Friday, September 19, 2014

Daily Crime Reports as on 19/09/2014 at 07:00 Hrs

ಗಂಡಸು ಕಾಣೆ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಬಿ ಇಸ್ಮಾಯಲ್ ಸಾಹೇಬ್ ತಂದೆ ಬಿ ಅಹಮ್ಮದ್ ಸಾಹೇಬ್ ಸಾಹಿರ್ ಮಂಜಿಲ್ ಜದೀದ ಮಸೀದಿ ಬಳಿ ಹೂಡೆ ಪಡುತೋನ್ಸೆ ಗ್ರಾಮ ಎಂಬವರ ಮಗ ಭೈಜಿ ಜಮೀರ್ ಪ್ರಾಯ 28 ವರ್ಷ ಎಂಬವರು ದಿನಾಂಕ 16.09.2014 ರಂದು ಎಂದಿನಂತೆ ಬೆಳಿಗ್ಗೆ ಮನೆಯಿಂದ ಉಡುಪಿ ಬೈಪಸ್ ಬಳಿ ಇರುವ ಬಾಂಬೆ ಬಜಾರಿನಲ್ಲಿ  ಕೆಲಸಕ್ಕೆಂದು ತನ್ನ ಮ್ಯಾಕ್ಸ್ 100 ಕೆ.ಎ 20 ಎಲ್ 3838 ಮೋಟಾರ್ ಸೈಕಲಿನಲ್ಲಿ ಹೋಗಿದ್ದು ಕೆಲಸ ಮುಗಿಸಿ  ರಾತ್ರಿ 9.00 ಗಂಟೆಗೆ ಕೆಲಸದಿಂದ ಹೊರಟವನು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಬಿ ಇಸ್ಮಾಯಲ್ ಸಾಹೇಬ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2014 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ
  • ಪಡುಬಿದ್ರಿ: ದಿನಾಂಕ 18.09.2014 ರಂದು ಬೆಳಿಗ್ಗೆ 9:30 ಗಂಟೆಗೆ ಉಚ್ಚಿಲ ಬಡಾ ಗ್ರಾಮದ ಉಚ್ಚಿಲದಿಂದ ಪಣಿಯೂರುಗೆ ಹೋಗುವ ದಾರಿಯಲ್ಲಿ  ಜನಪ್ರಿಯ ಮಿಲ್ಲಿನ ಹತ್ತಿರ ಕೆಎ-20-9157 ನೇ ಬಸ್ಸಿನ ಚಾಲಕ ಬಸ್ಸನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದರ ಪರಿಣಾಮ ಬಸ್ಸಿನ ಹಿಂಬದಿಯ ಚಕ್ರ ಸ್ಪೋಟಗೊಂಡು ಬಸ್ಸಿನಲ್ಲಿ ಹಿಂಬದಿಯ ಚಕ್ರದ ಮೇಲ್ಬಾಗದಲ್ಲಿ ಕುಳಿತು ಕೊಂಡಿದ್ದ ಪಿರ್ಯಾದಿದಾರರಾದ ಶಂಕರ ಸಾಲ್ಯಾನ್  (62), ತಂದೆ: ದಿ. ಚಂದು ಸಾಲ್ಯಾನ್  ವಾಸ: ಇದ್ರ ಪ್ರಸ್ಥ, ಅಗ್ರಹಾರ ರಸ್ತೆ, ಏಣಗುಡ್ಡೆ ಗ್ರಾಮ, ಕಟಪಾಡಿ ಅಂಚೆ, ಉಡುಪಿ ತಾಲೂಕು ರವರಿಗೆ ಸ್ಪೋಟಗೊಂಡ ರಭಸಕ್ಕೆ ಬಸ್ಸಿನ ಪ್ಲಾಟ್ ಫಾರ್ಮಿನ ತುಂಡು ಎಡ ಕಾಲಿಗೆ ತಾಗಿ ಗಾಯವಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಶಂಕರ ಸಾಲ್ಯಾನ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಹುಡುಗ ಕಾಣೆ ಪ್ರಕರಣ
  • ಪಡುಬಿದ್ರಿ: ದಿನಾಂಕ 18/09/2014 ರಂದು ಎಲ್ಲೂರು ಗ್ರಾಮದ ಕುಂಜೂರು ದುರ್ಗಾನಗರದ ನಿವಾಸಿಯಾದ ಪಿರ್ಯಾದಿದಾರರಾದ ರತ್ನ (33ಗಂಡ ಚಂದ್ರ ಸಾಲ್ಯಾನ್ ಎಂಬವರ ಎರಡನೇ ಮಗನಾದ 17 ವರ್ಷ ಪ್ರಾಯದ ಸುಮನ್ ಕುಮಾರ್ ಎಂಬಾತನು ಅದಮಾರು ಪಿಪಿಸಿ ಕಾಲೇಜಿನ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿದ್ದು ಬೆಳಿಗ್ಗೆ 08:45 ಗಂಟೆಗೆ ಕಾಲೇಜು ಸಮವಸ್ತ್ರದಲ್ಲಿ ಕಾಲೇಜಿಗೆಂದು ತೆರಳಿದವನು ಸಂಜೆ ಮನೆಗೆ ಬಾರದೇ ಇದ್ದು, ಶಾಲೆಯ ಅವನ ಸಹಪಾಠಿಗಳಲ್ಲಿ ವಿಚಾರಿಸಿದಾಗ ಆತನು ಶಾಲೆಗೆ ಹಾಜರಾಗದೇ ಇದ್ದುದಾಗಿ ಹಾಗೂ ಇದುವರೆಗೂ ಮನೆಗೆ ಬಂದಿರುವುದಿಲ್ಲ ಎಂಬುದಾಗಿ ರತ್ನ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2014 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: