Tuesday, October 14, 2014

Daily Crime Reported As On 14/10/2014 At 19:30 Hrs



ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ರೋಹಿತ್ ಡಿಸೋಜಾ, (21) ಮಾರ್ಕ್ ಡಿಸೋಜಾ, ವಾಸ ಕೃಷ್ಣಬೆಟ್ಟು ಮನೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಮಾರ್ಕೊ ಡಿ ಸೋಜಾ(65) ಎಂಬವರು ಹೃದಯ ಸಂಬಂಧಿ ಖಾಯಿಲೆ ಹಾಗೂ ಮದ್ಯಪಾನದ ಚಟ ಹೊಂದಿದವರಾಗಿದ್ದು 2 ವರ್ಷದ ಹಿಂದೆ ಹೃದಯ ಸಂಬಂಧಪಟ್ಟ ಶಸ್ತ್ರ ಚಿಕಿತ್ಸೆ ಆಗಿತ್ತು. ದಿನಾಂಕ 13/10/14 ರಂದು ಪಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯ ಮಾರ್ಕೊ ಡಿ ಸೋಜಾ ರವರು ಇದೇ ಬೇಸರ ದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥ ಗೊಂಡವರನ್ನು  ಚಿಕಿತ್ಸೆ ಬಗ್ಗೆ ಕಿನ್ನಿಗೋಳಿಯ ಕಾನ್ಸೆಟ್ಟ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು ದಿನಾಂಕ: 14/10/14 ರಂದು 00:00 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿರುತ್ತಾರೆ ಎಂಬುದಾಗಿ ರೋಹಿತ್ ಡಿಸೋಜಾ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 37  /2014 ಕಲಂ  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

  • ಗಂಗೊಳ್ಳಿ: ಪಿರ್ಯಾದಿದಾರರಾದ ನಾಗರತ್ನ ವಾಸ: ಗುಡ್ಡೆ ಕೇರಿ  ಗಂಗೊಳ್ಳಿ ಇವರ  ಗಂಡ ವಸಂತ ಖಾರ್ವಿ ಯವರು ದಿನಾಂಕ 13.10.2014 ರಂದು ಮರ್ಲು ಚಿಕ್ಕು ಬೋಟ್ ನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು, ರಾತ್ರಿ ಆದರೂ ವಸಂತ ಖಾರ್ವಿಯವರು ವಾಪಾಸು ಮನೆಗೆ ಬಾರದೇ ಇದ್ದು, ಪಿರ್ಯಾದಿದಾರರು ಗಂಗೊಳ್ಳಿ ಮ್ಯಾಂಗನೀಸ್‌ ಧಕ್ಕೆಗೆ ಹೋದಾಗ ಅಲ್ಲಿ ತುಂಬಾ ಜನ ಸೇರಿದ್ದು, ವಿಚಾರಿಸಲಾಗಿ ದಿನಾಂಕ 13/10/2014 ಸಂಜೆ 19:30 ಗಂಟೆಯ ಸಮಯ ಪಿರ್ಯಾದಿದಾರರ ಗಂಡ ವಸಂತ ಖಾರ್ವಿ ತಂದೆ: ದಿ|| ಶೀನ ಖಾರ್ವಿ, ಇವರು ಮರ್ಲಿ ಚಿಕ್ಕು ಬೋಟನ್ನು ಸಹಚರರೊಂದಿಗೆ ಧಕ್ಕೆಗೆ ತರುತ್ತಿರುವಾಗ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿದೆ ಎಂಬುದಾಗಿ ನಾಗರತ್ನ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 21/2014 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 14/10/2014 ರಂದು ಸಮಯ  ಮದ್ಯಾಹ್ನ 12:30 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ, ಹೆಮ್ಮಾಡಿ ಹೈಸ್ಕೂಲ್ ಬಳಿ ರಾ.ಹೆ 66 ರಸ್ತೆಯಲ್ಲಿ ಪಿರ್ಯಾದಿದಾರರಾದ ರಾಘವೇಂದ್ರ ಅಂಬಿಗಾ ತಂದೆ: ಅಪ್ಪಯ್ಯ ಅಂಬಿಗಾ, ವಾಸ: ತಂಡರಕುಳಿ, ದೀಪಿಗೆ ಅಂಚೆ ಮತ್ತು ಗ್ರಾಮ, ಕುಮಟಾ ತಾಲೂಕು ಉತ್ತರ ಕನ್ನಡ ಇವರ KA-47 K-5442 ನೇ ಬೈಕ್ ನಲ್ಲಿ ಸಂದೇಶ್ ಅಂಬಿಗಾರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಕುಮಟಾದಿಂದ ಕೋಟ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮುಂದುಗಡೆಯಲ್ಲಿ ಆಪಾದಿತ ದಿನೇಶ ಎಂಬವರು KA20 C- 8064 ನೇ ಆಟೋ ರಿಕ್ಷಾವನ್ನು ಹೆಮ್ಮಾಡಿ ಕಡೆಯಿಂದ ಕುಂಧಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಾವುದೇ ರೀತಿಯ ಸೂಚನೆ ನೀಡದೇ ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಫಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಹಾಗೂ ಸಹ ಸವಾರ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ಫಿರ್ಯಾದಿದಾರರಿಗೆ ಎಡಕಾಲಿನ ಪಾದದ ಬಳಿ ಒಳನೋವು ಹಾಗೂ ರಕ್ತಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಸಹ ಸವಾರ ಸಂದೇಶ ಅಂಬಿಗಾರವರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಎಂಬುದಾಗಿ ರಾಘವೇಂದ್ರ ಅಂಬಿಗಾ ಇವರು ನೀಡಿದ  ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 126/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.      

No comments: