Friday, October 10, 2014

Daily Crime Reported As On 10/10/2014 At 17:00 Hrs



ಅನುಮಾನಾಸ್ಪದ ವ್ಯಕ್ತಿಯ ಬಂಧನ  

  • ಶಿರ್ವಾ: ದಿನಾಂಕ 10-10-14 ರಂದು ಬೆಳಿಗ್ಗೆ 06-00 ಗಂಟೆಗೆ  ಹೆಚ್.ಸಿ ಸುರೇಶ್‌ ಶಿರ್ವ ಪೊಲೀಸ್‌  ಠಾಣೆ ರವರು ರಾತ್ರಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಮುಂಜಾನೆ 04-30 ಗಂಟೆಗೆ ಬೆಳ್ಲೆ ಗ್ರಾಮದ ಪಡುಬೆಳ್ಳೆ ಮಾನಸ ಕೇಂದ್ರದ ಬಳಿ ಓರ್ವ ವ್ಯಕ್ತಿ ಪೊಲೀಸರನ್ನು ಕಂಡು ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದವನನ್ನು ಹಿಡಿದು ವಿಚಾರಿಸಿದಾಗ ಆತನ ವರ್ತನೆಯ ಬಗ್ಗೆ ಬಲವಾದ ಸಂಶಯಗೊಂಡು ಕೂಲಂಕುಶವಾಗಿ ವಿಚಾರಿಸಿದಾಗ ತನ್ನ ಹೆಸರು ಶೇಖ್ ಮಹಮ್ಮದ್ ಯೂಸುಫ್ (38) ತಂದೆ ಆದಂ ಸಾಹೇಬ್‌  ವಾಸ ನ್ಯೂ ಮಂಜಿಲ್, ಮಾರ್ಕೆಟ್ ಬಳಿ, ಉಚ್ಚಿಲ, ಬಡಾ ಗ್ರಾಮ ಉಡುಪಿ ತಾಲೂಕು ಎಂದು ತಿಳಿಸಿರುತ್ತಾನೆ. ಸದ್ರಿ ಸಮಯದಲ್ಲಿ ಆತನು ಆ ಸ್ಥಳದಲ್ಲಿ ಇದ್ದ ಬಗ್ಗೆ ಸಮರ್ಪಕವಾದ ಉತ್ತರ ನೀಡದೆ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ಅಲ್ಲಿದ್ದ ಬಗ್ಗೆ ಖಚಿತವಾದ ಮೇರೆಗೆ ವಶಕ್ಕೆ ಪಡೆದು ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/2014, ಕಲಂ:109 ಸಿಅರ್.ಪಿಸಿ ಯಂತೆ ಪ್ರಕರಣ ದಾಖಲಿಸಿರುವುದಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಉಮೇಶ್ ಪೂಜಾರಿ  ಎಂಬವರು ತನಗೆ ಪದೇ ಪದೇ  ಜ್ವರ ಬರುತ್ತಿದ್ದು  ಚಿಕಿತ್ಸೆ ಪಡೆದರೂ  ಗುಣವಾಗದೇ ಇರುವುದರಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಮನೆಯ ಬಳಿ ದಿನಾಂಕ 07/10/2014 ರಂದು ಯಾವುದೋ ವಿಷ ಸೇವಿಸಿದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು  ಚಿಕಿತ್ಸೆಯಲ್ಲಿದ್ದವರು ದಿನಾಂಕ: 10/09/2014 ರಂದು  ಬೆಳಿಗ್ಗೆ 8:15 ಗಂಟೆಗೆ ತಾನು ಪಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 45/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ಲಕ್ಷ್ಮಿ(28) ಎಂಬವಳನ್ನು 8 ವರ್ಷಗಳ ಹಿಂದೆ ಪಿರ್ಯಾದಿದಾರರ ಸಂಬಂಧಿ ಮಂಜುನಾಥ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಬಳಿಕ ಲಕ್ಷ್ಮಿ ಹಾಗೂ ಮಂಜುನಾಥ ಮಣಿಪಾಲದಲ್ಲಿ ವಾಸವಾಗಿದ್ದು, ಮಣಿಪಾಲ ರಿಗಲ್‌ ಎಂಬೆನ್ಸಿ ಎಂಬ ಕಟ್ಟಡದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಮಂಜುನಾಥನು ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದು  ಲಕ್ಷ್ಮಿಯು ಅಸೌಖ್ಯದಿಂದ ಇದ್ದಳು. ಈ ಕಾರಣದಿಂದ ಲಕ್ಷ್ಮಿಯು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09.10.14ರಂದು ಬೆಳಿಗ್ಗಿನ ಜಾವ 2:00ಗಂಟೆಯ ಸಮಯಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 31/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: