Sunday, October 12, 2014

Daily Crime Reported As On 12/10/2014 At 17:00 Hrs

ಅಪಘಾತ ಪ್ರಕರಣ :
  • ಕಾಪು : ದಿನಾಂಕ 12.10.2014 ರಂದು  ಲೋಕೇಶ್ (22) ತಂದೆ: ಗಂಗಾ ಆಚಾರ್‌ ವಾಸ: ಕಾಂಡ್ಯ ಹೋಬ್ಳಿ ಕಡುವಂತಿ ಚಿಕ್ಕಮಗಳೂರು ಜಿಲ್ಲೆ ಹಾಲಿ : ಅಶೋಕ (ಎ.ಜಿ ಇಂಡಸ್ಟ್ರೀಸ್ ) ಶಂಕರಪುರ ಹಾಗೂ ಆರೋಪಿ ಜೊಯೆಲ್‌ ನೆಲ್ಸನ್‌ ಎಂಬವರು ಹಲೀಮಾ ಸಬ್ಜು ಹಾಲ್‌ಗೆ ಕೋಳಿ ಮಾಂಸವನ್ನು ನೀಡುವರೇ ಕೆಎ 20 ಎಂ 9862ನೇ ಓಮ್ನಿ ಕಾರಿನಲ್ಲಿ ಹೋಗಿದ್ದು. ಬೆಳಿಗ್ಗೆ ಸುಮಾರು 6:00 ಗಂಟೆಗೆ ಯೇಣಗುಡ್ಡೆ ಗ್ರಾಮದ ಹೋಲಿಕ್ರಾಸ್‌‌ ಚರ್ಚ್ ಬಳಿ ತಲುಪುತ್ತಿದ್ದಂತೆ ಓಮ್ನಿ ಚಾಲಕನಾದ ಜೊಯೆಲ್‌ ನೆಲ್ಸನ್‌ ಕಾರನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿ, ಕಟಪಾಡಿ –ಶಿರ್ವ ಸಾರ್ವಜನಿಕ ಡಾಮರು ರಸ್ತೆಯ ದಕ್ಷೀಣ ದಿಕ್ಕಿನಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಗಂಡಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದನು.  ಪರಿಣಾಮ ಆ ವ್ಯಕ್ತಿಯು ಎಸೆಯಲ್ಪಟ್ಟು ತಲೆಗೆ ಒಳಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಬೆಳಿಗ್ಗೆ ಸುಮಾರು 7:35 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 201/2014 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ :  
  • ಮಲ್ಪೆ : ದಿನಾಂಕ:11/10/2014 ರಂದು ಅಬ್ದುಲ್ ಸತ್ತಾರ, ಪ್ರಾಯ:50ವರ್ಷ, ತಂದೆ:ಅಮೀರ್ ಸಾಹೇಬ್, ವಾಸ: ಮಸೀದಿ ತೋಟ, ಹೂಡೆ, ಪಡುತೋನ್ಸೆಗ್ರಾಮ ಇವರು ಸಂಜೆ ಸಮಯ ಸುಮಾರು 6.45 ಗಂಟೆಗೆ ಕೆಮ್ಮಣ್ಣುಗೆ ಹೋಗುವರೇ ಪಡುತೋನ್ಸೆ ಗ್ರಾಮದ ಕೆಪ್ಪತೋಡು ಬಸ್ಸು ನಿಲ್ದಾಣದಲ್ಲಿ ನಿಂತುಕೊಂಡಿರುವಾಗ ತನಗೆ ಪರಿಚಯವಿರುವ ಹೂಡೆ ವಾಸಿಗಳಾದ ನಸ್ರುಲ್ಲಾ, ಶಫಿ @ ಅರಬ್‌ ಶಫೀ, ಅಬ್ದುಲ್ಲಾ, ಅರ್ಫಾದ್‌ ಹಾಗೂ ಇತರ 3 ಜನರು ಬಂದು ಹೂಡೆಯ ಜದೀದ್‌ ಮಸೀದಿ ಬಳಿಯ ದರ್ಗಾದ ಕಾಣಿಕೆ ಡಬ್ಬಿಯನ್ನು ನೀನು ಯಾಕೆ ಕದ್ದುಕೊಂಡು ಹೋಗಿದ್ದೀಯ ಎಂದು ಕೇಳಿ ತೆಂಗಿನ ಮರದ ಕೊತ್ತಳಿಗೆಯಿಂದ ಬೆನ್ನಿಗೆ ಹೊಡೆದಿರುತ್ತಾರೆ, ಹಾಗೂ ಕಂಪ್ಲೇಂಟು ಕೊಟ್ಟರೇ ಕೊಲ್ಲದೇ ಬಿಡುವುದಿಲ್ಲವಾಗಿ ಜೀವಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 139/2014 ಕಲಂ143,147,148.324.506.149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಉಡುಪಿ ನಗರ :ರವಿ(30), ತಂದೆ ಶೇಖರಪ್ಪ ವಾಸ: ಹಿಂಡಸಘಟ್ಟ ಹರಿಹರ (ತಾ) ದಾವಣಗೆರೆ ಇವರು ಕುಂಜಿಬೆಟ್ಟುವಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ The Mirage ಎಂಬ ಕಟ್ಟಡದಲ್ಲಿ ಇವರೊಂದಿಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುವ ರಂಜೀತ್‌ ಲೇಟ್‌ ಅಲಿಯಾಸ್‌ ಚೇತನ್‌ ಲೇಟ್‌ ಎಂಬುವವರು ದಿನಾಂಕ: 26/08/2014ರಂದು ಬೆಳಿಗ್ಗೆ 9 ಗಂಟೆಗೆ ಕಟ್ಟಡದ 5ನೇ ಮಹಡಿಯಲ್ಲಿ ಆನ್‌ ಲೋಡಿಂಗ್‌ ಮಾಡುತ್ತಿರುವಾಗ ಲಿಫ್ಟ್‌ ನಿಂದ ಆಯ ತಪ್ಪಿ ಕೆಳ ಅಂತಸ್ತಿನ  ನೆಲಕ್ಕೆ ಬಿದ್ದರು ಇದರ ಪರಿಣಾಮ ಅತನ ತೆಲೆಗೆ ಗುದ್ದಿದ ನೋವಾಗಿ ರಕ್ತ ಸ್ರಾವವಾಯಿತು. ಕೂಡಲೇ  ಚಿಕಿತ್ಸೆಯ ಬಗ್ಗೆ  ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ದಿನ ದಿನಾಂಕ 12/10/2014ರಂದು ಬೆಳಿಗ್ಗೆ 5:00ಗಂಟೆಗೆ ಚೇತನ ಲೇಟ್‌ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುತ್ತಾರೆ. ಮೃತರು ಕೆಲಸ ಮಾಡುತ್ತಿದ್ದ ಕಟ್ಟಡದ ಕಾಮಗಾರಿ ಕೆಲಸದಲ್ಲಿ ಲಿಫ್ಟ್ ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಸುರಕ್ಷತಾ ಕ್ರಮಗಳನ್ನು ನೀಡದೇ ಹಾಗೂ ಲಿಫ್ಟ್‌ ನಲ್ಲಿ ಯಾವುದೇ ಭದ್ರತೆ ಯನ್ನು ಅಳವಡಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ  ಪರಿಣಾಮ ಈ ಘಟನೆ ನಡೆದಿದ್ದು, ಇದಕ್ಕೆ ಕೆಲಸ ಮಾಡಿಸುತ್ತಿದ್ದ ಸಾಜೀದ್‌ ಹಾಗೂ ಗುತ್ತಿಗೆ ದಾರರಾದ ಸಲೀಂರವರ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ: 288  /14  ಕಲಂ 288, 304(ಎ)  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: