Friday, October 10, 2014

Daily Crime Reported As On 10/10/2014 At 07:00 Hrs

ವಂಚನೆ ಪ್ರಕರಣ:
  • ಶಿರ್ವಾ: ಡಾ| ಅರವಿಂದ ನಾಯಕ್‌ ಅಮ್ಮುಂಜೆ ತಂದೆ: ದಿ| ಎ. ಪದ್ಮನಾಭ ನಾಯಕ್‌‌  ವಾಸ: ಅರ್ಚನಾ,ಮಾರ್ಪಳ್ಳಿ, ಉಡುಪಿ ಇವರು  ಉದಯವಾಣಿ ದಿನ ಪತ್ರಿಕೆಯಲ್ಲಿ ಬಂದ ಜಾಹಿರಾತಿನ ಅನ್ವಯ ಕುರ್ಕಾಲು ಗ್ರಾಮದ ಸುಭಾಶ್‌ನಗರ ಎಂಬಲ್ಲಿರುವ ರೋಯ್‌ ಅಂತೋನಿ ತಂದೆ: ದಿ| ಅಲೆಕ್ಸಾಂಡರ್‌ ಅಂತೋನಿ, ವಾಸ: ಮನೆ ನಂ.2-6, ಭಾರತ್‌ ಟೈಲ್ಸ್‌‌ ಫ್ಯಾಕ್ಟರಿ ಎದುರುಗಡೆ, ವಾಸುಕೀ, ಪುತ್ತೂರು, ಉಡುಪಿ ಈತನ ಬಾಬ್ತು ಸವೇ ನಂಬ್ರ 173/2ಪಿ1ರಲ್ಲಿರುವ 0.29 ಸೆಂಟ್ಸ್‌‌ ಜಾಗದಲ್ಲಿರುವ ”ಆಗ್ರೋ ಪಿಕಲ್ಸ್‌” ಎಂಬ ಘಟಕವನ್ನು ಖರೀದಿಸಲು ದಿನಾಂಕ 16/08/2013ರಂದು ಕರಾರು ಪತ್ರ ಮಾಡಿಕೊಂಡಿರುತ್ತಾರೆ ಆ ಸಮಯ ಜಾಗವನ್ನು ಉಡುಪಿಯ   ಕೋರ್ಟ್‌ ರೋಡ್‌ನಲ್ಲಿರುವ ‌ಕೆನರಾ ಬ್ಯಾಂಕ್‌ನಲ್ಲಿ ಅಡವು ಇಡಲಾಗಿರುತ್ತದೆ ಮತ್ತು ಜಾಗ ವಾಸ್ತವ್ಯಕ್ಕೆ ಮಾತ್ರ ಪರಿವರ್ತನೆಯಾಗಿತ್ತು.  ಕರಾರುನಂತೆ 90 ದಿನಗಳೊಳಗೆ ಖರೀದಿ ವ್ಯವಹಾರ ಕಾರ್ಯಾಗತವಾಗಬೇಕಿದ್ದು, ಈ ಬಗ್ಗೆ ಹಂತಹಂತವಾಗಿ ಚೆಕ್‌ ಮೂಲಕ ಡಾ| ಅರವಿಂದ ನಾಯಕ್‌ರು 9,40,000/- ರೋಯ್‌ ಅಂತೋನಿ ಅವರಿಗೆ ಕೊಟ್ಟಿರುತ್ತಾರೆ. ಜಾಗವನ್ನು ಕೈಗಾರಿಕಾ ವಲಯವಾಗಿ ಪರಿವರ್ತಿಸದೇ, ನೀಡಿದ ಮೂಲ ದಾಖಲೆಯನ್ನು ಆಳಿಸಿ ಮೋಸ ಮಾಡಿದ್ದುಲ್ಲದೆ, ನೀಡಿರುವ ಹಣ ಮತ್ತು ಬಡ್ಡಿ ಹಿಂತಿರುಗಿಸದೇ ಕರಾರು ಭಂಗ ಮಾಡಿ ರೋಯ್‌ ಅಂತೋನಿಯು ವಂಚನೆ ಹಾಗೂ ಮೋಸ ಮಾಡಿರುತ್ತಾರೆ ಎಂಬುದಾಗಿ ಡಾ| ಅರವಿಂದ ನಾಯಕ್‌ ಅಮ್ಮುಂಜೆ ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ : 151/2014, ಕಲಂ: 417,468,420  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
  • ಕೊಲ್ಲೂರು : ದಿನಾಂಕ 09/10/2014 ರಂದು ಬೆಳಿಗ್ಗೆ 08.00 ಗಂಟೆಗೆ ಗೋಪಾಲಕೃಷ್ಣ ಆಚಾರಿ ಪ್ರಾಯ(32) ತಂದೆ: ಚಿಕ್ಕಯ್ಯ ಆಚಾರಿ ವಾಸ: ಶ್ರೀನಿವಾಸ ನಿಲಯ ಬಟ್ಲಗುಂಡಿ ಜಡ್ಕಲ್  ಗ್ರಾಮ ಕುಂದಾಪುರ ಇವರು ತನ್ನ ಬಾಬ್ತು ಕೆ.ಎ. 03 ಇ ಕ್ಯೂ 1498 ನೇ ನಂಬ್ರದ ಮೋಟಾರು ಬೈಕ್ ನ್ನು ತನ್ನ ಮನೆಗೆ ಕೊಲ್ಲೂರು ಕಡೆಯಿಂದ ಜಡ್ಕಲ್ ಜಂಕ್ಷನ್ ಕಡೆಗೆ ಕೊಲ್ಲೂರು-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಸವಾರಿ ಮಾಡಿ ಕೊಂಡು ಜಟ್ಟಿಗೇಶ್ವರ ದೇವಸ್ಥಾನ ಸಮೀಪ ಹೋಗುತ್ತಿರುವಾಗ  ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ KL. 13 AA 9503 ನೇ ನಂಬ್ರದ  ಕಾರು ಚಾಲಕ ಪ್ರವೀಣನು ತನ್ನ ಕಾರನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದುದರ ಪರಿಣಾಮ ಕಾರು ಗೋಪಾಲಕೃಷ್ಣ ಆಚಾರಿ ಯವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರವರು ರಸ್ತೆಗೆ ಬಿದ್ದು ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಒಳ ಜಖಂ ಹಾಗು ಎಡಕಾಲಿ ಕೋಲು ಕಾಲು ಹಾಗು ಮಣಿಗಂಟಿಗೆ ತರಚು ಗಾಯವಾಗಿದ್ದು ಸದ್ರಿಯವರು ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಹಾಗು ಈ ಅಪಘಾತದ ಬಳಿಕ ಆಪಾದಿತ ಗಾಯಳುವಿಗೆ ಸಹಕರಿಸದೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಈ ಅಪಘಾತಕ್ಕೆ ಕಾರಣವಾದ KL. 13 AA 9503 ನೇ ನಂಬ್ರದ  ಕಾರು ಚಾಲಕ ಪ್ರವೀಣ  ಎಂಬಾತ ನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ : 64/14 ಕಲಂ. 279, 338 IPC 134(A)(B) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: