Tuesday, October 28, 2014

ಪುರಾತನ ವಿಗ್ರಹಗಳ ಪತ್ತೆ


ಪುರಾತನ ವಿಗ್ರಹಗಳ ಪತ್ತೆ ದಿನಾಂಕ: 27.10.2014 ರಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಪಿ. ರಾಜೇಂದ್ರ ಪ್ರಸಾದ್‌ ಐಪಿಎಸ್‌ರವರ ನಿರ್ದೇಶನದಂತೆ, ಮಾನ್ಯ ಹೆಚ್ಚುವರಿ ಪೊಲೀಸ್ ಆಧೀಕ್ಷಕರಾದ ಸಂತೋಷ್ ಕುಮಾರ್ ಹಾಗೂ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸಿ.ಬಿ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಉಡುಪಿ ವೃತ್ತದ ವೃತ್ತ ನಿರೀಕ್ಷಕ ಶ್ರೀ ಶ್ರೀಕಾಂತ್ ಕೆ ಹಾಗೂ ಉಡುಪಿ ನಗರ ಠಾಣಾ ಪಿ.ಎಸ್.ಐ ಶ್ರೀ ಮಧು.ಟಿ.ಎಸ್ ಹಾಗೂ ಮಲ್ಪೆ ಪೊಲೀಸ್ ಠಾಣಾ ಪಿಎಸ್ಐ ರವಿ ಕುಮಾರ್ ಹಾಗೂ  ಸಿಬ್ಬಂದಿಯವರೊಂದಿಗೆ ಉಡುಪಿ ಡಯಾನಾ ಸರ್ಕಲ್ ಬಳಿ ಇರುವ ಕಲ್ಪನಾ ಲಾಡ್ಜ್‌ಗೆ ಖಚಿತ ವರ್ತಮಾನದಂತೆ ದಾಳಿ ನಡೆಸಿ ಮಾರಾಟಕ್ಕೆಂದು ತಂದಿದ್ದ ಅಂದಾಜು ಮೌಲ್ಯ 5 ಲಕ್ಷ ರೂ ಬೆಲೆಬಾಳುವ ಪುರಾತನ ತಾಮ್ರದ ಶ್ರೀನಿವಾಸ ಹಾಗೂ ಪದ್ಮಾವತಿ ವಿಗ್ರಹಗಳನ್ನು ಸ್ವಾಧೀನಪಡಿಸಿಕೊಂಡು ಆಪಾದಿತರಾದ ಭಟ್ಕಳದ ಮಹಾದೇವ ನಾಯ್ಕ್, ಗದಗ ಪಂಚಾಕ್ಷರಿ ನಗರದ ಈಶ್ವರ ರೆಡ್ಡಿ, ಸುಳ್ಯ ಗುತ್ತಿಗಾರು ನಿವಾಸಿ ಸದಾಶಿವ ಗೌಡ, ಮಲ್ಪೆ ಕೊಡವೂರಿನ ಶೇಖರ ಮೆಂಡನ್, ಮುರುಡೇಶ್ವರದ ವೆಂಕಟರಮಣ ಜಟ್ಟಪ್ಪ ನಾಯ್ಕ್, ಹಾಗೂ ಹಾವೇರಿ ತಾಲೂಕು ಕರ್ಜಗಿಯ ನಿವಾಸಿ ಬಸವರಾಜ್ ಎಂಬವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್ ವಿ.ಡಿ.ಐ ಕಾರು ನಂಬ್ರ KA 27M 4239ನೇಯದನ್ನು ಹಾಗೂ ಆಪಾದಿತರ ಬಳಿಯಿದ್ದ ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಕಾರ್ಯಚರಣೆಯಲ್ಲಿ ಉಡುಪಿ ವೃತ್ತ ಕಛೇರಿಯ ಸಿಬ್ಬಂದಿಯವರಾದ ಹೆಚ್‌ಸಿ 2001 ನೇ ಯೋಗೀಶ, ಪಿಸಿ 2206 ನೇ ಉಮೇಶ್, ಪಿಸಿ 1071 ನೇ ಥೋಮ್ಸನ್, ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಸಿ 2007 ನೇ ಮೋಹನ ಕೋತ್ವಾಲ್, ಪಿಸಿ 1102 ನೇ ಪ್ರಸನ್ನ ಹಾಗೂ ಮಲ್ಪೆ ಅಪರಾಧ ವಿಭಾಗದ ಪಿಸಿ 1642 ನೇ ಲೋಕೇಶ, ಪಿಸಿ 1094 ನೇ ಇಮ್ರಾನ್ ರವರು ಸಹಕರಿಸಿರುತ್ತಾರೆ.

No comments: