Friday, September 19, 2014

Daily Crime Reports as on 19/09/2014 at 19:30 Hrs

ಅಪಘಾತ ಪ್ರಕರಣ
  • ಮಲ್ಪೆ: ಫಿರ್ಯಾದಿದಾರರಾದ ರತ್ನಾಕರ ನಾಯ್ಕ (48) ತಂದೆ: ಗೋಪಾಲ ನಾಯ್ಕ ವಾಸ: “ನಿಸರ್ಗ”  ಅಶೋಕ ನಗರ ಪುತ್ತೂರು ಗ್ರಾಮ  ಎಂಬವರ ತಂದೆ ಸುಮಾರು 70 ವರ್ಷ ಪ್ರಾಯದ ಗೋಪಾಲ ನಾಯ್ಕ ಎಂಬವರು ದಿನಾಂಕ 19/09/2014 ರಂದು ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ ವಾಕಿಂಗ್ ಗಾಗಿ ಕೆಳಾರ್ಕಳಬೆಟ್ಟು  ಗ್ರಾಮದ ಶ್ರೀನಗರ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗರಡಿಮಜಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಕೆಎ 20.ಡಿ.0542 ನೇ ಗೂಡ್ಸ್ ವಾಹನದ ಚಾಲಕ ಅಶೋಕ ಎಂಬಾತನು ತನ್ನ ಗೂಡ್ಸ್  ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆದು ಪರಿಣಾಮ ಫಿರ್ಯಾದಿದಾರರ ತಂದೆಯವರು ರಸ್ತೆಗೆ ಬಿದ್ದು ತಲೆಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 19/09/2014 ರಂದು ಮಧ್ಯಾಹ್ನ 01:00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ರತ್ನಾಕರ ನಾಯ್ಕ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2014 ಕಲಂ 279, 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಬೈಂದೂರು: ಪಿರ್ಯಾಧಿದಾರರಾದ ಸುಚಿತ್ರ ಶೆಟ್ಟಿ (33) ಗಂಡ: ವಸಂತ ಶೆಟ್ಟಿ ವಾಸ: ಗುಡ್ಡೆಮನೆ ಯಡೇರಿ ಕಾಲ್ತೋಡು ಗ್ರಾಮ ಕುಂದಾಪುರ ತಾಲೂಕು ಎಂಬವರು ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ ಯಡೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ದಿನಾಂಕ 19/09/2014 ರಂದು ಬೆಳಿಗ್ಗೆ 10:15 ಗಂಟೆಗೆ ಯಡೇರಿ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಸಮಯ ಆಪಾದಿತರಾದ ಹಳೆ ಕಾಲ್ತೋಡಿನ ವಾಸಿ ಜಲಜಾಕ್ಷಿ ಮತ್ತು ದೀಪಿಕಾ ಎಂಬವವರು ಅಂಗನವಾಡಿಯ ಒಳಗೆ ಪ್ರವೇಶಿಸಿ ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ನೀನು ನಿನ್ನೆ ದಿನ ನಮ್ಮ ಮಗುವಿಗೆ ಅರ್ದ ಚಿಕ್ಕಿ ಕೊಟ್ಟಿದ್ದೀರಿ ಉಳಿದ ಮಕ್ಕಳಿಗೆ ಇಡೀ ಚಿಕ್ಕಿಯನ್ನು ಕೊಟ್ಟೀದ್ದಿರಿ ಎಂದು ಹೇಳಿ ಜಲಜಾಳು ಪಿರ್ಯಾಧಿದಾರರನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೇ ಅಲ್ಲಿಯೇ ಇದ್ದ ಹಿಡಿಸೂಡಿಯಿಂದ ಪಿರ್ಯಾದಿದಾರರ ಎಡಕಾಲ ತೊಡೆಗೆ, ಬೆನ್ನಿಗೆ ಹೊಡೆದು ಪಿರ್ಯಾಧಿದಾರರಿಗೆ ಅವಮಾನ ಮಾಡಿರುತ್ತಾಳೆ. ಆ ಸಮಯ ಅಲ್ಲಿಯೇ ಇದ್ದ ದೀಪಿಕಾಳು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದಿರುವುದಾಗಿದೆ ಎಂಬುದಾಗಿ ಸುಚಿತ್ರ ಶೆಟ್ಟಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2014 ಕಲಂ 448,504,506,324,323,355 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಸ್ವಾಭಾವಿಕ ಮರಣ  ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಬಿ. ಇಸ್ಮಾಯಿಲ್ (65) ತಂದೆ ಬಿ ಅಹಮ್ಮದ್ ಸಾಹೇಬ್ ಸಾಹಿದ್ ಮಂಜಿಲ್,  ಜದೀದ್ ಮಸೀದಿ ಬಳಿ, ಪಡುತೋನ್ಸೆ ಗ್ರಾಮ ಎಂಬವರ ಮಗ ಜಮೀರ್ ಭೈಜಿ (28) ಈತನು ಉಡುಪಿ ಕರಾವಳಿ ಬಳಿ ಮುಂಬೈ ಬಜಾರ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಈತನಿಗೆ ಸುಮಾರು 3-4 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು, ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ದಿನಾಂಕ 16/09/2014 ರಂದು ಬೆಳಿಗ್ಗೆ 10:00 ಗಂಟೆಗೆ ತನ್ನ ಮೋಟಾರು ಸೈಕಲಿನಲ್ಲಿ ಉಡುಪಿಗೆ ಕೆಲಸಕ್ಕೆ ಹೋದವನು ರಾತ್ರಿ ಮನೆಗೆ ಬಂದಿರಲಿಲ್ಲ. ಅವನ ಬಗ್ಗೆ ಹುಡುಕಾಡಿದ್ದು ದಿನಾಂಕ 18/09/2014 ರಂದು ಮಲ್ಪೆ ಠಾಣೆಯಲ್ಲಿ ಪಿರ್ಯಾದಿ ನೀಡಿದ್ದು, ಅ.ಕ್ರ 131/2014 ರಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ದಿನಾಂಕ 19/09/2014 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರಿಗೆ ಮಾಹಿತಿ ಸಿಕ್ಕಿ ಕೆಮ್ಮಣ್ಣು ಸಮೀಪದ ನದಿಯಲ್ಲಿ ಬಂದು ನೋಡಿದಾಗ ಮರದ ರೆಂಬೆಗೆ ತಾಗಿ ನೀರಿನಲ್ಲಿ ಕವುಚಿದ ಸ್ಥಿತಿಯಲ್ಲಿ ನೋಡಿದ್ದು, ಪಿರ್ಯಾದಿದಾರರು ಬಟ್ಟೆಗಳನ್ನು ಗುರುತಿಸಿದ್ದು, ಇದು ತನ್ನ ಮಗನಾದ ಜಮೀರ್ ನದ್ದೇ ಶವವಾಗಿದೆ. ಶವ ಸಿಕ್ಕಿದ ಜಾಗದ ಸಮೀಪ ಮಗನ ಮೋಟಾರು ಸೈಕಲ್ ಕೂಡಾ ಬಿದ್ದಿರುತ್ತದೆ ಎಂಬುದಾಗಿ ಬಿ. ಇಸ್ಮಾಯಿಲ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 44/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: