Friday, September 26, 2014

Daily Crime Reports as on 26/09/2014 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ: 24.09.2014 ರಂದು ಪಿರ್ಯಾಧಿದಾರರಾದ ಸತ್ಯರಾಜ್ (26) ತಂದೆ ಯೋಗೀಶ್ ಕೋಟ್ಯಾನ್ ವಾಸ ಮಾತೃ ಛಾಯಾ ಮನೆ, ದುರ್ಗಾ ನಗರ , ಹಿರಿಯಡ್ಕ ರವರು ತನ್ನ ಸ್ನೇಹಿತನ ಕೆ.ಎ.17 ಇ ಎಲ್ 2467 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ಲಿನಲ್ಲಿ ಧರ್ಮಸ್ಥಳ ಕಡೆಯಿಂದ ಬಜಗೋಳಿ ಕಡೆಗೆ ಸಹಾಸವಾರನನ್ನಾಗಿ ಸಂಜೀವ ಸಾವಳಸಂಗ್ ಎಂಬುವರನ್ನು ಕುಳ್ಳಿರಿಸಿಕೊಂಡು ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ದರ್ಮಸ್ಥಳ ಪಡುಬಿದ್ರೆ  ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುವಾಗ ಮದ್ಯಾಹ್ನ 3:15 ಗಂಟೆಗೆ ಯಾವುದೋ  ಗೂಡ್ಸ್ ವಾಹನವೊಂದರ ಚಾಲಕನು ಆತನ ಗೂಡ್ಸ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ಲಿನ ಹಿಂದಿನಿಂದ ಬಂದು ಬಲಕ್ಕೆ ತಿರುಗಿಸಿ ಮೋಟಾರ್ ಸೈಕಲ್‌ನ ಸೈಲನ್ಸರ್‌ನ  ಬಾಗಕ್ಕೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರಿಗೆ ಬಲಕಾಲಿನ ಮೊಣಗಂಟಿನ ಕೆಳಗೆ, ಬಲ ಕುತ್ತಿಗೆಗೆ, ಮೂಗಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಹಾಗೂ ಸಹ ಸವಾರ ಸಂಜೀವ ಸಾವಳಸಂಗ್ ಇವರಿಗೆ ಮುಖಕ್ಕೆ ತೀವೃ ರಕ್ತಗಾಯವಾಗಿರುತ್ತದೆ ಎಂಬುದಾಗಿ ಸತ್ಯರಾಜ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2014 ಕಲಂ 279,337  ಐ.ಪಿ.ಸಿ & 134 (A)(B) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. No comments: