Saturday, September 13, 2014

Daily Crime Reports as on 13/09/2014 at 07:00 Hrs

ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದುದಾರರಾದ ಮೊಹಮ್ಮದ್ ಜಾಫರ್ (23) ತಂದೆ: ಮೊಹಮ್ಮದ್ ಇಸುಬು ಖಾಜಿ  ವಾಸ: ದಿಲ್ ಖುಷ್ ಮಂಜಿಲ್ ಚಕ್ಕಿತೋಟ ಹೂಡೆ, ಉಡುಪಿ ತಾಲೂಕು ರವರು ದಿನಾಂಕ 12/09/2014 ರಂದು ಸಂಜೆ 6:40 ಗಂಟೆಗೆ ಪಂದುಬೆಟ್ಟು ದುರ್ಗಾ ಕಾಂಪ್ಲೆಕ್ಸ್ ನ ಎದುರು ತಮ್ಮ ಸ್ನೇಹಿತ ಮೊಹಮ್ಮದ್ ನಬೀಲ್ ನೊಂದಿಗೆ ಮಾತನಾಡಿಕೊಂಡು ನಿಂತಿರುವಾಗ ಮಲ್ಪೆ ಕಡೆಯಿಂದ ಉಡುಪಿ ಕಡೆಗೆ ಬಸ್ ಚಾಲಕನೊಬ್ಬ ತನ್ನ ಬಸ್ ನಂಬ್ರ ಕೆಎ-20 ಸಿ-8707 ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-14 ಆರ್-9649 ನೇದರ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಪ್ರಕಾಶ್ ಎಂಬವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬಾಗ ತೀವ್ರ ತರಹದ ರಕ್ತಗಾಯವಾಗಿದ್ದು, ಮೂಗು ಮತ್ತು ಕಿವಿಯಲ್ಲಿ ರಕ್ತ ಬರುತ್ತಿದ್ದು, ಪಿರ್ಯಾದುದಾರರು ಮತ್ತು ಅವರ ಸ್ನೇಹಿತ ಸೇರಿ ಮೇಲಕ್ಕೆತ್ತಿ ಉಪಚರಿಸಿ ಒಂದು ಆಟೋರಿಕ್ಷಾದಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರಿಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಅಪಘಾತಕ್ಕೆ ಕೆಎ-20 ಸಿ-8707 ನೇ ನಂಬ್ರದ ಟಿ.ಎಮ್.ಟಿ ಬಸ್ ಚಾಲಕನಾದ ಸುರೇಶ ಪೂಜಾರಿ ರವರ ಅತಿವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಮೊಹಮ್ಮದ್ ಜಾಫರ್ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2014  ಕಲಂ 279, 304(ಎ)  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: