Wednesday, October 15, 2014

Daily Crime Reported As On 15/10/2014 At 17:00 Hrs



ಹಲ್ಲೆ ಪ್ರಕರಣ
  • ಉಡುಪಿ: ದಿನಾಂಕ 12/10/14 ರಂದು ಪಿರ್ಯಾದಿದಾರರಾದ ಭರತ ಪೂಜಾರಿ (42) ತಂದೆ ದಿ. ರಾಮ ಸಾಲಿಯಾನ್, ವಾಸ ರಾಮ ಸಾಲಿಯಾನ್ ನಿವಾಸ, ಸೋಮಯ್ಯ ಕಾಪೌಂಡ್ ಕೊರಂಗ್ರಪಾಡಿ ಉಡುಪಿ ಇವರು ರಾತ್ರಿ ಸುಮಾರು 8 ಗಂಟೆ ಸಮಯಕ್ಕೆ ಕೆಲಸ ಮುಗಿಸಿ ಕೊರಂಗ್ರಪಾಡಿ ಜಂಕ್ಷನ್ ಗೆ ಹೋಗುತ್ತಿದ್ದಾಗ ಪಿರ್ಯಾದಿದಾರರ ಪರಿಚಯದ ಆರೋಪಿ ವಿವೇಕ್ ಶೆಟ್ಟಿ ಎಂಬಾತನು ಪಿರ್ಯಾದಿದಾರರನ್ನು ಮನೆಗೆ ಬರುವಂತೆ ಒತ್ತಾಯಿಸಿ, ಒತ್ತಾಯ ಪೂರ್ವಕವಾಗಿ ಆರೋಪಿತನ ಬಾಬ್ತು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮನೆಯ ಹತ್ತಿರ ಕರೆದುಕೊಂಡು ಹೋಗಿ ಮನೆಯ ಹೊರಗೆ ಕುಳಿತುಕೊಳ್ಳುವಂತೆ ಹೇಳಿ ಸಮಯ ಸುಮಾರು ರಾತ್ರಿ 9:00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮನೆಯ ಹೊರಗೆ ಕುಳಿತುಕೊಂಡಿರುವಾಗ ಆರೋಪಿತನು ಮನೆಯ ಒಳಗೆ ಹೋಗಿ ಯಾವುದೋ ಒಂದು ಆಯುಧ ತೆಗೆದುಕೊಂಡು ಬಂದು ಪಿರ್ಯಾದಿದಾರರ ತಲೆಯ ಹಿಂಬದಿಗೆ ಹೊಡೆದ ಪರಿಣಾಮ ತಲೆಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರು ಅಲ್ಲಿಂದ ಓಡಿಕೊಂಡು ಮನೆಗೆ ಬಂದಿದ್ದು ಪಿರ್ಯಾದಿದಾರರ ತಮ್ಮ ಮಂಜುನಾಥ ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಪಿರ್ಯಾದಿದಾರರು ಆರೋಪಿತರ ತಾಯಿಯವರಿಗೆ ಬೈದಿರುತ್ತಾರೆ ಎಂಬ ಕಾರಣದಿಂದ ಹಲ್ಲೆ ಮಾಡಿರುವುದಾಗಿದೆ. ಪಿರ್ಯಾದಿದಾರರು ಬಿದ್ದು ಗಾಯವಾಗಿದೆ ಎಂದು ವೈದ್ಯರಲ್ಲಿ ತಿಳಿಸಿರುವುದರಿಂದ ಠಾಣೆಗೆ ದೂರು  ನೀಡುವುದು ತಡವಾಗಿದೆ  ಎಂಬುದಾಗಿ ಭರತ ಪೂಜಾರಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 291/14  ಕಲಂ 324 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ

  • ಕಾಪು: ದಿನಾಂಕ 15.10.2014 ರಂದು ಪಿರ್ಯಾದುದಾರರಾದ ಕೆ ಗುಣಾಕರ ಹೆಗ್ಡೆ (66) ತಂದೆ ದಿ. ನಾರಾಯಣ ಹೆಗ್ಡೆ ವಾಸ: ಶಾರಾದಾನಂದ ನಿಲಯಬಡಪಾಲು ಮನೆ ಕುಕ್ಕೆಹಳ್ಳಿ ಉಡುಪಿ ತಾಲೂಕು ಇವರು ತನ್ನ ಬಾಬ್ತು ಕೆಎ 20ಪಿ 1629ನೇ ಕಾರನ್ನು ಕಾಪು ಕಡೆಯಿಂದ ಉಡುಪಿ ಕಡೆಗೆ ರಾಹೇ 66ರ ಎಕಮುಖ ರಸ್ತೆಯಲ್ಲಿ ಹೋಗುತ್ತಿರುವಾಗ ಸುಮಾರು 00:25 ಗಂಟೆಗೆ ಮೂಡಬೆಟ್ಟು ಗ್ರಾಮದ ಪಂಚಾಯತ್‌ ಕಛೇರಿ ಬಳಿ ತಲುಪುತ್ತಿದ್ದಂತೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಒಂದು ರಿಕ್ಷಾ ಚಾಲಕ ಜೋಯ್ ಡಿ.ಸೋಜರವರು ತನ್ನ ಬಾಬ್ತು ರಿಕ್ಷಾವನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಎದುರು ಬದಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ರಸ್ತೆಯಲ್ಲಿ ಅಡ್ಡಬಿದ್ದು. ರಿಕ್ಷಾ ಚಾಲಕನ ಬಲಕೈ ಮಣಿಗಂಟಿನ ಬಳಿ ಹಾಗೂ ಎಡಕಾಲಿಗೆ ತರಚಿದ ಗಾಯವಾಗಿರುತ್ತದೆ, ಆತನಿಗೆ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ 108ನೇ ವಾಹನದಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಈ ಅಪಘಾತಕ್ಕೆ ರಿಕ್ಷಾ ಚಾಲಕನಾದ ಜೊಯ್‌ ಡಿಸೋಜ ಎಂಬವರು ತನ್ನ ಬಾಬ್ತು ಕೆಎ 20ಸಿ 1435ನೇ ರಿಕ್ಷಾವನ್ನು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಕೆ ಗುಣಾಕರ ಹೆಗ್ಡೆ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 204/2014 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಮನುಷ್ಯ ಕಾಣೆ ಪ್ರಕರಣ
  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಮೂಕಾಂಬು ಗಂಡ ಮಹಾಬಲ ವಾಸ ವಿನಾಯಕ ಶೋಮಿಲ್‌ ಹತ್ತಿರ, ಬಂದರ್‌, ಗಂಗೊಳ್ಳಿ ದಿನಾಂಕ: 15/10/2014 ರಂದು ಬೆಳಿಗ್ಗೆ 10:30 ಗಂಟೆಗೆ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು, ಸಾರಾಂಶವೆನೆಂದರೆ ಅವರ ಗಂಡ ಮಹಾಬಲ, ಪ್ರಾಯ 50 ವರ್ಷದವರು ಗಂಗೊಳ್ಳಿ ಹೊಳೆಯಲ್ಲಿ ದೋಣಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಕೆಲಸ ಮಾಢಿಕೊಂಡಿದ್ದು, ದಿನಾಂಕ 08/10/2014 ರಂದು ಬೆಳಿಗ್ಗೆ ಮನೆಯಿಂದ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದು, ರಾತ್ರಿಯಾದರೂ ಬಾರದೇ ಇರುವುದರಿಂದ ಬಂದರು ಹೊಳೆಯ ಬದಿ ಬಂದು ನೋಡಿದಾಗ ಬಂದರಿನ ಕಳುವಿನ ಬಾಗಿಲಿನಲ್ಲಿ ಅವರು ಮೀನು ಹಿಡಿಯುವ ದೋಣಿ ಕಟ್ಟಿ ಹಾಕಿದ ಹಾಗೇಯೆ ಇದ್ದು ಅವರ ಬಗ್ಗೆ ವಿಚಾರಿಸಿದ್ದಲ್ಲಿ ಪತ್ತೆಯಾಗಲಿಲ್ಲ. ಅವರು ಹೊರಗಡೆ ಹೋಗಿರಬಹುದೆಂದು ಅನುಮಾನಗೊಂಡು ಸಂಬಂಧಿಕರಲ್ಲಿ ಪರಿಚಯದವರಲ್ಲಿ ಈತನಕ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಎಂಬುದಾಗಿ ಶ್ರೀಮತಿ ಮೂಕಾಂಬು ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 177/2014 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಉಡುಪಿ: ದಿನಾಂಕ  15/10/2014 ರಂದು ಬೆಳಗ್ಗಿನ ಜಾವ ಶ್ರೀಮತಿ ಮೀನಾಕ್ಷಿ  ಪಿಎಸ್ಐ , ಉಡುಪಿ ನಗರ ಪೊಲೀಸ್ ಠಾಣೆ ಇವ್ರು ಸಿಬ್ಬಂದಿ ಜೊತೆಯಲ್ಲಿ ರಾತ್ರಿ  ರೌಂಡ್ಸ್‌ ಕರ್ತವ್ಯದಲ್ಲಿರುವ  ಸಮಯದಲ್ಲಿ 04-10  ಗಂಟೆಯ ಸಮಯಕ್ಕೆ ಉಡುಪಿ ಶ್ರೀಕೃಷ್ಣಮಠದ ಹತ್ತಿರ ಕನಕದಾಸ ರಸ್ತೆಯಲ್ಲಿ ಗಾಯತ್ರಿ ಜ್ಯವೆಲ್ಲರ್ಸ್ ಅಂಗಡಿಯ ಹತ್ತಿರ ಒಬ್ಬ  ವ್ಯಕ್ತಿ  ತನ್ನ  ಇರುವಿಕೆಯನ್ನು ಮರೆಮಾಚಿಕೊಂಡು ಕತ್ತಲೆಯಲ್ಲಿ ಅವಿತು ಕುಳಿತಿದ್ದು ಟಾರ್ಚ್ ಬೆಳಿಕಿನಿಂದ ನೋಡಿದಾಗ  ಓಡಲು  ಪ್ರಯತ್ನಿಸಿದ್ದು  ಸಂಶಯಗೊಂಡು  ಸದ್ರಿ ವ್ಯಕ್ತಿಗೆ  ನಿಲ್ಲುವಂತೆ ಸೂಚಿಸಿದಾಗ ಆತನು  ಓಡಲು ಪ್ರಯತ್ನಿಸಿದ್ದು ಆಗ ಆತನನ್ನು ಬೆನ್ನಟ್ಟಿ  ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ  ತನ್ನ ಹೆಸರು ಮಿಥುನ್ ದಾಸ್ , ಪ್ರಾಯ 20 ವರ್ಷ , ತಂದೆ ಗೌತಮ್ ದಾಸ್ ವಾಸ ನಂಬರ್ 1 ಲಿಚುತಾಲಾ, ಥಾಣಾ ಕಲ್ಯಾಣಿ, ಸೊಗುನಾ ತಾಲೂಕು ಮತ್ತು ಜಿಲ್ಲೆ ಕಲ್ಕತ್ತಾ  ಎಂದು ತಿಳಿಸಿದ್ದು ಅಪರಾತ್ರಿಯಲ್ಲಿ  ಅಲ್ಲಿ ತನ್ನ  ಇರುವಿಕೆಯ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಲು ತಡವರಿಸುತ್ತಿದ್ದು ಅವನು  ಯಾವುದೋ  ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ  ತಮ್ಮ   ಇರುವಿಕೆಯನ್ನು ಮರೆಮಾಚಿಕೊಂಡು ಇರುವುದು ಕಂಡುಬಂದಿದ್ದು ಅವರನ್ನು  ದಸ್ತಗಿರಿಮಾಡಿ ಮುಂದಿನ ಕಾನೂನು ಕ್ರಮಕ್ಕಾಗಿ ಠಾಣೆಗೆ ಕರೆತಂದು ಅಪಾದಿತರ ವಿರುದ್ಧ 293/14 ಕಲಂ:109 ಸಿ.ಆರ್.ಪಿ.ಸಿ.ಯಂತೆ ಪ್ರಕರಣವನ್ನು ದಾಖಲಿಸಲಾಗಿದೆ.
  • ಉಡುಪಿ: ದಿನಾಂಕ  15/10/2014 ರಂದು ಬೆಳಗ್ಗಿನ ಜಾವ ಶ್ರೀಮತಿ ಮೀನಾಕ್ಷಿ  ಪಿಎಸ್ಐ , ಉಡುಪಿ ನಗರ ಪೊಲೀಸ್ ಠಾಣೆ ಇವರು ಸಿಬ್ಬಂದಿ ಜೊತೆಯಲ್ಲಿ ರಾತ್ರಿ  ರೌಂಡ್ಸ್‌ ಕರ್ತವ್ಯದಲ್ಲಿರುವ  ಸಮಯದಲ್ಲಿ 03-50  ಗಂಟೆಯ ಸಮಯಕ್ಕೆ ಉಡುಪಿ ಸರ್ವಿಸ್ ನಿಲ್ದಾಣದ ಒಳಗೆ ಸಾರ್ವಜನಿಕ ಶೌಚಾಲಯದ ಹತ್ತಿರ ಮೊಬೈಲ್ ಅಂಗಡಿಯ ಹತ್ತಿರ ಇಬ್ಬರು  ವ್ಯಕ್ತಿಗಳು  ತಮ್ಮ ಇರುವಿಕೆಯನ್ನು ಮರೆಮಾಚಿಕೊಂಡು ಕತ್ತಲೆಯಲ್ಲಿ ಅವಿತು ಕುಳಿತಿದ್ದು ಟಾರ್ಚ್ ಬೆಳಿಕಿನಿಂದ ನೋಡಿದಾಗ ಓಡಲು  ಪ್ರಯತ್ನಿಸಿದ್ದು  ನಿಲ್ಲುವಂತೆ ಸೂಚಿಸಿದಾಗ ಆತನು  ಓಡಲು ಪ್ರಯತ್ನಿಸಿದ್ದು ಆಗ ಬೆನ್ನಟ್ಟಿ  ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವರ ಪೈಕಿ ಒಬ್ಬ  ತನ್ನ ಹೆಸರು ಅಶೋಕ ಎಂದು ತಿಳಿಸಿದ್ದು ಕೂಲಂಕುಷವಾಗಿ ವಿಚಾರಿಸಿದಾಗ ತನ್ನ  ಹೆಸರು ಗಣೇಶ , ಪ್ರಾಯ 28 ವರ್ಷ, ತಂದೆ ನರಸಿಂಹ ಪೂಜಾರಿ , ವಾಸ ಗುಣವಂತಿ ಬಡಾವಣೆ , ಕುವೆಂಪುನಗರ, ಕೊಪ್ಪ ತಾಲೂಕು ಎಂದು ತಿಳಿಸಿರುತ್ತಾನೆ. ಇನ್ನೊಬ್ಬ ವ್ಯಕ್ತಿ ಯ ಹೆಸರು ವಿಚಾರಿಸಿದಾಗ ರವೀಂದ್ರ ಚೌಧುರಿ , ಪ್ರಾಯ 20 ವರ್ಷ , ತಂದೆ ಜೀವ್ ಚೌಧುರಿ , ಪಟ್ಕನಿ ಪೋಸ್ಟ್ , ಜಮನ್ನಿ ತಾಲೂಕು ಗಾಜಿಪುರ್ ಜಿಲ್ಲೆ , ಉತ್ತರ ಪ್ರದೇಶ ಎಂದು ತಿಳಿಸಿದ್ದು ಅಪರಾತ್ರಿಯಲ್ಲಿ  ಅಲ್ಲಿ ಅವರಿಬ್ಬರ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡಲು ತಡವರಿಸುತ್ತಿದ್ದು ಅವರು  ಯಾವುದೋ  ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ  ತಮ್ಮ   ಇರುವಿಕೆಯನ್ನು ಮರೆಮಾಚಿಕೊಂಡು ಇರುವುದು ಕಂಡುಬಂದಿದ್ದು ಅವರನ್ನು  ದಸ್ತಗಿರಿಮಾಡಿ ಮುಂದಿನ ಕಾನೂನು ಕ್ರಮಕ್ಕಾಗಿ ಠಾಣೆಗೆ ಕರೆತಂದು ಅಪಾದಿತರ ವಿರುದ್ಧ ಠಾಣಾ ಅಕ್ರ 292/14 ಕಲಂ:109 ಸಿ.ಆರ್.ಪಿ.ಸಿ.ಯಂತೆ ಪ್ರಕರಣವನ್ನುದಾಖಲಿಸಲಾಗಿದೆ.
ವರದಕ್ಷಣೆ ಕಿರುಕುಳ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಶೋಭ ಪೂಜಾರಿ ಇವರು ವಂಡ್ಸೆಯ ರಾಜು ಪೂಜಾರಿ ಎಂಬವರನ್ನು ದಿನಾಂಕ: 30/05/2010 ರಂದು ಹೇರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದು ಮದುವೆಯ ಸಮಯ 1 ಲಕ್ಷ ರೂಪಾಯಿ ನಗದು ಮತ್ತು 10 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದು ಮದುವೆಯಾದ ನಂತರ ಪಿರ್ಯಾದಿದಾರರನ್ನು ಆಪಾದಿತ ರಾಜು ಪೂಜಾರಿಯವರು ಮುಂಬೈಗೆ ಕರೆದುಕೊಂಡು ಹೋಗಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಆ ಸಮಯ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಪಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ 3 ವರ್ಷದ ಹಿಂದೆ ಪಿರ್ಯಾದಿದಾರರ ತಾಯಿಯ ಮನೆಗೆ ಬಿಟ್ಟು ಹೋಗಿದ್ದು ನಂತರ ಆಪಾದಿತರು ಊರಿಗೆ ಬಂದಾಗ ಪಿರ್ಯಾದಿದಾರರು ವಂಡ್ಸೆಯಲ್ಲಿರುವ ಗಂಡನ ಮನೆಗೆ ಹೋದಾಗ ಆಪಾದಿತರು ಅವಾಚ್ಯ ಶಬ್ದದಿಂದ ಬೈದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 191/2014 ಕಲಂ: 498(ಎ), 504 ಐಪಿಸಿ  3 ಮತ್ತು 4   ಡಿ ಪಿ ಆಕ್ಟ್  ನಂತೆ ಪ್ರಕರಣ ದಾಖಲಾಗಿರುತ್ತದೆ.

No comments: