Friday, October 24, 2014

Daily Criemes Reported as On 24/10/2014 at 07:00 Hrs


ಮನುಷ್ಯ ಕಾಣೆ ಪ್ರಕರಣ
  • ಪಿರ್ಯಾದಿದಾರರಾದ ರವಿ ಖಾರ್ವಿ (31) ತಂದೆ:ದಿವಂಗತ:ಉಮಾನಾಥ ಖಾರ್ವಿ ವಾಸ:ಸನ್ಯಾಸಿಬಲ್ಲೆ, ಕಂಚುಗೋಡು, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕುರವರ ಅಕ್ಕ ಶ್ರೀಮತಿ ಶಾಂತಿ ಖಾರ್ವಿರವರ ಮಗ ಕಿರಣ್ (19) ಎಂಬವನು ಸುಮಾರು 8 ತಿಂಗಳಿಂದ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 21/10/2014 ರಂದು ರಾತ್ರಿ 8:45 ಗಂಟೆಗೆ ರವಿ ಖಾರ್ವಿರವರಿಗೆ ಹಾಗೂ ಆತನ ತಾಯಿ ಶಾಂತಿ ಖಾರ್ವಿರವರಿಗೆ ಕಿರಣನು ದೂರವಾಣಿ ಕರೆ ಮಾಡಿ ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಹೊರಟಿದ್ದೇನೆ ಎಂದು ತಿಳಿಸಿರುತ್ತಾನೆ. ದಿನಾಂಕ:22/10/2014 ರಂದು 9:00 ಗಂಟೆಗೆ ಕಿರಣನು ಪುನಃ ಆತನ ತಾಯಿಗೆ ಫೋನ್ ಮಾಡಿ ನಾನು ಕುಂದಾಫುರ ಶಾಸ್ತ್ರೀ ಪಾರ್ಕ್‌ನಲ್ಲಿ ಇದ್ದೇನೆ, ನನ್ನ ಮೊಬೈಲ್ ಸ್ವಿಚ್ ಆಫ್ ಆಗುತ್ತಿದೆ ಎಂದು ಹೇಳಿದವನು, ಮನೆಗೂ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ರವಿ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 350/2014 ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: