Tuesday, October 14, 2014

Daily Crime Reported As On 14/10/2014 At 17:00Hrs
ಅಫಘಾತ ಪ್ರಕರಣ 

  • ಬೈಂದೂರು: ದಿನಾಂಕ 13-10-2014 ರಂದು ಪಿರ್ಯಾದಿ ಶಿವರಾಮ ಪೂಜಾರಿ ಇವರು ತನ್ನ ಬಾಬ್ತು ಸೈಕಲ್‌ನಲ್ಲಿ ಯಡ್ತರೆಯಿಂದ ಮೈಯಾಡಿ ಕಡೆ ಹೋಗುವ ಡಾಂಬಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ  ರಾತ್ರಿ ಸುಮಾರು 09:10 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಬೈಂದೂರು ಗ್ರಾಮದ ಮೈಯಾಡಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಲ್ಲಿ ಅಂದರೆ ಮೈಯಾಡಿಯಿಂದ ತೆಗ್ಗರ್ಸೆ ಕಡೆ ಸೈಕಲ್‌ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಶ್ರಿನಿವಾಸ್‌ ಪೂಜಾರಿ ಎಂಬುವವರಿಗೆ ಯಡ್ತರೆಯಿಂದ ತೆಗ್ಗರ್ಸೆ ಕಡೆಗೆ ಕೆ.ಎ 20 ED 8913 ನೇ ಮೋಟಾರ್‌ ಸೈಕಲ್‌ ಸವಾರನು ಆತನ ಬಾಬ್ತು ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಆಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಶ್ರೀನಿವಾಸ್‌ ಪೂಜಾರಿಯವರು ಸವಾರಿ ಮಾಡುತ್ತಿದ್ದ ಸೈಕಲ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ ಸವಾರ ಮತ್ತು ಮೋಟಾರ್‌ ಸೈಕಲ್‌ ಸವಾರರು ರಸ್ತೆಗೆ ಬಿದ್ದು  ರಕ್ತಗಾಯವಾಗಿದ್ದುಸೈಕಲ್‌ ಸವಾರ ಶ್ರೀನಿವಾಸ್‌ ಪೂಜಾರಿಯವರ ಮುಖ ತಲೆಗೆ ತೀವೃ ರೀತಿಯ ರಕ್ತಗಾಯವಾಗಿ ಹಲ್ಲು ಕಿತ್ತು ಹೋಗಿರುತ್ತದೆ. ಗಾಯಾಳು ಶ್ರೀನಿವಾಸ್‌ ಪೂಜಾರಿಯವರು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ಅಪಘಾತಕ್ಕೆ ಕೆ.ಎ 20 ED 8913 ನೇ ಮೋಟಾರ್‌ ಸೈಕಲ್‌ ಸವಾರ ನಿತಿನ್‌ ಹೆಗ್ಡೆಯ ಅತೀ ವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 212/2014 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ಜಯಕರ ಪೂಜಾರಿ ಇವರು ದಿನಾಂಕ ೧೩/೧೦/೨೦೧೪ ರಂದು ಸಂಜೆ ತನ್ನ ಸ್ನೇಹಿತ ವೆಂಕಟೇಶ್ ಎಂಬುವವರ ಕೆ ಎ ೦೫ ಜಡ್ ೭೦೧೪ ಸೆಂಟ್ರೋ ಕಾರಿನಲ್ಲಿ ಪಿರ್ಯಾದಿದಾರರ ಹೆಂಡತಿ ಹಾಗೂ ಅತ್ತೆಯೊಂದಿಗೆ ತನ್ನ ಮನೆಯಿಂದ ಹೊರಟು ಉಡುಪಿಯಿಂದ ಲಯನ್ ಸರ್ಕಲ್ ಮಾರ್ಗವಾಗಿ ಬಲೈಪಾದೆ ಕಡೆಗೆ ಹೋಗುತ್ತಾ ಈ ದಿನ ಸಂಜೆ ೦೭ .೦೦ ಗಂಟೆ ಸಮಯಕ್ಕೆ ಕಿನ್ನಿಮುಲ್ಕಿ ಜಂಕ್ಷನ್ನಿನ ನಾಗನಕಟ್ಟೆ ಬಳಿ ತಲುಪಿದಾಗ ಪಿರ್ಯಾದುದಾರರ ಕಾರಿನ ಎದುರಿಂದ ಉಡುಪಿ ಕಡೆಗೆ  ಕೆ ಎ ೨೦ ಬಿ ೮೬೮೪ ನೇ ನಂಬರಿನ  ರಿಕ್ಷಾ ಚಾಲಕನು  ಆಟೋ ರಿಕ್ಷಾವನ್ನು  ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಒಮ್ಮಲೆ ರಸ್ತೆಯ ಬಲಭಾಗಕ್ಕೆ ಬಂದು ರಸ್ತೆಯ ಎಡಭಾಗದಲ್ಲಿರುವ ಕಾರಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ  ರಿಕ್ಷಾ ಪಲ್ಟಿಯಾಗಿದ್ದು ಈ ಅಪಘಾತದಿಂದ ಪಿರ್ಯಾದುದಾರರ ಹೆಂಡತಿ ಪೂರ್ಣಿಮ ಎಂಬುವವರು ಗಾಯಗೊಂಡಿರುವುದಲ್ಲದೇ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರಿಗೆ  ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪಿರ್ಯಾದುದಾರರು ತನ್ನ ಹೆಂಡತಿಯನ್ನು,ಚಿಕಿತ್ಸೆಗಾಗಿ ಆಸ್ಪತ್ರೆ ಗೆ  ಕಳಿಸಿರುತ್ತಾರೆ.  ಈ ಘಟನೆಗೆ  ಕೆ ಎ ೨೦ ಬಿ ೮೬೮೪ ನೆ ರಿಕ್ಷಾ ಚಾಲಕ ರಿಚರ್ಡ ಲಾರೆನ್ಸ್ ರವರ ಅತೀವೇಗ ಮತ್ತು ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2014  ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಬ್ರಹ್ಮಾವರ: ದಿನಾಂಕ; 13/10/2014 ರಂದು ಬೆಳಗ್ಗೆ 7:30 ಗಂಟೆಯಿಂದ ದಿ: 14/10/2014 ರ ಬೆಳಗ್ಗೆ 6:45 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ಕಾಡೂರು ಗ್ರಾಮದ ತಂತ್ರಾಡಿಯ ಕಲ್ಗುಂಡಿ ಶ್ರೀ ಮಹಾಗಣಪತಿ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಮುಖವಾಢ , ಬೆಳ್ಳಿಯ ಬಲಿ ಮೂರ್ತಿ  ಮತ್ತು ದೇವಸ್ತಾನದ ಪಶ್ಚಿಮದಲ್ಲಿದ್ದ ಕೇಚರಾವ್ ಸಹ ಪರಿವಾರ ದೇವಸ್ತಾನದ ಬಾಗಿಲನ್ನು ಒಡೆದು ಅಲ್ಲಿ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 1000 ರೂ ವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೆಳ್ಳಿಯ ಸ್ವತ್ತಿನ ಮೌಲ್ಯ ರೂ 60.000/- ಆಗಿದ್ದು ಒಟ್ಟು ಕಳವಾದ ಸ್ವತ್ತಿನ ಮೌಲ್ಯ ರೂ 61.000 /- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/2014 ಕಲಂ: 454. 457, 380  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ವೈಭವ್‌ ಸಿಂಗ್‌ರವರು ಮಣಿಪಾಲ ಎಮ್‌‌ಐಟಿಯಲ್ಲಿ 3ನೇ ಸೆಮಿಸ್ಟರ್‌ ಅಟೋಮೊಬೈಲ್‌ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡು, ಮಣಿಪಾಲದ ಮಾಂಡವಿ ಪರ್ಲ್‌ ಸಿಟಿ ಫ್ಲಾಟ್‌ನ 6ನೇ ಮಹಡಿಯಲ್ಲಿರುವ ರೂಮ್‌ ನಂಬ್ರ 606ನೇದರಲ್ಲಿ ವಾಸವಾಗಿದ್ದರು. ದಿನಾಂಕ 13.10.14ರಂದು ಸಂಜೆ ಸುಮಾರು 18:20ಗಂಟೆಗೆ ಸದ್ರಿ ಫ್ಲಾಟ್‌ನ ಬಾಲ್ಕನಿಯಲ್ಲಿ ಕುಳಿತುಕೊಂಡಿರುವ ಸಮಯ ಆಕಸ್ಮಿಕವಾಗಿ 6ನೇ ಮಹಡಿಯಿಂದ ಕೆಳಗೆ ಬಿದ್ದವರನ್ನು ಆತನ ಸ್ನೇಹಿತರು ಚಿಕಿತ್ಸೆಯ ಬಗ್ಗೆ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ವೈಭವ್‌ ಸಿಂಗ್‌ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 33/2014 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: