Sunday, October 12, 2014

Daily Crime Reported As On 12/10/2014 At 07:00 Hrs

ಅಪಘಾತ ಪ್ರಕರಣ :
  • ಉಡುಪಿ ಸಂಚಾರ  : ವಿಶುಶೆಟ್ಟಿ (42), ಅಂಬಲಪಾಡಿ ಉಡುಪಿ ಇವರು ದಿನಾಂಕ: 11/10/2014 ರಂದು ಕರಾವಳಿ ಜಂಕ್ಷನ್ ಬಳಿಯ ಆಟೋರಿಕ್ಷಾ ನಿಲ್ದಾಣದ ಹತ್ತಿರ ನಿಂತುಕೊಂಡಿರುವಾಗ ಸಮಯ ಸುಮಾರು 06:15 ಗಂಟೆಗೆ ಒಬ್ಬ ಲಾರಿ ಚಾಲಕನು ಉಡುಪಿ ಸಂತೆಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯ ಎದುರಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲಿನ ಎಡಬಾಗಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಗುವಷ್ಟರಲ್ಲಿ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು ಅವನ ತಲೆಯ ಮೇಲೆ ಲಾರಿಯ ಹಿಂಬಾಗದ ಚಕ್ರ ಹರಿದಿದ್ದು ವಿಶುಶೆಟ್ಟಿ ಮತ್ತು ಅಲ್ಲಿ ಸೇರಿದವರು ಓಡಿಹೋಗಿ ನೋಡಲಾಗಿ ಮೋಟಾರ್ ಸೈಕಲ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೋಟಾರ್ ಸೈಕಲ್ ನಂಬ್ರ ನೋಡಲಾಗಿ ಕೆಎ-20 ಆರ್-2299 ಎಂದಾಗಿದ್ದು ಆತನ ಹೆಸರು ಚಂದ್ರಶೇಖರ ಆಚಾರಿ ಎಂದು ತಿಳಿಯಿತು ಮತ್ತು ಲಾರಿ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಲಾರಿಯ ನಂಬ್ರ ನೋಡಲಾಗಿ ಕೆಎ-20 ಬಿ-1547 ಎಂದಾಗಿರುತ್ತದೆ. ನಂತರ ಮೃತ ಶರೀರವನ್ನು ಒಂದು ಆ್ಯಂಬುಲೆನ್ಸ್‌ ನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಮೃತಶರೀರವನ್ನು ಶವಾಗಾರದಲ್ಲಿ ಇಟ್ಟಿರುವುದಾಗಿದೆ. ಈ ಅಪಘಾತಕ್ಕೆ ಕೆಎ-20 ಬಿ-1547 ನೇ ನಂಬ್ರದ ಲಾರಿ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು ಸದ್ರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ದೂರಿಂತೆ ಉಡುಪಿ ಸಂಚಾರ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ : 106/2014  ಕಲಂ. 279, 304(ಎ) ಭಾ.ದ.ಸಂ134 (ಎ&ಬಿ) ಐಎಂವಿ ಕಾಯ್ದೆ  ಯಂತೆ ಪ್ರಕ ರಣ ದಾಖಲಿಸಲಾಗಿದೆ.
  • ಬ್ರಹ್ಮಾವರ  : ದಿನಾಂಕ: 11/10/2014 ರಂದು 12.05 ಗಂಟೆಗೆ ಉಡುಪಿ ತಾಲೂಕು ಹೊಸಾಳ ಗ್ರಾಮದ ಬಾರ್ಕೂರು ಸೋಮನಾಥೇಶ್ವರ ಬೇಕರಿಯ ಎದುರು ಆರೋಪಿ ನಾಗರಾಜ - ಕೆಎ-20-ಸಿ-5833 ನೇ ಶ್ರೀ ದುರ್ಗಾಂಬ ಬಸ್ಸಿನ ಚಾಲಕ, ತನ್ನ ಬಾಬ್ತು ಕೆಎ-20-ಸಿ-5833ನ್ನು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ರಾಮಚಂದ್ರ ಗಾಣಿಗ ಎಂಬವರಿಗೆ ಡಿಕ್ಕಿ ಹೊಡೆದು ಪರಿಣಾಮವಾಗಿ ರಾಮಚಂದ್ರ ಗಾಣಿಗರವರಿಗೆ ತಲೆಗೆ ಮುಖಕ್ಕೆ ತೀವ್ರ ಗಾಯವಾಗಿ ಪ್ರಜ್ಞೆ ಇಲ್ಲದೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಕಿಶೋರ ಕುಂದರ್, ಹನೆಹಳ್ಳಿ ಗ್ರಾಮ, ಉಡುಪಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 189/2014 ಕಲಂ: 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೊಲ್ಲೂರು : ದಿನಾಂಕ 11/10/2014 ರಂದು 07.30 ಗಂಟೆಗೆ ಶಂಕರ ಆಚಾರಿ (ಪ್ರಾಯ 31 ವಷ) ತಂದೆ: ಮಂಜುನಾಥ ಆಚಾರಿ ವಾಸ: ಗೋತೆ ಮೇಲ್ ಗೋತೆ ಮೇಲ್ ಹೊಸೂರು  ಗ್ರಾಮ  ಇವರು ತನ್ನ ಬಾಬ್ತು KA20-U-6973 ನೇ ಮೋಟಾರು ಸೈಕಲ್ ನಲ್ಲಿ ಹೊಸೂರಿನಿಂದ ಆಲೂರಿಗೆ ಕುಂದಾಪುರ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಚಿತ್ತೂರು ಜಂಕ್ಷನ್ ಬಳಿ ತಲುಪುವಾಗ ವಂಡ್ಸೆ ಕಡೆಯಿಂದ K.A 20 L 2400 ನೇ ಮೋಟಾರು ಸೈಕಲ್ ಸವಾರ ರಂಗಪ್ಪ ಕೋನಪ್ಪ ಪರಸನ್ನವರ್ ಎಂಬಾತ ಅವರ ಮುಂದೆ ಹೋಗುತ್ತಿದ್ದ ಒಂದು ಬಸ್ಸನ್ನು ಓವರ್ ಟೇಕ್ ಮಾಡಿ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದುದರ ಪರಿಣಾಮ  ಶಂಕರ ಆಚಾರಿ ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಹೋಡೆದುದರಿಂದ ಶಂಕರ ಆಚಾರಿ ಇವರು ರಸ್ತೆಗೆ ಬಿದ್ದು ತಲೆ, ಬಲಕೈ ಮಣಿಗಂಟಿಗೆ ಮೂಳೆ ಮುರಿತದ ಒಳಜಖಂ ಗಾಯವಾಗಿದ್ದು, ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಕಾರಣವಾದ K.A 20 L 2400 ನೇ ಮೋಟಾರು ಸೈಕಲ್ ಸವಾರ ರಂಗಪ್ಪ ಕೋನಪ್ಪ ಪರಸನ್ನವರ್ ಎಂಬಾತ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 65/2014 ಕಲಂ :279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ

  • ಬೈಂದೂರು  : ದಿನಾಂಕ 10-10-2014 ರಂದು ರಾತ್ರಿ 10-30 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮದ ಮಾಳೆಬೈಲು ಎಂಬಲ್ಲಿನ ಪದ್ಮಾವತಿ (45) ಗಂಡ: ಶಂಕರ ದೇವಾಡಿಗ ಇವರ ಬಾಬ್ತು ವಾಸ್ತವ್ಯದ ಮನೆ ಬಳಿಗೆ ಗಣೇಶ ದೇವಾಡಿಗ  ಹಾಗೂ ಇತರರು  ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಬಂದು ಆರೋಪಿತರ ಪೈಕಿ ಗಣೇಶ ಎಂಬವನು ಮನೆಗೆ ಅಕ್ರಮ ಪ್ರವೇಶ ಮಾಡಿ ಪದ್ಮಾವತಿ ಇವನ್ನು ಉದ್ದೇಶಿಸಿ ನಿನ್ನ ಮಗ ವೆಂಕಟೇಶ  ಮನೆಯಲ್ಲಿ ಇದ್ದಾನ,  ಎಂದು ಹೇಳಿ ಅವಾಚ್ಯಶಬ್ದಗಳಿಂದ ಬೈದು, ನಿನ್ನ ಮಗನನ್ನು ನಾಳೆ ಕರೆದುಕೊಂಡು ಬಾರದೆ ಇದ್ದರೆ ನಿನ್ನನ್ನು ಹಾಗೂ ನಿನ್ನ ಮಗ ವೆಂಕಟೇಶನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ಪದ್ಮಾವತಿ ರವರು ನೀಡಿದ ದೂರಿಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 210/2014 ಕಲಂ: 448, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು : ದಿನಾಂಕ 10-10-2014 ರಂದು ರಾತ್ರಿ 10-00 ಗಂಟೆಯ ವೇಳೆಗೆ ಕುಂದಾಪುರ ತಾಲೂಕು ಕಂಬದಕೋಣೆ ಗ್ರಾಮದ ಮಾಳೆಬೈಲು ಎಂಬಲ್ಲಿನ ದೊಟ್ಟಮ್ಮ  ಗಂಡ: ಶೇಷ ಪೂಜಾರಿ ಮಾಳೆಬೈಲು ಮನೆ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರ ಬಾಬ್ತು ವಾಸ್ತವ್ಯದ ಮನೆಗೆ ಗಣೇಶ ದೇವಾಡಿಗ  ಹಾಗೂ ಇತರರು   ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ ಆರೋಪಿತರ ಪೈಕಿ ಗಣೇಶ ಎಂಬವನು  ಇವರನ್ನು ಕೈಯಿಂದ ದೂಡಿ ತಲೆಗೆ ಗೋಡೆಯನ್ನು ತಾಗಿಸಿ  ನೋವು ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಮಗ ಶೇಖರ ಎಲ್ಲಿ , ಅವನು ಸಿಗದಿದ್ದಲ್ಲಿ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೊಟ್ಟಮ್ಮ ರವರು ನೀಡಿದ ದೂರಿಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 211/2014 ಕಲಂ: 448, 323, 504, 506 ಜೊತೆಗೆ 34 ಐಪಿಸಿ   ಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.

No comments: