Friday, September 26, 2014

Daily Crime Reports as on 26/09/2014 at 17:00 Hrs


ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 25/09/2014 ರಂದು ಸಮಯ ಸುಮಾರು ರಾತ್ರಿ 09:45 ಗಂಟೆಗೆ  ಕುಂದಾಪುರ ತಾಲೂಕು ತಲ್ಲೂರು ಬಳಿ ರಾ.ಹೆ 66 ರಲ್ಲಿ ಪಿರ್ಯಾದಿ ದಿನಕರ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-20-B-9794 ರಲ್ಲಿ ಬೈಂದೂರು  ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿರುವಾಗ KA-02 -MC-9302 ನೇ ಕಾರು ಚಾಲಕನು ತನ್ನ ಬಾಬ್ತು ಕಾರನ್ನು ಅತೀವೇಗ  ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ರಕ್ತ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2014 ಕಲಂ 279, 337, ಐಪಿಸಿ ಜೊತೆಗೆ 134 (a)&(b)IMV ACT & 134 (A)(B) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ  .
  • ಕುಂದಾಪುರ : ದಿನಾಂಕ 25/09/2014  ರಂದು  ಸಮಯ ಸುಮಾರು ರಾತ್ರಿ 9:45 ಗಂಟೆಗೆ ಕುಂದಾಪುರ ತಾಲೂಕು ಆನಗಳ್ಳಿ   ಗ್ರಾಮದ ಹೇರಿಕುದ್ರು ರಾ.ಹೆ 66 ರಸ್ತೆಯಲ್ಲಿ ಆಪಾದಿತ KA02-MC-9302 ನೇ ಕಾರು ಚಾಲಕ ತನ್ನ ಕಾರನ್ನು ತಲ್ಲೂರು ಕಡೆಯಿಂದ  ಕುಂದಾಪುರ   ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ  ಬಂದು ಪಿರ್ಯಾದಿ ಗುರುರಾಜ ಇವರು ಕುಂದಾಪುರ ಕಡೆಯಿಂದ ಮಾರಣಕಟ್ಟೆಗೆ ಚಲಾಯಿಸಿ ಕೊಂಡು ಹೋಗುತ್ತಿದ್ದ KA20-B-9794  ಅಟೋರಿಕ್ಷಾಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಹಾಗೂ  ಸದ್ರಿ ಅಟೋರಿಕ್ಷಾದಲ್ಲಿ  ಪ್ರಯಾಣಿಸುತ್ತಿದ್ದ ಶಿವರಾಜ, ಬಸವರಾಜ ಹಾಗೂ ನಾಗರಾಜ ಎಂಬವರಿಗೆ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/14 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಲ್ಪೆ: ದಿನಾಂಕ 21.09.2014 ರಂದು ರಾತ್ರಿ 19.30 ಗಂಟೆ ಸಮಯದಲ್ಲಿ ಪಿರ್ಯಾದಿ ಪೂರ್ಣಚಂದ್ರ ಇವರು ಮತ್ತು ಅವರ ಕಡೆಯವರು ಉಡುಪಿ ತಾಲ್ಲೂಕು ತೆಂಕನಿಡಿಯೂರು ಗ್ರಾಮದ  ಬೊಬ್ಬರ್ಯ ಕಟ್ಟೆಯ ಬಳಿ ಇರುವಾಗ ಆರೋಪಿತ 1.ಕುಮಾರಿ ನಯನ 2.ಗಣೇಶ 3.ಮಂಜುನಾಥ  4. ಶರತ್  5.ರವಿ  6.ಉದಯ 7. ಸುನೀಲ್   8. ದೀಪಕ್   9. ನಳಿನಿ ಇವರೆಲ್ಲರೂ ಸಮಾನವಾದ ಉದ್ದೇಶ ಹೊಂದಿ ಆಕ್ರಮ ಕೂಟ ಸೇರಿಕೊಂಡು ಕೈ ಯಲ್ಲಿ ಮಾರಕ ಆಯುಧ ಗಳಾದ ಕಬ್ಬಿಣದ ರಾಡು ದೊಣ್ಣೆ ಹಿಡಿದು ಕೊಂಡಿದ್ದು ರಾಜಕೀಯ ಕಾರಣಗಳಿಗಾಗಿ ಪಿರ್ಯಾದಿದಾರರು ಮತ್ತು ಅವರ ಕಡೆಯವರ ಮೇಲೆ ಸುಳ್ಳು ಗಂಭೀರ ಆರೋಪಗಳನ್ನು ಮಾಡಿದ್ದು ಈ ವಿಚಾರವಾಗಿ ಮಾತನಾಡಿದಾಗ ಆರೋಪಿತರು ಪಿರ್ಯಾದಿದಾರರನ್ನು  ಮತ್ತು ಅವರ ಕಡೆಯವರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅವರ ಬಳಿ ಇರುವ ಆಯುಧಗಳಿಂದ ಹೊಡೆಯಲು ಬಂದಾಗ  ಪಿರ್ಯಾದಿರಾರರು ಮತ್ತು ಇತರರು ಓಡಲು ಪ್ರಾರಂಭಿಸಿದಾಗ ಆರೋಪಿತರು ರೋಶನ್ ಎಂಬುವವರನ್ನು ಅಡ್ಡಗಟ್ಟಿ ದೊಣ್ಣೆಯಿಂದ ಹೊಡೆದು ನೆಲಕ್ಕೆ ಹಾಕಿ ತುಳಿದು ಬೆದರಿಕೆ ಹಾಕಿರುತ್ತಾರೆ. ಈ ಎಲ್ಲಾ ಕಾರಣಗಳಿಂದ  ಪಿರ್ಯಾದಿದಾರರ ತಮ್ಮ ಪ್ರವೀಣ ಎಂಬುವವನು ಮಾನಸಿಕವಾಗಿ ನೊಂದು ಈತನ ವಿರುದ್ದ ಸುಳ್ಳು ದೂರು ನೀಡಿ ಮಾನಸಿಕ ಹಿಂಸೆ ಕಿರುಕುಳ ನೀಡಿ ಈ ಎಲ್ಲಾ  ವಿಚಾರಗಳಿಂದ ಪ್ರವೀಣನು  ರೋಸಿ ಹೋಗಿ ದಿನಾಂಕ 25.09.2014 ರಂದು ಬೆಳಿಗ್ಗೆ  10.15 ಗಂಟೆಗೆ ವಿಷ ಸೇವನೆ ಮಾಡಿ ಜೀವನ್ಮರಣಾ ಸ್ಥಿತಿಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಆತನು ಆತ್ಮಹತ್ಯೆ ಮಾಡಿಕೊಳ್ಳಲುಪ್ರಯತ್ನಿಸಲು ಆರೋಪಿತರೆಲ್ಲರು ಜಂಟಿಯಾಗಿ ಹೊಣೆಗಾರರಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 135/2014 ಕಲಂ 143.147.148.324.341. 504.506 .149 .116 306 IPC ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: