Saturday, September 27, 2014

Daily Crime Reports as on 27/09/2014 at 07:00 Hrs

ಮೋಟಾರು ಸೈಕಲ್ ಕಳವು ಪ್ರಕರಣ
  • ಮಣಿಪಾಲ: ಪಿರ್ಯಾದುದಾರರಾದ ವಸಂತ ಸುವರ್ಣ (23) ತಂದೆ: ಲಕ್ಷಣ ಸುವರ್ಣ ಮಂಚಿಗದ್ದೆ ಮನೆ ಇಕ್ಲ ಪೋಸ್ಟ್ ಮಂಗಳೂರು ಎಂಬವರು ದಿನಾಂಕ 25/09/14 ರಂದು ರಾತ್ರಿ 11:30 ಗಂಟೆಯಿಂದ 26/09/2014ರ ಬೆಳಿಗ್ಗೆ 6:30 ಗಂಟೆಯ ನಡುವೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಡ್ ಪಾಯಿಂಟ್  ರೋಡ್  ಬಳಿ ಇರುವ ಅನಿರುಧ್ಧ ಅಪಾರ್ಟ ಮೆಂಟ್ ಕೆಳಗಡೆ ಪಾರ್ಕ್ ಮಾಡಿದ ಮೋಟಾರು ಸೈಕಲ್ ನಂಬ್ರ ಕೆ ಎ 20- ಈಬಿ -1061  ನೇಯದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಮೌಲ್ಯ ರೂಪಾಯಿ 49,000/- ಆಗಿರುತ್ತದೆ ಎಂಬುದಾಗಿ ವಸಂತ ಸುವರ್ಣ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 165/2014 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ
  • ಶಂಕರನಾರಾಯಣ: ದಿನಾಂಕ 26-09-2014 ರಂದು ಮದ್ಯಾಹ್ನ 3:30 ಗಂಟೆಗೆ ಆರೋಪಿಯು KA 20 D 1443 ನೇ ಲಾರಿಯನ್ನು ಅಂಪಾರು ಗ್ರಾಮದ ಬಾಳ್ಕಟ್ಟು ಸೇತುವೆಯ ಹತ್ತಿರ ತಿರುವಿನಲ್ಲಿ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯದಿದಾರರಾದ ಗುರುನಾಥ ಶೇಟ್‌  ತಂದೆ: ಪಾಂಡುರಂಗ ಶೆಟ್‌  ವಾಸ: ಸೋನಾಕೇರಿ ಶಿರೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಚಲಾಯಸಿಕೊಂಡು ಬರುತ್ತಿದ್ದ KA 05 ME 703 ನೇ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಪಿರ್ಯಾದಿದಾರರ ಹೆಂಡತಿ ಅನುಪಮ ಮತ್ತು ಮಕ್ಕಳಾದ ರೋಹಿತ್‌ ಹಾಗೂ ಚೈತನ್ಯ ರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಗುರುನಾಥ ಶೇಟ್‌  ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 148/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜೀವ ಬೆದರಿಕೆ ನೀಡಿದ ಪ್ರಕರಣ
  • ಕೋಟ: ದಿನಾಂಕ 25/09/2014 ರಂದು 21:30 ಗಂಟೆಗೆ ಕುಂದಾಪುರ ತಾಲೂಕು ಕೆದೂರು ಗ್ರಾಮದ ತೋಟದಮನೆ, ನಡುಬೆಟ್ಟು ಎಂಬಲ್ಲಿರುವ ಪಿರ್ಯಾದಿದಾರರಾದ ಕೃಷ್ಣಯ್ಯ ಶೆಟ್ಟಿ (51) ತಂದೆ ದಿ: ಮಹಾಬಲ ಶೆಟ್ಟಿ ತೋಟದ ಮನೆ ನಡುಬೆಟ್ಟು ಕೆದೂರು ಗ್ರಾಮ ಕುಂದಾಪುರ ತಾಲೂಕು ಎಂಬವರ ವಾಸದ ಮನೆಯ ಹಾಲ್‌ನ ಒಳಗೆ ಆರೋಪಿ ಶ್ರೀಮತಿ ಪ್ರತಿಮಾ ಶೆಡ್ತಿ ಯು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮಗಳಾದ ಹಾಗೂ 9 ತಿಂಗಳ ತುಂಬು ಗರ್ಭಿಣಿ ಆಗಿರುವ ಶ್ರೀಮತಿ ವಿದ್ಯಾಳನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ  ಬೈದು ಆಕೆಯನ್ನು ಗಟ್ಟಿಯಾಗಿ ದೂಡಿದ್ದು, ಆಗ ಅಲ್ಲೇ ಇದ್ದ ಪಿರ್ಯಾದಿದಾರರ ಹೆಂಡತಿ ದೇವಕಿಯು ಮಗಳು ವಿದ್ಯಾಳನ್ನು ಬೀಳದಂತೆ ಹಿಡಿದುಕೊಂಡಿದ್ದು, ನಂತರ ಸದ್ರಿ ಆರೋಪಿಯು ಪಿರ್ಯಾದಿ ಹಾಗೂ ಪಿರ್ಯಾದಿದಾರರ ಮಗಳು, ಪಿರ್ಯಾದಿದಾರರ ಹೆಂಡತಿಯನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದು, ಸದ್ರಿ ಆರೋಪಿ ಪ್ರತಿಮಾಳ ಗಂಡ ಬೀಜಾಪುರದಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಆತನು ಕೆಲವರಿಗೆ ಸಾಲದ ಹಣ ಕೊಡಲು ಬಾಕಿ ಇದ್ದು, ಅವರು ಆರೋಪಿ ಪ್ರತಿಮಾಳ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸುತ್ತಿದ್ದು, ಅವರಿಗೆ ಪ್ರತಿಮಾಳ ಪೋನ್ ನಂಬ್ರವನ್ನು ಪಿರ್ಯಾದಿದಾರರ ಮಗಳು ವಿದ್ಯಾಳು ಕೊಟ್ಟಿರುತ್ತಾಳೆ ಎಂಬ ತಪ್ಪು ಕಲ್ಪನೆಯಿಂದ ಈ ಕೃತ್ಯ ಮಾಡಿರುವುದಾಗಿದೆ ಎಂಬುದಾಗಿ ಕೃಷ್ಣಯ್ಯ ಶೆಟ್ಟಿ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 197/2014 ಕಲಂ 448, 504, 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಕೋಟ: ದಿನಾಂಕ 25/09/2014 ರಂದು 21:00 ಗಂಟೆಗೆ ಕುಂದಾಪುರ ತಾಲೂಕು ಕೆದೂರು ಗ್ರಾಮದ ತೋಟದಮನೆ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಪ್ರತಿಮಾ (32) ತಂದೆ ರವಿರಾಜ ಶೆಟ್ಟಿ ತೋಟದ ಮನೆ ಕೆದೂರು ಗ್ರಾಮ ಕುಂದಾಪುರ ತಾಲೂಕು ರವರು ತನ್ನ ಮನೆಯ ತೋಟದಲ್ಲಿ ನಿಂತಿರುವಾಗ ಆರೋಪಿಗಳಾದ ಕೃಷ್ಣಯ್ಯ ಶೆಟ್ಟಿ, ಕೃಷ್ಣಯ್ಯ ಶೆಟ್ಟಿಯವರ ಹೆಂಡತಿ ದೇವಕಿ ಶೆಡ್ತಿ, ಕೃಷ್ಣಯ್ಯ ಶೆಟ್ಟಿಯವರ ಮಗಳು ವಿದ್ಯಾರವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜುಟ್ಟು ಹಿಡಿದು ಕೈಯಿಂದ ಹೊಡೆದಿದ್ದು ಅಲ್ಲದೇ ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ಪ್ರತಿಮಾ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 198/2014 ಕಲಂ 341, 323, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: