Monday, September 29, 2014

Daily Crime Reported As On 29/09/2014 At 19:30 Hrs

ಅಪಘಾತ ಪ್ರಕರಣಗಳು
  • ಮಣಿಪಾಲ: ದಿನಾಂಕ 29/09/14ರಂದು ಪಿರ್ಯಾದಿದಾರರಾದ ರಿಂಕು ಶರ್ಮ, ತಂದೆ ಸುಧೀರ್‌ ಶರ್ಮ, ವಾಸ ಫ್ಲಾಟ್‌ ನಂಬ್ರ 303, ಸಚ್ಚಿದಾನಂದ ರೆಸಿಡೆನ್ಸಿ, ಕಡಿಯಾಳಿ, ಉಡುಪಿ ಇವರು ತನ್ನ ತಂದೆಯ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ ಕೆಎ 19ಈಸಿ 9889ನೇದರಲ್ಲಿ ಸಹ ಸವಾರರನ್ನಾಗಿ ಶರತ್‌ ಶೇಟ್‌ ಎಂಬವರನ್ನು ಕುಳ್ಳಿರಿಸಿಕೊಂಡು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಮಧ್ಯಾಹ್ನ ಸುಮಾರು 12:30ಗಂಟೆಗೆ ಇಂದ್ರಾಳಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾದ ಕ್ರಾಸ್‌ ಬಳಿ ತಲುಪುವಾಗ  ಇಂದ್ರಾಳಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಅಡ್ಡ ರಸ್ತೆಯಿಂದ ಕೆಎ 19ಎಮ್‌ 9559ನೇ ಓಮಿನಿ ಕಾರಿನ ಚಾಲಕ ಸುರೇಶ್‌ ಭಟ್‌ ರವರು ತಾನು ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೆ ಉಡುಪಿ ಮಣಿಪಾಲ ರಸ್ತೆಗೆ ಬಂದು ಬಲಕ್ಕೆ ತಿರುಗಿಸಿದ ಪರಿಣಾಮ, ಮಾರುತಿ ಒಮಿನಿ ಕಾರು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಢಿಕ್ಕಿ ಹೊಡೆದ, ಪರಿಣಾಮ ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆಗೆ ಬಿದ್ದು ಅವರ ಎಡಕೈಯ ಮೊಣಗಂಟಿನ ಬಳಿ ಒಳಜಖಂ ಉಂಟಾಗಿರುತ್ತದೆ. ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಹಾಗೂ ಮಾರುತಿ ಒಮಿನಿ ಕಾರು ಕೂಡ ಜಖಂ ಉಂಟಾಗಿದ್ದಾಗಿದೆ. ಪಿರ್ಯಾದಿದಾರರು ತನಗಾದ ಒಳಜಖಂನ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ರಿಂಕು ಶರ್ಮ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 170/14 ಕಲಂ 279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  •  ಹಿರಿಯಡ್ಕ: ದಿನಾಂಕ 29/09/2014ರಂದು 14:45 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಭೈರಂಪಳ್ಳಿ ಗ್ರಾಮದ ಕಂಚಿಗುಂಡಿ ಎಂಬಲ್ಲಿ KA 20S 6323ನೇ ನಂಬ್ರದ ಪಲ್ಸರ್ ಬೈಕ್ ಸವಾರ ಪ್ರಕಾಶ್ ಆಚಾರ್ಯ ಎಂಬವರು ನಾಗರಾಜ್ ಆಚಾರ್ಯ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಪೆರ್ಡೂರು ಕಡೆಯಿಂದ ಹರಿಖಂಡಿಗೆ ಕಡೆಗೆ 407 ಟೆಂಪೋವನ್ನು ಓವರ್ ಟೇಕ್ ಮಾಡಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ  ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಬೈಕ್ ನಲ್ಲಿ ಸಹಸವಾರನಾಗಿದ್ದ ನಾಗರಾಜ ಆಚಾರ್ಯ ರವರಿಗೆ ಕಾಲು ಹಾಗೂ ಸೊಂಟಕ್ಕೆ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಮ್,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ಶ್ರೀ ಪ್ರದೀಪ್ ಶೆಟ್ಟಿ (34), ತಂದೆ ಚಂದ್ರಶೇಖರ ಶೆಟ್ಟಿ, ವಾಸ ಮೂಡುಮನೆ ಭೈರಂಪಳ್ಳಿ ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 92/2014 ಕಲಂ 279, 304(A) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: