Friday, October 03, 2014

Daily Crime Reported As On 03/10/2014 At 17:00 Hrs



ಹುಡುಗಿ ಕಾಣೆ ಪ್ರಕರಣ
  • ಶಂಕರನಾರಾಯಣ: ದಿನಾಂಕ 01/10/2014 ರಂದು 12.30 ಗಂಟೆಗೆ ಪಿರ್ಯಾದಿದಾರರಾದ ರತ್ನಾಕರ ನಾಯ್ಕ (25) ತಂದೆ ಪಿಣಿಯ ನಾಯ್ಕ ವಾಸ ಮಾರ್ಡಿ ಶಾಲೆ ಬಳಿ, ಕೊಡ್ಲಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕನ ಮಗಳು ಮಮತಾ (20) ಇವರು ಕುಂದಾಫುರ ತಾಲೂಕು ಕೊಡ್ಲಾಡಿ ಗ್ರಾಮದ ಮಾರ್ಡಿ ಶಾಲೆ ಬಳಿಯಿರುವ ಪಿರ್ಯಾದಿದಾರರ ಮನೆಯಿಂದ  ಹೋಗಿದ್ದು, ಈ ವರೆಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಎಂಬುದಾಗಿ ರತ್ನಾಕರ ನಾಯ್ಕ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 151 /14 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.  

ಇತರ ಪ್ರಕರಣ
  • ಕುಂದಾಪುರ: ದಿನಾಂಕ  02/10/2014ರಂದು ರಾತ್ರಿ 8.30 ಗಂಟೆಗೆ  ಕುಂದಾಪುರ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಂ. ಇವರು  ಕಚೇರಿಯಲ್ಲಿದ್ದಾಗ  ಕುಂದಾಪುರ  ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್ ಬಳಿ ಇರುವ ಫೆರ್ನಾಂಡೀಸ್ ಕಂಪೌಂಡ್ ನಲ್ಲಿರುವ ಆದಿತ್ಯ ಮೊಬೈಲ್ ಸೆಂಟರ್ ನ ಮೇಲಿರುವ  ಕೊಠಡಿಯಲ್ಲಿ ಈ ದಿನ ಹೈದ್ರಾಬಾದ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ ಲೀಗ್    ಚೈನೈ  ಮತ್ತು  ಪಂಜಾಬ್ ಕ್ರಿಕೆಟ್  ಸೆಮಿ ಪೈನಲ್ ಪಂದ್ಯಾಟದ  ಸೋಲು  ಗೆಲುವಿನ ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಖಚಿತ  ಮಾಹಿತಿ  ದೊರೆತ  ಮೇರೆಗೆ ಮೇಲಾಧಿಕಾರಿಗಳ ಆದೇಶ ದಂತೆ ತಮ್ಮ ಕಚೇರಿಯ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಪಂಚರನ್ನು ಜತೆಯಲ್ಲಿ ಕರೆದುಕೊಂಡು ಕುಂದಾಪುರ ವಡೇರಹೋಬಳಿ ಗ್ರಾಮದ ವಿನಾಯಕ ಕ್ರಾಸ್ ಸಮೀಪದಲ್ಲಿರುವ ಫೆರ್ನಾಂಡೀಸ್  ಕಾಂಪ್ಲೆಕ್ಸ್ ನ ಆದಿತ್ಯ  ಮೊಬೈಲ್  ಸೆಂಟರ್  ಬಳಿ ಬಂದು   ಇಲಾಖಾ  ಜೀಪು ನಿಲ್ಲಿಸಿ ಮೋಬೈಲ್ ಸೆಂಟರ್  ಮೇಲಿರುವ  ಕೊಠಡಿಗೆ ಸಿಬ್ಬಂದಿಯವರು  ಹಾಗೂ  ಪಂಚರೊಂದಿಗೆ ರಾತ್ರಿ  9:00  ಗಂಟೆಗೆ  ತಲುಪಿ ಕೊಠಡಿಯ  ಹೊರಗಡೆ ನಿಂತು  ನೋಡುವಾಗ  ಈ ಕೋಣೆಯಲ್ಲಿ  ಆರೋಪಿತರುಗಳಾದ 1). ರವಿ ಹೆಗ್ಡೆ  (28),  ತಂದೆ ಗಣಪತಿ, ಸುಮಿತ್ರ ನಿಲಯ ಸಂಜಯ ಗಾಂಧಿ ರಸ್ತೆ  ಮಂಗಳೂರು, 2) ಹರೀಶ್  (27) ತಂದೆ ನಾರಾಯಣ ,ಟಿ.ಎಸ್ ಹೌಸ್  ಅರಳಗುಡ್ಡೆ ರಸ್ತೆ, ಹಂಗಳೂರು, 3) ಸುಧೀರ್ (29), ತಂದೆ ನಾರಾಯಣ ದೇವಾಡಿಗ ವಡೇರಹೋಬಳಿ ಕುಂದಾಪುರ, 4) ಸಂದೀಪ್  (25)  ತಂದೆ  ಸಂಜೀವ   ಕೋಡಿ ರಸ್ತೆ ಹಂಗಳೂರು, 5)  ಸುಬ್ರಹ್ಮಣ್ಯ (25) ತಂದೆ ಶ್ರೀಧರ್ ಆಚಾರ್  ಮಾತಾಶ್ರೀ ಬಿ.ಸಿ. ರೋಡ್  ವಡೇರಹೋಬಳಿ ಕುಂದಾಪುರ, 6) ಮೇಲ್ರಿಕ್ (22)  ತಂದೆ ಮ್ಯಾಥ್ಯೂ  ಡಿಸೋಜಾ   ಕೋಡಿ  ರಸ್ತೆ  ಹಂಗಳೂರು. 7) ರಂಜಿತ (25) ತಂದೆ ಬಸವ ಪೂಜಾರಿ ಸೀತಾರಾಮ ದೇವಸ್ಥಾನ ಸಮೀಪ  ಕೋಡಿ  ಕುಂದಾಪುರ, 8) ರಾಘವೇಂದ್ರ (37) ತಂದೆ ನಾರಾಯಣ ಪೈ ಸಂಜಯಗಾಂಧಿ ರೋಡ್   ಹಂಗಳೂರು 9) ಹರೀಶ್, ವಾಸ ಉಡುಪಿಯ ಅಂಬಾಗಿಲು ಇವರುಗಳು ನೆಲದ ಮೇಲೆ ಕುಳಿತು ಈ ಕೋಣೆಯ ಪೂರ್ವ  ಬದಿಯ ಗೋಡೆಯಲ್ಲಿ ಅಳವಡಿಸಿದ ಎಲ್.ಜಿ. ಟಿ.ವಿ.ಯಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಚೈನೈ ತಂಡದ ಕ್ರಿಕೆಟ್ ಆಟವನ್ನು ನೋಡುತ್ತಾ  ಈ ಓವರ್ನಲ್ಲಿ  ಸಿಕ್ಸ್  ಹೊಡೆದರೇ  ನನ್ನದು  500/-  ಎಂದು  ನನ್ನದು 300/-  ಎಂದು  ಜೋರಾಗಿ ಒಬ್ಬರನ್ನೊಬ್ಬರು ಮೇಲೈಸುತ್ತಾ ಕ್ರಿಕೆಟ್ ಪಂದ್ಯಾಟದ ಮೇಲೆ ಬೆಟ್ಟಿಂಗ್ ಕಟ್ಟುತ್ತಿರುವುದು ಕಂಡುಬಂತು.  ಇವರುಗಳು ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಮತ್ತು  ಮೊಬೈಲ್‌ಗಳನ್ನು ಪಣವಾಗಿಟ್ಟು ಬೆಟ್ಟಿಂಗ್ ಮಾಡುತ್ತಿರುವುದು ಕಂಡುಬಂದಿರುವುದರಿಂದ ದಿವಾಕರ ಪಿ.ಎಂ. ಇವರು, ಪಂಚರು  ಹಾಗೂ ಸಿಬ್ಬಂದಿಯವರೊಂದಿಗೆ   ಕೋಣೆಯೊಳಗೆ ಹೋಗಿ ಒಳಗಡೆ  ಕ್ರಿಕೆಟ್  ಪಂದ್ಯಾಟ  ವೀಕ್ಷಿಸುತ್ತಿರುವವರ ಬಗ್ಗೆ ವಿಚಾರಿಸಿದಾಗ  ತಾವು  ಹಣವನ್ನು  ಪಣವಾಗಿಟ್ಟುಕೊಂಡು  ಕ್ರಿಕೆಟ್ ಮ್ಯಾಚ್ ಮೇಲೆ   ಬೆಟ್ಟಿಂಗ್  ನಡೆಸುತ್ತಿದ್ದುದಾಗಿ ತಿಳಿಸಿದ್ದು ಉಡುಪಿಯ  ಅಂಬಾಗಿಲು   ಹರೀಶ್  ಇವರ  ಮುಂದಾಳತ್ವದಲ್ಲಿ ನಡೆಸುತ್ತಿದ್ದುದಾಗಿ ತಿಳಿಸಿರುತ್ತಾರೆ. ಇವರುಗಳು ತಮ್ಮ ಸ್ವಂತ ಲಾಭಕ್ಕಾಗಿ  ಕ್ರಿಕೆಟ್ ಬೆಟ್ಟಿಂಗ್  ನಡೆಸುತ್ತಿರುವುದು  ಖಚಿತವಾದ್ದರಿಂದ ಆರೋಪಿಗಳ ವಶದಲ್ಲಿದ್ದ ಒಟ್ಟು 9 ಮೊಬೈಲ್ ಸೆಟ್,   ಕೊಠಡಿಯಲ್ಲಿದ್ದ ಎಲ್.ಜಿ. ಹಳೆಯ  ಟಿವಿ.  ಮತ್ತು ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ಗೆ  ತಂದ  ಹಣ  ನಗದು ಒಟ್ಟು  ರೂ  25,785/-  ವನ್ನು ಮುಂದಿನ  ಕ್ರಮದ  ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 332/2014  ಕಲಂ 87 ಕೆ.ಪಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: