Saturday, September 20, 2014

Press Note


ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘಕ್ಕೆ ಕಂಪ್ಯೂಟರ್ ಉಪಕರಣ ಕೊಡುಗೆ
        ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘಕ್ಕೆ  ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿಮಿಟೆಡ್ ನ  ಅಧ್ಯಕ್ಷರಾದ ಶ್ರೀ ಸಂಜೀವ ಕಾಂಚನ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರು ಕಂಪ್ಯೂಟರ್ ಉಪಕರಣವನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಸಂತೋಷ್ ಕುಮಾರ್ ರವರಿಗೆ ಉದಾರ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ  ಪೊಲೀಸ್ ನೌಕರರ ಸಂಘದ ಉಪಾದ್ಯಕ್ಷರಾದ ಡಾ. ಪ್ರಭುದೇವ.ಬಿ.ಮಾನೆ ಹಾಗೂ ಸಂಘದ ನಿರ್ದೆಶಕರು ಹಾಜರಿದ್ದರು.


ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘದ ಸಭೆ
        ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘ ನಿಯಮಿತ ಉಡುಪಿ ಇದರ ನಿರ್ದೇಶಕರ ಮಂಡಳಿಯ 4ನೇ ಸಭೆಯು  ದಿನಾಂಕ 20/09/2014 ರಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ್ ಕುಮಾರ್ ರವರ ಅದ್ಯಕ್ಷತೆಯಲ್ಲಿ  ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಯಿತು. ಸಂಘದ ಉಪಾಧ್ಯಕ್ಷರಾದ                    ಡಾ.ಪ್ರಭುದೇವ. ಬಿ.ಮಾನೆ, ಸಂಘದ ಸಲಹೆಗಾರರಾದ  ಎಸ್ಸಿಡಿಸಿಸಿ ಬ್ಯಾಂಕಿನ ನಿವೃತ್ತ ಎಜಿಎಂ ಶ್ರೀ ಬಾಬುರಾಜ ಪೈ , ಪೊಲೀಸ್ ನಿರೀಕ್ಷಕರಾದ ಶ್ರೀ ಜೈ ಶಂಕರ್, ಹಾಗೂ ಶ್ರೀ  ಕೆ. ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಸಂಘದ ಖಾಸಗಿ ಕಾರ್ಯದರ್ಶೀ ಶ್ರವಣ್ ಕುಮಾರ್ ಸಂಘದ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿ ಸರ್ವಾನುಮತದ ಅನುಮೋದನೆಯನ್ನು ಪಡೆದರು.
        ಸಂಘದಲ್ಲಿ ಇದುವರೆಗೆ 45 ಮಂದಿ ಸದಸ್ಯರಿಗೆ ಒಟ್ಟು ರೂಪಾಯಿ 11,20,000-00 ಸಾಲವನ್ನು ಮಂಜೂರು ಮಾಡಲಾಗಿದ್ದು ಇಂದಿನ ಸಭೆಯಲ್ಲಿ 5 ಮಂದಿಗೆ  ತಲಾ  25,000 ರಂತೆ  ಸಾಲವನ್ನು ಮಂಜೂರು ಮಾಡಲಾಯಿತು. ಇಲ್ಲಿಯ ವರೆಗೆ ಒಟ್ಟು 50 ಮಂದಿಗೆ ಒಟ್ಟು 12,45,000-00  ರೂಪಾಯಿ ಸಾಲವನ್ನು ನೀಡಲಾಯಿತು.
        ಸಂಘಕ್ಕೆ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಉದಾರ ಕೊಡುಗೆಯಾಗಿ ಕಂಪ್ಯೂಟರ್ ಉಪಕರಣವನ್ನು ಒದಗಿಸಲು ಕಾರಣದಾರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಸಂಘದ ವತಿಯಿಂದ ಸನ್ಮಾನಿಸುವುದೆಂದು ತಿರ್ಮಾನಿಸಲಾಯಿತು.
        ಇತರ ಇಲಾಖೆಗಳ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ  ಒಂದು ವರ್ಷದ ಅವಧಿಗೆ  10% ರ ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಿಸುವುದೆಂದು ಹಾಗೂ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರು ಸಂಘದ ನಿಯಮ ನಿಭಂದನೆಯಂತೆ ಸದಸ್ಯರನ್ನಾಗಿ  ಮಾಡುವುದೆಂದು ನಿರ್ಧರಿಸಲಾಯಿತು. ನಿರ್ದೆೇಶಕರ ಮಂಡಳಿಯ ಕಾರ್ಯದರ್ಶಿ ಜಿಲ್ಲಾ  ಶಸಸ್ತ್ರ ಮೀಸಲು ಪಡೆಯ ನಿರೀಕ್ಷಕ  ಶ್ರೀ ಉಮೇಶ್ ಪಿ. ಸ್ವಾಗತಿಸಿದರು. ನಿರ್ದೇಶಕ ಬಿ. ಮನಮೋಹನ್ ರಾವ್ ರವರು ವಂದಿಸಿದರು.

No comments: