Tuesday, September 30, 2014

Daily Crime Reports as on 30/09/2014 at 07:00 Hrs

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 29/09/2014 ರಂದು ಸಮಯ ಸಂಜೆ 5:00 ಗಂಟೆಗೆ ಕುಂದಾಪುರ ತಾಲೂಕು  ಕುಂದಾಪುರ ಕಸಬಾ ಗ್ರಾಮದ ಖಾರ್ವಿಕೇರಿ ರಸ್ತೆಯ ಎ.ಕೆ ಮಂಜಿಲ್‌  ಬಳಿ ರಸ್ತೆಯಲ್ಲಿ, ಆಪಾದಿತ ಮೊಹಮ್ಮದ್‌ ತಂಜಿಲ್‌‌ ಎಂಬವರು  KA 20- EC -5810  ನೇ  ಬೈಕ್‌ ನ್ನು ಖಾರ್ವಿಕೇರಿ  ಕಡೆಯಿಂದ ಕುಂದಾಪುರ  ಹೊಸ ಬಸ್‌ ನಿಲ್ದಾಣದ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಚಲಾಯಿಸಿ ನಡೆದುಕೊಂಡು ಮನೆಗೆ ಬರುತ್ತಿದ್ದ ಪಿರ್ಯಾದಿದಾರರಾದ ಜೇರಾಲ್ಡ್‌‌  ನ್ಯೂಟನ್‌  ಕ್ರಾಸ್ತ್‌‌ (47) ತಂದೆ  ದಿ ರಾಬರ್ಟ್‌   ಕ್ರಾಸ್ತ್‌‌ ವಾಸ:  ಎ.ಕೆ  ಕಂಪೌಂಡ್‌‌,  ಕಾರ್ವಿಕೇರಿ ರಸ್ತೆ, ಕಸಬಾ ಗ್ರಾಮ ಕುಂದಾಪುರ  ತಾಲೂಕು ಎಂಬವರ ಮಗನಾದ 5 ವರ್ಷ ಪ್ರಾಯದ ಜೋವಿಯಲ್‌‌‌  ಆಂತೋನಿ ಕ್ರಾಸ್ತ್‌‌  ಎಂಬಾತನಿಗೆ ಎದುರುನಿಂದ  ಡಿಕ್ಕಿ  ಹೊಡೆದ ಪರಿಣಾಮ, ಮಗುವಿನ ಎಡಕಾಲಿಗೆ ಮೊಣಕಾಲಿನ ಗಂಟಿಗೆ, ಹಣೆಗೆ, ತುಟಿಗೆ ಒಳನೋವು ಹಾಗೂ ತರಚಿದ  ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಜೇರಾಲ್ಡ್‌‌  ನ್ಯೂಟನ್‌ ಕ್ರಾಸ್ತ್‌‌ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments: