಪಿತೂರಿಯಾಗಿರುತ್ತದೆ ಎಂಬುದಾಗಿ ಮ್ಯಾಕ್ಸಿಮ್ ವಿಕ್ಟರ್ ಮೆನೆಜಸ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 295/2014 ಕಲಂ 395 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಜುಗಾರಿ ಪ್ರಕರಣ
  • ಉಡುಪಿ: ದಿನಾಂಕ 15/10/14 ರಂದು ಸಂಜೆ 19:00 ಗಂಟೆಗೆ ಶ್ರೀ ಶ್ರೀಕಾಂತ್ ವೃತ್ತ ನಿರೀಕ್ಷಕರಿಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಪಕ್ಕ ಇರುವ ಶಾಂಭವಿ ಲಾಡ್ಜ್ ರೂಮ್ ನಂಬ್ರ 212 ರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವನ್ನು ಹಣವನ್ನು ಪಣವಾಗಿ ಕಟ್ಟಿ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ ತಮ್ಮ ಸಿಬ್ಬಂದಿಯೊಂದಿಗೆ ಇಲಾಖಾ ಜೀಪು ಕೆಎ 20ಜಿ 276 ರಲ್ಲಿ 19:50 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ 6 ಜನರು ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟು ಜೂಗಾರಿ ಆಟ ಆಡುತ್ತಿದ್ದರು ಅವರ ಹೆಸರು ಕೇಳಲಾಗಿ 1). ಶಂಬು ಅಮೀನ್ (57), 2). ವಾಸುದೇವ (70) 3). ಬಶೀರ್ (45), 4). ರೋನಾಲ್ಡ್ (40), 5) ಉದಯ ಕುಮಾರ್ (50), 6). ಬಿ ರಾಘವ ಸುವರ್ಣ (53) ಎಂಬುವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು, ಪಣವಾಗಿಟ್ಟ ನಗದು 600/-ರೂ ಅಂಗಶೋಧನೆಯಿಂದ 8,570/- ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 296/14  ಕಲಂ 80 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  
ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 15/10/2014 ರಂದು ಬೆಳಿಗ್ಗೆ ಸಮಯ 11.10 ಗಂಟೆಗೆ  ಪಿರ್ಯಾದಿದಾರರಾದ ಸುನೀಲ್‌ ಟಿ. (31) ತಂದೆ; ಮಂಗೇಶ್‌ ತಳೇಕರ್‌, ವಾಸ ಹಿರೇಸಿಟ್ಟ, ಬಾಡ, ನಂದನಗುಟ್ಟ ಪೋಸ್ಟ್‌ ಮತ್ತು ಗ್ರಾಮ, ಉ.ಕ. ಜಿಲ್ಲೆ, ಹಾಲಿ ವಾಸ ಡಯಾಸ್‌ ಕಂಪೌಂಡ್‌, ಕ್ರಿಸ್ತಜ್ಯೋತಿ ಚರ್ಚ್‌ ಬಳಿ, ಕೊರಂಗ್ರಪಾಡಿ, ಉಡುಪಿ ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 30 ಎಲ್ 8623 ನೇದರಲ್ಲಿ ಸಹಸವಾರರನಾಗಿ ಬೆನ್ ಸ್ಯಾಮ್ಸನ್ ರವರನ್ನು ಕುಳ್ಳರಿಸಿಕೊಂಡು ವೈಎಮ್ ಸಿಎ ಸಂಸ್ಥೆಯಿಂದ ಕಿನ್ನಿಮುಲ್ಕಿ ಕಡೆಗೆ ಹೋಗುತ್ತಾ ಬಿ,ವಿ ಡೇಸಾ ಮನೆ ಮುಂಬಾಗ ಗೋವಿಂದ ಕಲ್ಯಾಣ ಮಂಟಪ ಬಳಿ ಯು ಟರ್ನ ಮಾಡುವಾಗ ಮೋಟಾರ್ ಸೈಕಲ್ ನ ಬಲ ಇಂಡಿಕೇಟ್ ರನ  ಲೈಟ್ ಹಾಕಿ ಬಲಕ್ಕೆ ಹೋಗಲು ಸೂಚನೆ ನೀಡಿದಾಗ ಹಿಂದಿನಿಂದ ಉಡುಪಿ ತಾಲೂಕು ಕಛೇರಿ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ ಕೆಎ 19ಡಿ 5551ನೇ ಬಸ್ಸನ್ನು ಅದರ ಚಾಲಕ ಕೃಷ್ಣ ಮೂರ್ತಿ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿದಾರರ ಮೋಟಾರ್ ಸೈಕಲ್ ನ ಬಲ ಬದಿಯ ಹ್ಯಾಂಡಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರ ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲ ಅಣೆ ಬಲಮೊಣಕಾಲು ಹಾಗೂ ಎರಡು ಕೈ ಗಳಿಗೆ ರಕ್ತ ಗಾಯವಾಗಿದ್ದು ,ಸಹ ಸವಾರ ಬೆನ್ ಸ್ಯಾಮ್ಸನ್ ರವರಿಗೆ ಬಲ ಮುಂಗೈಗೆ ರಕ್ತಗಾಯವಾಗಿದ್ದು ,ಬಲಕಾಲಿನ ಬಳಿ ಒಳ ಜಖಂ ಆಗಿರುತ್ತದೆ. ಮತ್ತು ಅಲ್ಲಿ ಸೇರಿದವರ  ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇಲ್ಲಿ  ಒಳ ರೋಗಿಯಾಗಿ ದಾಖಲಿಸಿರುತ್ತಾರೆ . ಈ ಅಪಘಾತಕ್ಕೆ ಕೆಎ 19ಡಿ 5551ನೇ ಬಸ್ಸು ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣ ವಾಗಿರುತ್ತದೆ ಎಂಬುದಾಗಿ ಸುನೀಲ್‌ ಟಿ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 108/2014 ಕಲಂ 279, 337 ಐ.ಪಿ.ಸಿಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: