Tuesday, September 02, 2014

Daily Crime Reports as on 02/09/2014 at 17:00 Hrs



ಮಟ್ಕಾ ಚೀಟಿ ಬರೆಯುತ್ತಿದ್ದವನ ಬಂಧನ

  • ಹಿರಿಯಡ್ಕ: ದಿನಾಂಕ 02/09/14 ರಂದು ರಫೀಕ್‌ ಎಮ್‌ ಪಿಎಸ್‌ಐ ಹಿರಿಯಡ್ಕ ಠಾಣೆರವರಿಗೆ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಮೀನು ಮಾರ್ಕೆಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಸಿಬ್ಬಂದಿಯರವರೊಂದಿಗೆ ದಾಳಿ ಮಾಡಿ ಮಟ್ಕಾ ಚೀಟಿ ಬರೆದುಕೊಡುತ್ತಿದ್ದ ಕೃಷ್ಣ ಪೂಜಾರಿ [58] ತಂದೆ; ದಿ ಪದ್ದು ಪೂಜಾರಿ ವಾಸ; ಕಾನದಪಾಡಿ ಮನೆ ಪೆರ್ಡೂರು ಗ್ರಾಮ ರವರನ್ನು ದಸ್ತಗಿರಿ ಮಾಡಿ ಆತನು ತನ್ನದೇ ಸ್ವಂತ ಲಾಭಕ್ಕಾಗಿ ಮಟ್ಕಾ ಜೂಜಾಟಕ್ಕೆ ಹಣ ಸಂಗ್ರಹಿಸುತ್ತಿದ್ದ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ವಶದಲ್ಲಿ ದೊರೆತ ನಗದು ರೂಪಾಯಿ 720/- ಸ್ವಾಧೀನ ಪಡಿಸಿ ಅದರಂತೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2014 ಕಲಂ 78 (I) (III) ಕರ್ನಾಟಕ ಪೊಲೀಸ್ ಕಾಯ್ಡೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಗಂಡಸು  ಕಾಣೆ ಪ್ರಕರಣ

  • ಮಲ್ಪೆ: ಪವನ್ ಶೆಟ್ಟಿ ತಂದೆ: ಜಯಕರ ಶೆಟ್ಟಿ ವಾಸ: ಶ್ರೀ ದೇವಿನಿಲಯ, ಕೆಳಾರ್ಕಳಬೆಟ್ಟು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ರವರ ತಂದೆಯಾದ ಜಯಕರ ಶೆಟ್ಟಿ ಎಂಬವರು ದಿನಾಂಕ 01/09/2014 ರಂದು ಮದ್ಯಾಹ್ನ 3:00 ಗಂಟೆಗೆ ತನ್ನ ಮನೆಯಾದ ಕೆಳಾರ್ಕಳಬೆಟ್ಟು ಗ್ರಾಮದ ಶ್ರೀದೇವಿ ನಿಲಯ ಎಂಬಲ್ಲಿಂದ ಹಿರೇಬೆಟ್ಟಿನ ಬಾಳ್ಕಟ್ಟು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಎಲ್ಲಿಗೆ ಹೋಗಿದ್ದಾರೆಂದು  ತಿಳಿಯದೇ ಇದ್ದು ಈ ವರೆಗೆ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಪವನ್ ಶೆಟ್ಟಿರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2014 ಕಲಂ: ಗಂಡಸು  ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಾಣೆಯಾದವರ ವಿವರ ಹೆಸರು: ಜಯಕರ ಶೆಟ್ಟಿ ,ಪ್ರಾಯ: 57 ವರ್ಷ,ಚಹರೆ: ತುಂಬು ತೋಳಿನ ಬಿಳಿ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದು, ಗೋಲ್ಟ್‌ನ ಕಲರ್ ವಾಚ್ ಧರಿಸಿರುತ್ತಾರೆ. ಎತ್ತರ 5'5", ಕಪ್ಪುಬಿಳಿ ತಲೆ ಕೂದಲು, ತಲೆ ಕೂದಲನ್ನು ಹಿಮ್ಮುಖವಾಗಿ ಬಾಚುತ್ತಾರೆ. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ   

ಇತರ ಪ್ರಕರಣ

  • ಬ್ರಹ್ಮಾವರ: ಯಡ್ತಾಡಿ ಗ್ರಾಮದ ದಿವಾಕರ ಶೆಟ್ಟಿ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದು ಅಣ್ಣಪ್ಪ ತಂದೆ: ದಿ: ಬಂಗಾರ, ವಾಸ: ಜನತಾ ಕಾಲೋನಿ, ಸಾಯಿಬ್ರಕಟ್ಟೆ, ಯಡ್ತಾಡಿ ಗ್ರಾಮರವರು ಆರೋಪಿಯಾದ ದಿವಾಕರ ಶೆಟ್ಟಿ ತಂದೆ: ಶಂಕರ ಶೆಟ್ಟಿರವರು ಸರಿಯಾಗಿ ಕಾರ್ಮಿಕರಿಗೆ ನೀಡುವ ಸೌಲಭ್ಯ ನೀಡದೆ ಜೀತ ಪದ್ದತಿಯಂತೆ ನಡೆದುಕೊಂಡಿದ್ದು ಅಣ್ಣಪ್ಪರವರು ಜೀತದಾಳುವಂತೆ ದುಡಿಯುತ್ತಿದ್ದು ಅವರ ಕೋರೆಯಲ್ಲೇ ಕೆಲಸ ಮಾಡಬೇಕು ಬೇರೆ ಕೋರೆಗೆ ಕೆಲಸಕ್ಕೆ ಹೋಗಬಾರದೆಂದು ಬೆದರಿಸಿದ್ದು ಯಾವುದೇ ಮೂಲ ಸೌಕರ್ಯ ನೀಡದೆ ಇದ್ದುದರಿಂದ ದಿವಾಕರ ಶೆಟ್ಟಿರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಣ್ಣಪ್ಪರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2014 ಕಲಂ 16.17.18 ಜೀತಪದ್ದತಿ (ರದ್ದತಿ) ಅಧಿನಿಯಮ 1976 ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಹೆರಿಯ ನಾಯ್ಕ ತಂದೆ: ಕುಷ್ಟ ನಾಯ್ಕ ವಾಸ: ಹಯ್ಯಂಗಾರು, ಕೆರಾಡಿ ಗ್ರಾಮ ಕುಂದಾಫುರ ತಾಲೂಕುರವರ ಮಗ ರಾಜೇಂದ್ರ ನಾಯ್ಕ (19) ಎಂಬವರು ದಿನಾಂಕ: 29/08/2014 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಶಂಕರನಾರಾಯಣ ಗ್ರಾಮದ ಟೆಲಿಫೋನ್ ಎಕ್ಸ್ ಚೆಂಜ್ ಬಳಿ ಮಲ್ಲಿಕಾರ್ಜುನ ಎಂಬವರ ಜೊತೆ ಮಾತನಾಡಿ ಹೋದವನ ಮೃತದೇಹವು ದಿನಾಂಕ 01/09/2014 ರಂದು 7.30 ಗಂಟೆಗೆ ಶಂಕರನಾರಾಯಣ ಟೆಲಿಫೋನ್ ಎಕ್ಸ್ ಚೆಂಜ್ ಬಳಿ ಇರುವ ಸರಕಾರಿ ಬಾವಿಯಲ್ಲಿ ಪತ್ತೆಯಾಗಿದ್ದು, ಹೆರಿಯ ನಾಯ್ಕರವರ ಮಗ ರಾಜೇಂದ್ರನು ಆಕಸ್ಮಿಕವಾಗಿ ಬಾವಿಗೆ ಬಿದ್ದು, ಬಾವಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿದೆ ಎಂಬುದಾಗಿ ಹೆರಿಯ ನಾಯ್ಕ ರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 22/2014 ಕಲಂ: 174 ಸಿ.ಅರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: