Saturday, September 13, 2014

Daily Crime Reports As On 13/09/2014 At 19:30 Hrs ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 13/09/2014 ರಂದು 13.00 ಗಂಟೆಗೆ ಉಪ್ಪೂರು ಗ್ರಾಮದ ಉಗ್ಗೇಲ್ಬೆಟ್ಟು ಸೇತುವೆಯಿಂದ ಸುಮಾರು 100 ಮೀಟರ್ ದೂರ ರೈಲ್ವೇ ಟ್ರಾಕ್ ಬಳಿ ತೋಡಿನಲ್ಲಿ ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಕೊಳೆತ ಶವ ಇರುವುದನ್ನು ಪಿರ್ಯಾದಿದಾರರಾದ ಮಹೇಶ್ ಕೋಟ್ಯಾನ್ (40) ತಂದೆ ದಿ. ನಾರಾಯಣ ಪೂಜಾರಿ, ವಾಸ ಶ್ರೀ ಗೌತಮ್ ಉಗ್ಗೇಲ್ಬೆಟ್ಟು ಉಪ್ಪೂರು ಗ್ರಾಮ ಉಡುಪಿ ತಾಲೂಕು ಇವರು ನೋಡಿದ್ದು, ಸದರಿ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಬಿದ್ದು ಅಥವಾ ರೈಲ್ವೆ ಹಳಿಯ ಬಳಿ ನಡೆದುಕೊಂಡು ಹೋಗುವಾಗ ರೈಲು ತಾಗಿ ಸಮೀಪದ ನೀರಿನ ತೋಡಿಗೆ ಬಿದ್ದು  ಮೃತಪಟ್ಟಿರಬಹುದು ಮರಣದಲ್ಲಿ ಬೇರೆ ಸಂಶಯವಿರುವುದಿಲ್ಲ ಎಂಬುದಾಗಿ ಮಹೇಶ್ ಕೋಟ್ಯಾನ್ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 50/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರು  ಗ್ರಾಮದ ಬೋರ್ಕಟ್ಟೆ ಎಂಬಲ್ಲಿ ವಾಸವಾಗಿರುವ ಪಿರ್ಯಾದುದಾರರಾದ ಸುನೀಲ್ (25), ತಂದೆ: ಕುಂಜೀರ, ವಾಲ್ಪಾಡಿ ಶಿರ್ತಾಡಿ, ಮಂಗಳೂರು  ತಾಲೂಕು ಇವರ ಮಾವ ಸುಮಾರು 45 ವರ್ಷ ಪ್ರಾಯದ ಸುಂದರ ಯಾನೆ ಕುಂಜೀರ  ಎಂಬವರು ದಿನಾಂಕ 13.9.2014 ರಂದು 12:30 ಗಂಟೆಗೆ ಮನೆಯ ಎದುರು ಇರುವ ಬಾವಿಯ ರಾಟೆಗೆ ಹಗ್ಗ ಕಟ್ಟಿ ಅದರಿಂದ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ,ಮಾಡಿಕೊಂಡಿರುವುದಾಗಿದೆ. ಮೃತರು ಐದು ವರ್ಷ ದಿಂದ ಹೆಂಡತಿ ಮಕ್ಕಳಿಂದ ದೂರವಿದ್ದು, ಮೂರು ತಿಂಗಳ ಹಿಂದೆ ತನ್ನೊಂದಿಗೆ ವಾಸವಿದ್ದ ತಾಯಿ ಕೂಡ ತೀರಿಕೊಂಡಿದ್ದರಿಂದ ಇದೇ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಸುನೀಲ್ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 38/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ

No comments: