Thursday, September 18, 2014

Daily Crime Reports as on 18/09/2014 at 07:00 Hrs

ಅಪಘಾತ ಪ್ರಕರಣಗಳು
  • ಶಂಕರನಾರಾಯಣ: ದಿನಾಂಕ 17-09-2014 ರಂದು ಬೆಳಿಗ್ಗೆ 7:00 ಗಂಟೆಗೆ ಆರೋಪಿ GA 05 T 2063  ನಂಬ್ರದ ಲಾರಿಯನ್ನು ಕುಂದಾಪುರ ತಾಲೂಕು ಕುಂದಾಪುರ ಹೋಬಳಿಯ 76 ಹಾಲಾಡಿ ಗ್ರಾಮದ ಹಾಲಾಡಿ ಜಂಕ್ಷನ್‌ನಲ್ಲಿ ಶಂಕರನಾರಾಯಣ ಕಡೆಯಿಂದ ಹಾಲಾಡಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಾಲಾಡಿ ಕಡೆಯಿಂದ ಶಂಕರನಾರಾಯಣ ಕಡೆಗೆ ಜಯಂತ್‌ಶೆಟ್ಟಿ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ KA 20 EE 1526 ನಂಬ್ರದ ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಜಯಂತ್‌ ಶೆಟ್ಟಿ ಹಾಗೂ ಸಹ ಸವಾರ ಪಿರ್ಯಾದಿದಾರರಾದ ಗಣೇಶ್‌ ಬಾಯರಿ (21) ತಂದೆ: ಮಹಾಬಲ ಬಾಯರಿ ವಾಸ: ರಟ್ಟಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವರು ಬೈಕ್‌ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುವುದಾಗಿದೆ ಎಂಬುದಾಗಿ ಗಣೇಶ್‌ ಬಾಯರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2014 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ದಿನಾಂಕ 17/09/2014 ರಂದು ಪಿರ್ಯಾದಿದಾರರಾದ ಲಕ್ಷಣ ( 54) ತಂದೆ: ದಿ. ಅಪ್ಪು ಬೆಳ್ಚಡ, ವಾಸ: ವಿಟ್ಲ ಕಸಬ ಗ್ರಾಮ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ ರವರು ಉಡುಪಿ ವಿಟ್ಲಪಿಂಡಿ ಉತ್ಸವ ನೋಡಲು ತನ್ನ ಮನೆಯಾದ ವಿಟ್ಲದಿಂದ ಬಸ್ಸಿನಲ್ಲಿ ಹೊರಟು ಉಡುಪಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಮಧ್ಯಾಹ್ನ 12.45 ಗಂಟೆಗೆ ಉಡುಪಿ ಜಾಮೀಯಾ ಮಸೀದಿ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಗುಜರಿ ಅಂಗಡಿಯ ಎದುರಿನ ರಸ್ತೆಯ ಬದಿಯಲ್ಲಿ ರಸ್ತೆ ದಾಟುವರೇ ನಿಂತುಕೊಂಡಿರುವಾಗ ಸಂಸ್ಕೃತ ಕಾಲೇಜ್ ಕಡೆಯಿಂದ ಬೃಂದಾವನ ಜಂಕ್ಷನ್ ಕಡೆಗೆ ಕೆಎ-20-ಎಲ್‌-8008 ನೇ ನಂಬ್ರದ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್‌ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಅವರನ್ನು ಮೋಟಾರು ಸೈಕಲ್ ಸವಾರ ಹಾಗೂ ಅಲ್ಲಿ ಸೇರಿದವರು ಮೇಲಕ್ಕೆತ್ತಿ ಉಪಚರಿಸಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಎಡಕೈ ಮುಂಗೈ ಬಳಿ ಒಳ ಜಖಂ ಆಗಿರುತ್ತದೆ.  ನಂತರ ಡಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ಪ್ರಕಾಶ್  ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ ಕೆಎ-20-ಎಲ್‌-8008 ನೇ ನಂಬ್ರದ ಮೋಟಾರು ಸೈಕಲಿನ ಸವಾರ ಪ್ರಕಾಶ್ ರವರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಲಕ್ಷಣ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2014 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಶಂಕರನಾರಾಯಣ: ದಿನಾಂಕ 16-09-2014 ರಂದು 15:00 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸಿದ್ದಾಪುರದ ಗುಜರಿ ಅಂಗಡಿ ಬಳಿ ಪಿರ್ಯಾದಿದಾರರಾದ ಪ್ರಭಾಕರ ಪೂಜಾರಿ (35) ತಂದೆ ರಘು ಪೂಜಾರಿ, ವಾಸ ಕಣ್ಣಿಕೇರಿ, ಕಮಲಶಿಲೆ ಗ್ರಾಮ ಕುಂದಾಪುರ ತಾಲೂಕು ರವರು ನಿಂತುಕೊಂಡಿದ್ದಾಗ ಆರೋಪಿ ಶಂಕರ ಮತ್ತು ಇತರ 3 ಜನರು KA 53 908 ನಂಬ್ರದ ಮಾರುತಿ ಓಮ್ನಿ ಕಾರಿನಲ್ಲಿ ಬಂದು ಪಿರ್ಯಾದಿದಾರರಲ್ಲಿ ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿದ್ದು ಪಿರ್ಯಾದಿದಾರರು ಕಾರಿನಲ್ಲಿ  ಕೂತುಕೊಂಡಾಗ ಆರೋಪಿತರು ಪಿರ್ಯಾದಿದಾರರನ್ನು ಕಮಲಶಿಲೆ ಗೋರಿಜೆಡ್ಡು ಎಂಬಲ್ಲಿ ಕರೆದುಕೊಂಡು ಹೋಗಿ ಪಿರ್ಯಾದಿದಾರರನ್ನು ಕಾರಿನಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕೈಕಾಲು ಮುರಿದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ. ಪಿರ್ಯಾದಿದಾರರ ಅಣ್ಣನಿಗೆ ಆರೋಪಿ ಶಂಕರನು ಹೊಡೆದ ಬಗ್ಗೆ ಪಿರ್ಯಾದಿದಾರರಿಗೆ ಮತ್ತು ಆರೋಪಿ ಶಂಕರನಿಗೆ ದಿನಾಂಕ 16-09-2014 ರಂದು ಆಜ್ರಿಯಲ್ಲಿ ಮಾತುಕತೆ ಆಗಿದ್ದು ಇದೇ ಉದ್ದೇಶದಿಂದ ಆರೋಪಿಗಳು ಹಲ್ಲೆ ನಡೆಸಿದ್ದಾಗಿದೆ ಎಂಬುದಾಗಿ ಪ್ರಭಾಕರ ಪೂಜಾರಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2014 ಕಲಂ 341, 504, 506 323 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಹೆಂಗಸು ಮತ್ತು ಮಕ್ಕಳು ಕಾಣೆ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ನಾರಾಯಣಿ (45) ಗಂಡ ರಾಮ, ವಾಸ ಹೊಸೂರು ಕೇರಿ, ಯೆಡ್ತೆರೆ ಗ್ರಾಮ, ಕುಂದಾಪುರ ತಾಲೂಕು ಎಂಬವರ ಮಗಳು 30 ವರ್ಷ ಪ್ರಾಯದ ಶ್ರೀಮತಿ ಯಮುನಾ ಎಂಬವರು ವಿವಾಹಿತರಾಗಿದ್ದು, ದಿನಾಂಕ 16-09-2014 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿದಾರರು ಕೆಲಸಕ್ಕೆ ಹೋಗುವಾಗ ಯಮುನಾಳು ತನ್ನ ಮಕ್ಕಳನ್ನು ಶೀರೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮದ್ದು ತರುವುದಾಗಿ ಹೇಳಿದ್ದು, ನಂತರ ಫಿರ್ಯಾದಿದಾರರು ಸಂಜೆ 05-00 ಗಂಟೆಯ ವೇಳೆಗೆ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ವಾಪಾಸ್ಸು ಬಂದಾಗ ಶ್ರೀಮತಿ ಯಮುನಾ ಹಾಗೂ ಆಕೆಯ ಮಕ್ಕಳಾದ 6 ವರ್ಷ ಪ್ರಾಯದ ಕುಮಾರಿ ಭವ್ಯಾ ಹಾಗೂ 4 ವರ್ಷ ಪ್ರಾಯದ ಮಣಿಕಂಠ ಎಂಬವರು ಮನೆಯಲ್ಲಿ ಇರದೇ ಇದ್ದದುರಿಂದ ಫಿರ್ಯಾದಿದಾರರು ತನ್ನ  ಸಂಬಂಧಿಕರುಗಳ ಹಾಗೂ ಪರಿಚಯಸ್ಥರ ಮನೆಗೆ ಹೋಗಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ. ಪಿರ್ಯಾದಿದಾರ ಮಗಳು ಶ್ರೀಮತಿ ಯಮುನಾಳು ತನ್ನ ಮಕ್ಕಳಾದ ಕುಮಾರಿ ಭವ್ಯಾ ಹಾಗೂ ಮಣಿಕಂಠ ಎಂಬುವವರ ಜೊತೆ ದಿನಾಂಕ 16-09-2014 ರಂದು ಬೆಳಿಗ್ಗೆ 08-00 ಗಂಟೆಯಿಂದ ಶೀರೂರು ಆಸ್ಪತ್ರೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಶ್ರೀಮತಿ ನಾರಾಯಣಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2014 ಕಲಂ ಹೆಂಗಸು ಮತ್ತು ಮಕ್ಕಳು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: