Sunday, September 14, 2014

Daily Crime Reports As On 14/09/2014 At 07:00 Hrsಆತ್ಮಹತ್ಯೆ ಪ್ರಕರಣ

  • ಮಲ್ಪೆ: ಫಿರ್ಯಾದಿ ಸದಾಶಿವ (38) ತಂದೆ: ಬೋಜ ವಾಸ: ಕಾವೇರಿ ನಿಲಯ ಶಾನಭಾಗ್ ಜೆಡ್ಡ ಕೊಡವೂರು ಗ್ರಾಮ ಇವರ ಅಣ್ಣನಾದ ಸುಮಾರು 47 ವರ್ಷ ಪ್ರಾಯದ ರವಿ ಎಂಬುವನು ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದು ,ಆತನು ತನ್ನ ಕಾಯಿಲೆಯ ಬಗ್ಗೆ ಕೆ ಎಂ,ಸಿ ಮಣಿಪಾಲ, ಹಾಗೂ ಬಾಳಿಗಾ ಆಸ್ಪತ್ರೆ ದೊಡ್ಡಣ್ಣ ಗುಡ್ಡೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸಗೊಂಡು ಈ ದಿನ ದಿನಾಂಕ: 13/09/2014 ರಂದು ಮಧ್ಯಾಹ್ನ 03:30 ಗಂಟೆಯಿಂದ 05:00 ಗಂಟೆಯ ಮಧ್ಯಾವದಿಯಲ್ಲಿ ಶಾನ್ ಭಾಗ್ ಜಿಡ್ಡದಲ್ಲಿರುವ ತನ್ನ  ಮನೆಯ ಟಾಯೋಲೇಟ್ ನ ಪಕ್ಕಸಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಠಾಣಾ ಯು.ಡಿ.ಆರ್‌ ನಂ. 41/2014 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ನಡೆಸಿ  ಜೀವ ಬೆದರಿಕೆ ಹಾಕಿದ ಪ್ರಕರಣ

  • ಕುಂದಾಪುರ: ಪಿರ್ಯಾದಿ ಅರುಣ ಆರ್‌.ಎಸ್‌ (31) ತಂದೆ: ರಾಮಚಂದ್ರ ಶೇರಿಗಾರ್‌  ವಾಸ: ಗೋವೆಬೆಟ್ಟು, ಹಂಗಳೂರು ಗ್ರಾಮ, ಕುಂದಾಪುರ ತಾಲೂಕು ಇವರು ಗಂಗೊಳ್ಳಿ ಸಂತೋಷ ಎಂಬಾತನಿಗೆ ರೂ. 5,000/-ವನ್ನು ಸಾಲ ನೀಡಿದ್ದು, ದಿನಾಂಕ 12.09.2014 ರಂದು ಸಂಜೆ 6:30 ಗಂಟೆಗೆ ನೀಡಿದ ಸಾಲವನ್ನು ವಾಪಾಸು ಕೇಳಿದ್ದಕ್ಕೆ ಆಪಾದಿತರು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಸಿಂಡಿಕೇಟ್‌ ಬ್ಯಾಂಕ್‌ ಬಳಿ ಮೂವರು ಆಪಾದಿತರುಗಳಾದ 1) ಸಂತೋಷ 2) ಗೋವಿಂದ ಮೋಗವೀರ 3) ನಾಗರಾಜ ಶೇರಿಗಾರ ಬಂದು ಹಲ್ಲೆಮಾಡಿ ಅಲ್ಲಿಯೇ ಇದ್ದ ಕಲ್ಲಿನಿಂದ ಪಿರ್ಯಾದುದಾರರ ಕಾಲಿಗೆ ಹೊಡೆದು ಎಡಕಾಲಿನ ಗಂಟಿನ ಬಳಿ ಒಳನೋವು ಉಂಟುಮಾಡಿ, ಹಣ ವಾಪಾಸು ಕೊಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 319/2014 ಕಲಂ: 324, 506 ಜೊತೆಗೆ 34  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   

ಅಪಘಾತ ಪ್ರಕರಣ

  • ಕಾಪು: ದಿನಾಂಕ 02.09.2014 ರಂದು 15:45 ಗಂಟೆಗೆ ಮೂಳೂರು ಗ್ರಾಮದ ಪಂಚಮಿ ಕಾಂಪ್ಲೆಕ್ಸ  ಬಳಿ ಪಿರ್ಯಾದಿ ದಾಮೋದರ್ ಹೆಗ್ಡೆ  (78) ತಂದೆ:ದಿ ಶೇಷು ಹೆಗ್ಡೆ  ವಾಸ: ಪಂಚಮಿ ಕಾಂಪ್ಲೆಕ್ಸ್ ಮೂಳರು ಗ್ರಾಮ  ಇವರು  ಅವರ ಬಾವ ದೊಡ್ಡಣ್ಣ ತೋಟದಿಂದ ಮನೆ ಕಡೆಗೆ ರಾಹೆ.66ರ ಪೂರ್ವ ಬದಿ ಮಣ್ಣಿನ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಅಂದರೆ ಉಡುಪಿ ಯಿಂದ ಮಂಗಳೂರು ಕಡೆಗೆ ಓರ್ವ  ಅಪರಿಚಿತ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಮಡು ಬಂದು  ಒಮ್ಮೆಲೆ ಪೂರ್ವ ಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ .ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲು ಸೊಂಟ ಮತ್ತು ಬಲ ಕಾಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ನ್ಯೂ ಸಿಟಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2014 ಕಲಂ 279 338 ಐಪಿಸಿ,134 (ಎ) ಮತ್ತು (ಬಿ ) ಐ ಎಮ್ ವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿತನಿಖೆ ಕೈಗೊಳ್ಳಲಾಗಿದೆ.

No comments: