Monday, September 29, 2014

Daily Crime Reports as on 29/09/2014 at 17:00 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ; 28/09/2014 ರಂದು 19:30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಶಬರಿ ಹೋಟೆಲ್ ಎದುರು ರಾಹೆ 66 ರಲ್ಲಿ ಆರೋಪಿ ತನ್ನ ಬಾಬ್ತು ಕೆಎ-20-ಸಿ-6986 ನೇ ಟೆಂಪೋವನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಸಂಜೀವ ದೇವಾಡಿಗರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ: 178/2014 ಕಲಂ: 279 338   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 29/09/2014  ರಂದು  ಸಮಯ ಸುಮಾರು ಬೆಳಿಗ್ಗೆ 8:00 ಗಂಟೆಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಬೀಜಾಡಿ ವೈ ಜಂಕ್ಷನ್ ಬಳಿ ರಾ.ಹೆ 66 ರಸ್ತೆಯಲ್ಲಿ ಪಿರ್ಯಾದಿ ಅಣ್ಣಪ್ಪ ರವರು ಸೈಕಲ್ ಸವಾರಿ ಮಾಡಿಕೊಂಡು ಕೋಟೇಶ್ವರ ಕಡೆಯಿಂದ ಕುಂಭಾಶಿ ಕಡೆಗೆ ಹೋಗುತ್ತಿರುವಾಗ ಆಪಾದಿತ ಸುಂದರ ಶೆಟ್ಟಿ ಎಂಬವರು ಕೆಎ-20 ಜೆಡ್ – 1654 ನೇ ಕಾರನ್ನು ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ಅತೀವೇಗ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಗಾಯಗೊಂಡು ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ: 118/2014 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಬ್ರಹ್ಮಾವರ: ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಬ್ರಹ್ಮ ಬೈದರ್ಕಳ ಹೊಸ ಗರಡಿಯ ದ್ವಾರ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ತುಂಡು ಮಾಡಿ ಒಳ ಪ್ರವೇಶಿಸಿ ಬ್ರಹ್ಮ ದೇವರ ಮೂರ್ತಿಯ ಬೆಳ್ಳಿಯ ಕೊಡೆ -1,  ಹಾಗೂ 3 ಬೆಳ್ಳಿಯ ಕಳಸ, ಒಟ್ಟು 1 ಕೇಜಿ ತೂಕದ್ದಾಗಿದ್ದು ಹಾಗೂ ಕಾಣಿಕೆ ಡಬ್ದಿಯಲ್ಲಿರುವ ಹಣ ಸುಮಾರು 50.000/-  ರೂಪಾಯಿ  ನಗದು  ಆಗಿದ್ದು ಕಳವಾದ  ಒಟ್ಟು ಸ್ವತ್ತಿನ ಮೌಲ್ಯ 1 ಲಕ್ಷ ಆಗಿರಬಹುದು . ಈ ತಕ್ಷೀರು ದಿನಾಂಕ: 28/09/2014 ರಂದು ಮಧ್ಯಾಹ್ನ 12:30 ಗಂಟೆಯಿಂದ ದಿನಾಂಕ; 29/09/2014 ರಂದು ಬೆಳಗ್ಗೆ 8:30 ಗಂಟೆಯ ಮಧ್ಯದ ಅವಧಿಯಲ್ಲಿ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ: 179/2014 ಕಲಂ: 454.457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 27/09/2014ರಂದು ಮಧ್ಯಾಹ್ನ 1:00 ಗಂಟೆಗೆ ಆದಿ ಉಡುಪಿ ಪ್ರೌಢ ಶಾಲೆಗೆ  ಬೀಗಹಾಕಿ ಹೋಗಿದ್ದು ದಿನಾಂಕ: 29/09/2014ರಂದು  ಬೆಳಿಗ್ಗೆ 8:45ಗಂಟೆಗೆ ಶಾಲೆಗೆ ಬಂದು ನೊಡುವಾಗ ಶಾಲೆಯ ಬಾವಿಗೆ ಆಳವಡಿಸಿರುವ ಸುಮಾರು 7 ಸಾವಿರ ರೂ ಬೆಲೆಬಾಳುವ  I.H.P ಸಬ್‌ ಮರ್ಸಿಬಲ್‌  ಪಂಪ್‌‌   ( KMP  ಕಂಪ ನಿಯ ಎ 2799) ನ್ನು ಯಾರೋ ಕಳ್ಳರು ಬೀಗ ಮುರಿದು ಕದ್ದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ: 281/2014 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


ಹಲ್ಲೆ ಪ್ರಕರಣ
  • ಮಣಿಪಾಲ: ಪಿರ್ಯಾದಿ ಸಂಜೀವ ಮೂಲ್ಯ ಮತ್ತು ಅವರ ನೆರೆಮನೆಯ ವಿಘ್ನೇಶ್‌ ಎಂಬವರಿಗೂ ನಡೆದುಕೊಂಡು ಹೋಗುವ ದಾರಿಯ ವಿಚಾರದಲ್ಲಿ ತಕಾರಾರು ಇರುತ್ತದೆ. ದಿನಾಂಕ 28-09-14ರಂದು ಸಂಜೆ 3:30ಗಂಟೆಗೆ ಅಪಾದಿತ ವಿಘ್ನೇಶನು ಪಿರ್ಯಾದಿದಾರರ ಮನೆಯ ಬಳಿ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಪಿರ್ಯಾದಿದಾರರು ಮನೆಯ ಹತ್ತಿರದ ಗದ್ದೆಯ ಬಳಿ ಹೋದಾಗ ಓಡಿಸಿಕೊಂಡು ಬಂದು ತನ್ನ ಕೈಯಲ್ಲಿದ್ದ ರೀಪಿನ ತುಂಡಿನಿಂದ ಪಿರ್ಯಾದಿದಾರರ ಎಡಕೈ ರಟ್ಟೆಗೆ ಹೊಡೆದು, ರೀಪನ್ನು ಮೈಗೆ ಬಿಸಾಡಿರುತ್ತಾನೆ. ನಂತರ ಕೈಯಿಂದ ಪಿರ್ಯಾದಿದಾರರ ಬಲಕಿವಿಗೆ ಕೈಯಿಂದ ರಭಸದಿಂದ ಹೊಡೆದು, ಕಾಲಿನಿಂದ ಎದುರು ಬದಿ ಸೊಂಟಕ್ಕೆ ತುಳಿದಿರುತ್ತಾನೆ. ಪಿರ್ಯಾದಿದಾರರು ಅಲ್ಲಿಯೇ ಕುಸಿದು ಬಿದ್ದಾಗ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾನೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 169/14 ಕಲಂ 341, 504, 323, 324, 506  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ:  ಅಮ್ಮಣಿ ಪೂಜಾರ್ತಿ ಪ್ರಾಯ:70 ವರ್ಷ ಎಂಬವರು ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು ಎಷ್ಟೇ ಔಷಧ ಮಾಡಿದರೂ ಗುಣವಾಗದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿ ತಾಲೂಕು ಐರೋಡಿ ಗ್ರಾಮದ ಗುಡ್ಡಿಮನೆ ಎಂಬಲ್ಲಿನ ತನ್ನ ಮನೆಯಲ್ಲಿ ದಿನಾಂಕ 28/09/2014ರಂದು ರಾತ್ರಿ ಊಟ ಮಾಡಿ ಮಲಗಿದವರು ದಿನಾಂಕ 29/09/2014 ರಂದು ಬೆಳಿಗ್ಗೆ 06:00 ಗಂಟೆಗೆ ನೋಡುವಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕೋಟ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 44/2014 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಮಾನಿಗುಡ್ಡೆ ನಿವಾಸಿ ಅಣ್ಣ ರವಿ ಪ್ರಾಯ 35 ವರ್ಷ ಎಂಬವರು ದಿನಾಂಕ 29/09/2014 ರಂದು ಬೆಳಗ್ಗೆ ಸುಮಾರು 10:00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು 11:30 ಗಂಟೆಯ ಮಧ್ಯೆ ಯಾವುದೋ ಕಾರಣದಿಂದ ಹೊಸವಕುಲು ಹಾಡಿಯಲ್ಲಿ  ಬೋಗಿ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 42/2014 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಭುಜಂಗ ಪಾರ್ಕ್‌ನಲ್ಲಿ ಹಲವಾರು ಸಾರ್ವಜನಿಕರು ವಿಶ್ರಾಂತಿ ಪಡೆಯಲು ಮಲಗುತ್ತಿದ್ದು ದಿನಾಂಕ: 28/09/2014ರಂದು ರಾತ್ರಿ ಸಮಯ 60 ರಿಂದ 65 ವರ್ಷ  ಪ್ರಾಯದ ಗಂಡಸು ಗಾಂಧಿ ಪ್ರತಿಮೆ ಬಳಿ ಬಂದು ಮಲಗಿದ್ದು ಈ ದಿನ  ದಿನಾಂಕ: 29/09/2014ರಂದು ಬೆಳಿಗ್ಗೆ 8:00ಗಂಟೆಗೆ  ಬಂದು ನೋಡಿದಾಗ ಮೃತ ಪಟ್ಟಿರುತ್ತಾನೆ ಆತನು ಅಪರಿಚಿತ ವ್ಯಕ್ತಿ ಯಾಗಿದ್ದು ಯಾವುದೋ ಖಾಯಿಲೆಯಿಂದ ಮೃತ ಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 59/2014 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: