Monday, September 29, 2014

Daily Crime Reports as on 29/09/2014 at 07:00 Hrs

ಜೀವ ಬೆದರಿಕೆ ನೀಡಿದ ಪ್ರಕರಣ
  • ಬ್ರಹ್ಮಾವರ: ದಿನಾಂಕ 28/09/2014 ರಂದು 19:30 ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಕೊಳಲಗಿರಿ ಬಾರ್ ಬಳಿ ಪಿರ್ಯಾದಿದಾರರಾದ ರಮೇಶ್ ಕೋಟ್ಯಾನ್ (42) ತಂದೆ: ದಿ. ರಾಮ, ವಾಸ: ವಿಷ್ಣುಮೂರ್ತಿ ನಗರ, ಕೆಳರ್ಕಳ ಬೆಟ್ಟು ಅಂಚೆ, ಉಡುಪಿ ತಾಲೂಕು ರವರು ತನ್ನ ಮನೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಆರೋಪಿ ನವೀನನು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಮೀರಾ ರವರ ಮನೆಯ ಬಳಿ ನಡೆಯುತ್ತಿರುವ ಬ್ಯಾಂಡ್ ಹಾಗೂ ವಾದ್ಯಗಳನ್ನು ಪಿರ್ಯಾದಿದಾರರೆ ನಿಲ್ಲಿಸಲು ಹೇಳಿರುವುದಾಗಿ ತಿಳಿದುಕೊಂಡು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಆರೋಪಿ ನಾರಾಯಣನು ಪಿರ್ಯಾದಿದಾರರಿಗೆ ಹೊಡೆಯುವ ಹಾಗೆ ಹೆದರಿಸಿ ಇನ್ನಿಬ್ಬರು ಪರಿಚಯ ಇಲ್ಲದ ಆರೋಪಿಗಳು ಹಾಜರಿದ್ದು, ವಾದ್ಯ ಹಾಗೂ ಬ್ಯಾಂಡ್ ತರಬೇತಿ ನಿಲ್ಲಿಸಲು ಪಿರ್ಯಾದಿದಾರರೇ  ಕಾರಣ ಎಂದು ತಪ್ಪು ಅಭಿಪ್ರಾಯ ತಿಳಿದು ಈ ಘಟನೆ ಸಂಭವಿಸಿರುವುದಾಗಿದೆ  ಎಂಬುದಾಗಿ ರಮೇಶ್ ಕೋಟ್ಯಾನ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 177/2014 ಕಲಂ 341 504 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು
  • ಪಡುಬಿದ್ರಿ: ದಿನಾಂಕ 27/09/2014 ರಂದು ಮೃತ ರಂಗಯ್ಯ ಎಂಬಾತನು ಫಿರ್ಯಾದುದಾರರಾದ ರಾಮಕೃಷ್ಣ 48 ವರ್ಷ ತಂದೆ: ದಿ. ರಮಣ್ಣಯ್ಯ ಶೆಟ್ಟಿ, ವಾಸ:- ಬಿ-42, ಆರ್.ಆರ್. ಕಾಲನಿ, ಕೆಮ್ಮುಂಡೇಲು, ಎಲ್ಲೂರು ಗ್ರಾಮ, ಉಡುಪಿ ತಾಲೂಕು  ಎಂಬವರ ಮನೆಯಲ್ಲಿದ್ದ ಸಮಯ ಬೆಳಿಗ್ಗೆ 08:00 ಗಂಟೆಗೆ ಎದೆನೋವು ಎಂದು ಹೇಳಿ ನರಳುತ್ತಿದ್ದಾಗ ಫಿರ್ಯಾದುದಾರರು ಮೃತನ ಎದೆಗೆ ಮುಲಾಮು ಹಚ್ಚಿ ಕಷಾಯ ನೀಡಿದರೂ ಎದೆನೋವು ಕಡಿಮೆಯಾಗದೆ ಇದ್ದು ಕೂಡಲೇ ನಾಗಾರ್ಜುನ ಕಂಪೆನಿಯ ಆಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಪಡುಬಿದ್ರಿ ಸಿದ್ಧಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಬಂದು ತೋರಿಸಿದ್ದು ವೈದ್ಯರು ಪರೀಕ್ಷಿಸಿ ಕೂಡಲೇ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆತನನ್ನು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತನ ಸಂಬಂದಿಕರು ದೂರದ ಆಂದ್ರಪ್ರದೇಶದಲ್ಲಿದ್ದು ಅವರ ಸಲಹೆಯ ಮೇರೆಗೆ ಮೃತದೇಹವನ್ನು ಅಜ್ಜರಕಾಡಿನಲ್ಲಿ ಇರುವ ಸರಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ ಎಂಬುದಾಗಿ ರಾಮಕೃಷ್ಣ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 28/14 ಕಲಂ. 174  ಸಿಆರ್.ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ಶಂಕರನಾರಾಯಣ: ಪಿರ್ಯಾದಿದಾರರಾದ ರಾಘವೆಂದ್ರ  (27) ತಂದೆ. ಲಿಂಗ ವಾಸ. ಜನ್ಸಾಲೆ ಸಿದ್ದಾಪುರ ಗ್ರಾಮ ಕುಂದಾಪುರ ತಾಲೂಕು ಎಂಬವರ ಮಾವ ಲಕ್ಷ್ಮಣ ರವರರು ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 28/09/2014 ರಂದು ಬೆಳಿಗ್ಗೆ 7.00 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಲಕ್ಷ್ಮಣ ರವರಿಗೆ ತನ್ನ ಮನೆಯಲ್ಲಿ ರಕ್ತದೊತ್ತಡ ಖಾಯಿಲೆ ತೀವೃಗೊಂಡಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರಿಗೆ ಕರೆದುಕೊಂಡು ಹೋದಾಗ 1.40 ಗಂಟೆಗೆ ವೈದ್ಯರು ಪರೀಕ್ಷಿಸಿ ಸದ್ರಿಯವರು ಮೃತ ಪಟ್ಟಿದ್ದಾಗಿ ತಿಳಿಸಿರುತ್ತಾರೆ ಎಂಬುದಾಗಿ ರಾಘವೆಂದ್ರ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 24/14 ಕಲಂ. 174  ಸಿಆರ್.ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: