Saturday, September 20, 2014

Daily Crime Reports as on 20/09/2014 at 07:00 Hrs

ಅಪಘಾತ ಪ್ರಕರಣಗಳು
  • ಕಾರ್ಕಳ: ದಿನಾಂಕ 19/09/2014 ರಂದು ಸಂಜೆ 4:05 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಮಸೀದಿ ಎದುರು ಕಾರ್ಕಳ - ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ KA-20 C-4282 ನೇ ಟಿಪ್ಪರ್ ಲಾರಿ ಚಾಲಕ ಹರೀಶ್ ಎಂಬವರು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರಿನಿಂದ  ಪಡುಬಿದ್ರೆ ಕಡೆಗೆ ಹೋಗುತ್ತಿದ್ದ ಕೆ.ಎ 19  ಡಿ 663 ನೇ ನಂಬ್ರದ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಲಾರಿ ಚಾಲಕನು ನಿಯಂತ್ರಣ ತಪ್ಪಿ ಟಿಪ್ಪರ್ ಸಮೇತ ರಸ್ತೆಯ ಎಡ ಬದಿಯ ತಗ್ಗು ಪ್ರದೇಶಕ್ಕೆ ಬಿದ್ದು ಜಖಂಗೊಂಡಿರುವುದಾಗಿದೆ ಎಂಬುದಾಗಿ ಸಯ್ಯದ್ ಹುಸೈನ್ (32) ತಂದೆ: ಹಸನಬ್ಬ, ವಾಸ: ಜುಮ್ಮಾ ಮಸೀದಿ ಬಳಿ ಅಜೆಕಾರ್, ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2014 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 19/09/2014 ರಂದು ಸಂಜೆ 06:15 ಗಂಟೆಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಅಜ್ರಿ ಕ್ರಾಸ್‌ ಬಳಿ ಆಪಾದಿತ ಬಂಗಾರಪ್ಪ ಆಚಾರಿ ಎಂಬವರು KA.15.L 5145 ನೇ ಬೈಕ್‌ನ್ನು ಅಂಪಾರು ಕಡೆಯಿಂದ ನೇರಳಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು.ನೇರಳಕಟ್ಟೆಯಿಂದ ಅಂಪಾರು ಕಡೆಗೆ KA 20 ED 8123 ನೇ ದ್ವಿಚಕ್ರವನ್ನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸವಿತರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಿತಾಳು ದ್ವಿಚಕ್ರ ವಾಹನ  ಸಮೇತವಾಗಿ ರಸ್ತೆಗೆ ಬಿದ್ದ ಪರಿಣಾಮ ಸವಿತಾಳ ಎರಡು ಕೈಗಳಿಗೆ ಒಳನೋವು ಹಾಗೂ ಬಲಕಾಲಿನ ಮೊಣ ಗಂಟಿನ ಕೆಳಗಡೆ ಹಾಗೂ ಮೈ ಕೈ  ರಕ್ತಗಾಯ  ಹಾಗೂ  ಒಳನೋವು  ಉಂಟಾಗಿದ್ದು,  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಂ,ಸಿ, ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಚಂದ್ರಶೇಖರ ಶೆಟ್ಟಿ (45) ತಂದೆ ಸಂಜೀವ ಶೆಟ್ಟಿ ವಾಸ: ಅನುಗ್ರಹನಿವಾಸ,ಗುಲ್ವಾಡಿ ಗ್ರಾಮ ಕರ್ಕುಂಜೆ ಅಂಚೆ, ಕುಂದಾಪುರ  ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇಸ್ಪೀಟು ದಾಳಿ ಪ್ರಕರಣ

  • ಹಿರಿಯಡ್ಕ: ದಿನಾಂಕ 19/09/2014 ರಂದು ಸಂಜೆ 18:05 ಗಂಟೆಗೆ ಉಡುಪಿ ತಾಲ್ಲೂಕು ಪೆರ್ಡೂರು ಗ್ರಾಮದ  ಶ್ಯಾನರಬೆಟ್ಟು ಎಂಬಲ್ಲಿರುವ ರಘುಶೆಟ್ಟಿ ಎಂಬವರ ಮನೆಯ ಬಳಿಯ ಅರೆಕಲ್ಲು ಪಾದೆಯಲ್ಲಿ ಆರೋಪಿತರುಗಳಾದ 1) ರಘುಶೆಟ್ಟಿ ತಂದೆ: ತೇಜುಶೆಟ್ಟಿ ಶಾನರಬೆಟ್ಟು ಪೆರ್ಡೂರು ಅಂಚೆ & ಗ್ರಾಮ ಉಡುಪಿ ತಾಲ್ಲೂಕು, 2) ದೇವು ಪೂಜಾರಿ ತಂದೆ: ಐತು ಪೂಜಾರಿ, ವಾಸ: ಹೊಸಂಗಡಿ, ಪೆರ್ಡೂರು ಅಂಚೆ & ಗ್ರಾಮ ಉಡುಪಿ ತಾಲ್ಲೂಕು, 3) ಸಂತೋಷ್ ಪೂಜಾರಿ ತಂದೆ: ಶ್ರೀಧರ ಪೂಜಾರಿ, ವಾಸ: ಅಲಂಗಾರು, ಪೆರ್ಡೂರು ಅಂಚೆ & ಗ್ರಾಮ ಉಡುಪಿ ತಾಲ್ಲೂಕು. 4) ಪಕ್ರುದ್ದೀನ್ ತಂದೆ:  ಹುಸ್ಸೇನ್ ಸಾಹೇಬ್,  ವಾಸ: ಪುತ್ತಿಗೆ, ಬೊಮ್ಮರಬೆಟ್ಟು ಗ್ರಾಮ, ಹಿರಿಯಡ್ಕ ಅಂಚೆ, ಉಡುಪಿ ತಾಲ್ಲೂಕು ಎಂಬವರು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತಿದ್ದ ವೇಳೆ ಉಡುಪಿ ಜಿಲ್ಲೆ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಆರ್ ಶಂಕರ್ ರವರು ಸಿಬ್ಬಂದಿಯೊಂದಿಗೆ ದಾಳಿ ನೆಡೆಸಿ ಆರೋಪಿತರರನ್ನು ವಶಕ್ಕೆ ಪಡೆದು ಅವರು ಜೂಜಟಕ್ಕೆ ಬಳಸಿದ ನಗದು ರೂಪಾಯಿ 20,240/- ಮತ್ತು  ಜೂಜಾಟಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.     

No comments: