Saturday, September 13, 2014

Daily Crime Reports as on 13/09/2014 at 17:00 Hrs



ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಗಂಗೊಳ್ಳಿ: ದಿನಾಂಕ  12/09/2014  ರಂದು ರಾತ್ರಿ ಗಂಗೊಳ್ಳಿ ಪೊಲೀಸ್  ಠಾಣಾ  ಪಿ.ಎಸ್.ಐ  ಗೋವರ್ಧನ ಎಂ  ರವರಿಗೆ ಮಾರುತಿ  ಓಮ್ನಿ    ಕಾರು  ಕೆಎ. 20.ಬಿ. 2334   ನೇಯದರಲ್ಲಿ  ಗಂಗೊಳ್ಳಿ ಕಡೆಗೆ  ದನ ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ  ರಾತ್ರಿ 11.15 ಗಂಟೆಗೆ ಓಮ್ನಿ   ಕಾರು  ಪರಿಶೀಲಿಸಲಾಗಿ ಕಾರಿನ ಹಿಂಭಾಗದಲ್ಲಿ ಎರಡು ಎತ್ತುಗಳನ್ನು ತುಂಬಿಸಿದ್ದು,  ಅವುಗಳನ್ನು  ನೈಲಾನ್  ಹಗ್ಗದಿಂದ ಕಾಲುಗಳನ್ನು ಕಟ್ಟಿ ದನ ತಪ್ಪಿಸಿಕೊಳ್ಳದಂತೆ  ಹಿಂಸಾತ್ಮಕ ರೀತಿಯಲ್ಲಿ  ಕಟ್ಟಿ  ಮಲಗಿಸಿದ್ದು ಕಂಡುಬಂತು.  ವಾಹನದ  ಚಾಲಕನನ್ನು  ವಿಚಾರಿಸಲಾಗಿ ಆತನು  ತನ್ನ    ಹೆಸರು  ಮಹಮ್ಮದ್  ಹನೀಫ್ ಪ್ರಾಯ  35 ವರ್ಷ,  ತಂದೆ  ಮುನ್ನಿ  ಅಬ್ದುಲ್  ಕಾದರ್,  ವಾಸ:  5  ಸೆಂಟ್ಸ್  ಭರತ್  ನಗರ,  ಗುಜ್ಜಾಡಿ  ಗ್ರಾಮ,  ಕುಂದಾಪುರ  ತಾಲೂಕು.  ಎಂದು  ತಿಳಿಸಿದ್ದು,  ಕಾರಿನ ಚಾಲಕನ ಪಕ್ಕದ   ಸೀಟಿನಲ್ಲಿ  ಕುಳಿತಿದ್ದ  ವ್ಯಕ್ತಿಯನ್ನು  ವಿಚಾರಿಸಲಾಗಿ  ಆತನು  ತನ್ನ ಹೆಸರು,  ಅಬ್ದುಲ್  ರಹೀಮ್ (27 ವರ್ಷ,)  ತಂದೆ:  ಜೆ.ಎಂ. ನೂರುದ್ದೀನ್, ವಾಸ:  ವಾರ್ಡ್‌  ನಂಬ್ರ : 2.  ಮೀನು  ಮಾರ್ಕೇಟ್  ಗಂಗೊಳ್ಳಿ.  ಕುಂದಾಪುರ  ತಾಲೂಕು  ಎಂದು  ತಿಳಿಸಿರುತ್ತಾನೆ.  ವಾಹನದ ಹಿಂಬದಿ ಜಾಬನುವಾರುಗಳೊಂದಿಗೆ  ಇದ್ದ   ಇಬ್ಬರು  ವ್ಯಕ್ತಿಗಳಲ್ಲಿ ವಿಚಾರಿಸಲಾಗಿ    ಹೆಸರು :  ಹುಸೈನ್, ಪ್ರಾಯ  31  ವರ್ಷ,  ತಂದೆ;  ದಿ:  ಅಬ್ದುಲ್  ಕರೀಂ,  ವಾಸ:  ಸಿದ್ದಿ  ಐಸ್  ಪ್ಲಾಂಟ್, ಗಂಗೊಳ್ಳಿ,  ಕುಂದಾಪುರ  ತಾಲೂಕು.   ಎಂದು  ತಿಳಿಸಿದ್ದು,  ಇನ್ನೊಬ್ಬ ವ್ಯಕ್ತಿಯನ್ನು  ವಿಚಾರಿಸಲಾಗಿ  ಆತನು  ತನ್ನ  ಹೆಸರು ಅಬು  ಮೊಹಮ್ಮದ್ ಪ್ರಾಯ  30  ವರ್ಷ,  ತಂದೆ: ಮುನ್ನಿ  ಅಬ್ದುಲ್  ಕಾದರ್, ವಾಸ:  ಹಾಲಿ  ಕ್ರಾಸ್  ಆಸ್ಪತ್ರೆಯ  ಬಳಿ,  ಗುಜ್ಜಾಡಿ  ಗ್ರಾಮ,  ಕುಂದಾಪುರ  ತಾಲೂಕು  ಎಂದು  ತಿಳಿಸಿರುತ್ತಾನೆ.  ಎತ್ತುಗಳನ್ನು  ಪರಿಶೀಲಿಸಲಾಗಿ ಒಂದು ಮೃತಪಟ್ಟಿದ್ದು,  ಸದ್ರಿ  ಎತ್ತುಗಳನ್ನು ಓಮ್ನಿ ಕಾರಿನಲ್ಲಿ  ಹಿಂಸಾತ್ಮಕವಾಗಿ ತುಂಬಿಸಿದ್ದರಿಂದ  ಅದರಲ್ಲಿ ಒಂದು  ಎತ್ತು ಉಸಿರು ಕಟ್ಟಿ  ಮೃತಪಟ್ಟಿರುವ  ಸಾಧ್ಯತೆ ಇರುತ್ತದೆ.  ಸದ್ರಿ  ವ್ಯಕ್ತಿಗಳು ಎತ್ತುಗಳನ್ನು  ಎಲ್ಲಿಂದಲೋ  ಕಳವು  ಮಾಡಿಕೊಂಡು     ಮಾಂಸಕ್ಕಾಗಿ  ಕಡಿಯಲು ಸಾಗಾಟಮಾಡುತ್ತಿದ್ದಂತೆ  ಕಂಡುಬಂದಿರುತ್ತದೆ.  ಸದ್ರಿ ಜಾನುವಾರುಗಳ ಅಂದಾಜು ಮೌಲ್ಯ ಸುಮಾರು 20,000/- ರೂ  ಆಗಬಹುದು. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ: 167/2014  ಕಲಂ 379 ಐಪಿಸಿ,ಮತ್ತು  ಕಲಂ  8, 9, 11 ಗೋಹತ್ಯೆ ನಿಷೇಧ ಕಾಯ್ದೆ 1964, ಮತ್ತು  ಕಲಂ 11 (1) ಪ್ರಾಣಿ ಹಿಂಸೆ ತಡೆಕಾಯ್ದೆ 1960 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬ್ರಹ್ಮಾವರ : ದಿನಾಂಕ: 12/09/2014 ರಂದು 22.00 ಗಂಟೆಯಿಂದ ದಿನಾಂಕ:13/09/2014 ರ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು 34 ನೇ ಕುದಿ ಗ್ರಾಮದ ಕೋಟಂಬೈಲು ಎಂಬಲ್ಲಿ 24 ವರ್ಷ ಪ್ರಾಯದ ಚಂದ್ರ ನಾಯ್ಕ ಎಂಬವರು ವಿಪರೀತ ಮದ್ಯಪಾನದ ಚಟದವರಾಗಿದ್ದು , ಇತ್ತೀಚೆಗೆ ಕೆಲಸಕ್ಕೆ ಹೋಗದೆ ಹಣದ ಅಡಚಣೆ ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲ್ಲಿ ಜಿಗುಪ್ಸೆಗೊಂಡು ಮನೆಯ ಬಳಿ ಇರುವ ದೂಪದ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ  ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ 48/2014 ಕಲಂ: 174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.  

  • ಬ್ರಹ್ಮಾವರ : ದಿನಾಂಕ: 13/09/2014 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ನಂದಿಗುಡ್ಡೆ ಎಂಬಲ್ಲಿ ಸುಮಾರು 9 ತಿಂಗಳು  ಪ್ರಾಯದ ರಿಯಾನ್ ಎಂಬವನು ಆಟ ಆಡುತ್ತಾ ಬಾತ್ ರೂಮಿಗೆ ಹೋಗಿ ಅಲ್ಲಿಯ ನೀರು ತುಂಬಿದ ಪ್ಲಾಸ್ಟಿಕ್ ಬಕೆಟಿಗೆ ತಲೆಕೆಳಗಾಗಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದ್ದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ 49/2014 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಸುಲಿಗೆ ಪ್ರಕರಣ

  • ಕೋಟ: ದಿನಾಂಕ 12/09/2014 ರಂದು ಪಿರ್ಯಾದಿ ಆನಂದ ಪುತ್ರನ್ ಇವರು ತನ್ನ ಬಾಬ್ತು ಕೆಎ 20 ಎಕ್ಸ್‌ 9523 ಟಿವಿಎಸ್‌ ಸ್ಕೂಟರ್‌ನಲ್ಲಿ ತೆಕ್ಕಟ್ಟೆಗೆ ಹೋಗಿ ಸಾಮಾನು ಖರೀದಿಸಿ ರಾತ್ರಿ 9:45 ಗಂಟೆಯ ಸಮಯಕ್ಕೆ ತೆಕ್ಕಟ್ಟೆ ಕೊಮೆ ರಸ್ತೆಯಲ್ಲಿ ಹೋಗುತ್ತಿರುವಾಗ ಭಾಸ್ಕರನ ಗೂಡಂಗಡಿಯಿಂದ ಸುಮಾರು 100 ಅಡಿ ದೂರದಲ್ಲಿ ಸುಮಾರು 25 ರಿಂದ 30 ವರ್ಷ ಪ್ರಾಯದ ದೃಢಕಾಯ ಶರೀರದ ಇಬ್ಬರು ಅಪರಿಚಿತ ಗಂಡಸರು ಪಿರ್ಯಾದಿದಾರರ ಸ್ಕೂಟರ್‌ಗೆ ಅಡ್ಡಬಂದು ನಿಲ್ಲಿಸುವಂತೆ ಕೈಸನ್ನೆ ಮಾಡಿದ್ದು, ಪಿರ್ಯಾದಿದಾರರು ಸ್ಕೂಟರ್‌ನ್ನು ನಿಧಾನಗೊಳಿಸಿದಾಗ, ಆರೋಪಿಗಳು ಪಿರ್ಯಾದಿದಾರರ ಮೋಟಾರು ಸೈಕಲ್‌ನ್ನು ಹಿಡಿದು ತಳ್ಳಿದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಾಗ ಆರೋಪಿಗಳು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು ಕುತ್ತಿಗೆಯಲ್ಲಿದ್ದ ಸುಮಾರು 30,000/- ಮೌಲ್ಯದ 1 ½ ಪವನ್‌ ತೂಕದ ಚಿನ್ನದ ಸರವನ್ನು ಹಿಡಿದು ಎಳೆದುಕೊಂಡು  ಓಡಿಹೋಗಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ: 192/14 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹುಡುಗಿ ಕಾಣೆ ಪ್ರಕರಣ 
  • ಮಣಿಪಾಲ: ಚಂದ್ರಕಲಾ ಎಂಬವಳು ಮಣಿಪಾಲದ ವಿ.ಪಿ ನಗರದ ಸ್ಪಟಿಕ ಆಪಾರ್ಟ್‌ಮೆಂಟ್‌ನಲ್ಲಿರುವ ಡಾ.. ವಿದ್ಯಾಧರ ಎಂಬವರ ಮನೆಯಲ್ಲಿ 3 ತಿಂಗಳಿನಿಂದ ಮನೆ ಕೆಲಸ ಮಾಡಿಕೊಂಡಿದ್ದು, ದಿನಾಂಕ 12.09.14ರಂದು ಸಂಜೆ ಸುಮಾರು 19:00ಗಂಟೆಗೆ ಕೆಲಸ ಮಾಡಿಕೊಂಡಿದ್ದ ಮನೆಯವರೆಗೆ ಹೇಳದೆ ಮನೆಯಿಂದ ಹೊರಗೆ ಹೋದವಳು ಸಂಬಂಧಿಕರ ಮನೆಗೂ ಹೋಗದೇ, ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2014 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಅಪಘಾತ ಪ್ರಕರಣ
    ಮಣಿಪಾಲ: ದಿನಾಂಕ 12-09-14ರಂದು ರಾಘವೇಂದ್ರ ನಾರಾಯಣ ನಾಯ್ಕರವರು ಮೋಟಾರ್‌ ಸೈಕಲ್‌ ನಂಬ್ರ ಕೆಎ30 ಕೆ 1923ನೇದರಲ್ಲಿ  ಹಿಂಬದಿ ಸವಾರರನ್ನಾಗಿ ಲೋಹಿತ್‌ ಎಂಬವರನ್ನು ಕುಳ್ಳಿರಿಸಿಕೊಂಡು ಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ ಸುಮಾರು 3:45ಗಂಟೆಗೆ ಭಾರತಿ ವಿಕಾಸ್‌ ಟ್ರಸ್ಟ್‌‌‌ನ ಬಳಿ ತಲುಪುವಾಗ ಎದುರಿನಿಂದ ಕೆಎ 13 8254ನೇ ಲಾರಿ ಚಾಲಕನು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್‌ ಸೈಕಲ್‌ಗೆ ಢಿಕ್ಕಿ ಹೊಡೆದು ಲಾರಿಯನ್ನು ಅಲ್ಲಿಯೇ ನಿಲ್ಲಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೇ, ಪೊಲೀಸರಿಗೆ ಮಾಹಿತಿ ನೀಡದೇ ಅಲ್ಲಿಂದ ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ರಾಘವೇಂದ್ರ ನಾರಾಯಣ ನಾಯ್ಕರವರಿಗೆ  2 ಕಾಲುಗಳ ಮೂಳೆ ಮುರಿತ ಉಂಟಾಗಿ ಸಹ ಸವಾರ ಲೋಹಿತ್‌ನಿಗೆ ಕೂಡ ಜಖಂ ಉಂಟಾಗಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 157/14 ಕಲಂ 279, 337, 338 ಐಪಿಸಿ & 134(ಎ)&(ಬಿ)ಐಎಮ್‌‌ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: