Sunday, September 28, 2014

Daily Crime Reported As On 28/09/2014 At 19:30 Hrs



ಆತ್ಮಹತ್ಯೆ ಪ್ರಕರಣ
  • ಕಾರ್ಕಳ:  ಪಿರ್ಯಾದುದಾರರಾದ ಜಯ (36), ತಂದೆ ಸಂಚು, ವಾಸ ಕಲಂಬಾಡಿಪದವು, ನಿಟ್ಟೆ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರ ಅಣ್ಣ 49 ವರ್ಷ ಪ್ರಾಯದ ಅಣ್ಣಿ ಎಂಬವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಔಷಧಿಯನ್ನು ಮಾಡಿಸಿದರೂ ಗುಣ ಮುಖವಾಗದ ಕಾರಣ ಮನನೊಂದು, ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 28/09/2014 ರಂದು ಬೆಳಗ್ಗಿನಿಂದ 11:00 ಗಂಟೆಯ ಮಧ್ಯೆ ಕುಕ್ಕುಂದೂರು ಗ್ರಾಮದ ವಾಂಟ್ಯಚ್ಚಾರು ಎಂಬಲ್ಲಿರುವ ತನ್ನ ಮನೆ ಸಮೀಪದ ಹಾಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಜಯ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 41/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಯುವಕ ಕಾಣೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಸಿದ್ದಾರ್ಥ ಫಕೀರಪ್ಪ ಮರೇದ (23), ತಂದೆ ಫಕೀರಪ್ಪ ಮರೇದ, ವಾಸ: ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರುಗಡೆ, ಲಕ್ಷ್ಮೀ ನರಸಿಂಹ ಬಿಲ್ಡಿಂಗ್, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರದಲ್ಲಿರುವ ಸ್ಪೂರ್ತಿ ಹರ್ಬಲ್ ಕಂಪನಿಯ ಮಾಲಕರಾಗಿದ್ದು ಹರ್ಬಲ್ ಪ್ರೊಡಕ್ಟ್ ಮಾಡುವುದಾಗಿದೆ. ದಿನಾಂಕ 05/05/2014 ರಂದು ಮೈಸೂರಿನ ಪಿರಿಯಾಪಟ್ಟಣದ ಕೊಗಿಲೂರು ಗ್ರಾಮದ ದೇವರಾಜ ಎಂಬವರು ಪಿರ್ಯಾದಿದಾರರ ಕಂಪನಿಗೆ ಸೇಲ್ಸ್ ಮ್ಯಾನ್ ಕೆಲಸಕ್ಕೆ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 27/08/2014 ರಂದು ಬೆಳಿಗ್ಗೆ 10:00 ಗಂಟೆಗೆ ಪುತ್ತೂರಿಗೆ ಹರ್ಬಲ್ ವಸ್ತುಗಳನ್ನು ಮಾರಾಟ ಮಾಡಲು ದೇವರಾಜ ಹೋಗುತ್ತೇನೆ ಎಂದು ಪಿರ್ಯಾದಿದಾರರಲ್ಲಿ ಹೇಳಿ ಹೋದವನು ಇದುವರೆಗೂ ಕಂಪನಿಗೆ ವಾಪಾಸ್ಸು ಬಾರದೇ ಕಾಣೆಯಾಗಿದ್ದು ಫೋನ್ ಸಂಪರ್ಕ ಮಾಡಿರುವುದಿಲ್ಲ. ಆತನ ಮನೆಯವರಲ್ಲಿ ವಿಚಾರಿಸಿದಾಗ ಮನೆಗೂ ಕೂಡ ಆತ ಹೋಗಿರುವುದಿಲ್ಲ. ಎಂಬುದಾಗಿ ಸಿದ್ದಾರ್ಥ ಫಕೀರಪ್ಪ ಮರೇದ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 324/14   ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ಮಹಾಬಲ ಬಿ ದೇವಾಡಿಗ (42), ತಂದೆ ದಿ. ವೆಂಕ್ಟಯ್ಯ ದೇವಾಡಿಗ, ವಾಸ ಹೊಳೆಬಾಗಿಲು ಮನೆ ವಿದ್ಯಾನಗರ ಬೈಂದೂರು ಗ್ರಾಮ ಕುಂದಾಪುರ ತಾಲೂಕು ಬೈಂದೂರು ಇವರು ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದು ಅವರು ದಿನಾಂಕ 29/09/204 ರಂದು ಸಂಜೆ 04:45 ಗಂಟೆಗೆ  ಅವರ ಬಾಬ್ತು ನುಕ್ಯಾಡಿ ಎಂಬಲ್ಲಿನ ತೋಟಕ್ಕೆ ಹೋಗಿ ವಾಪಾಸ್ಸು ಕುಂದಾಪುರ ತಾಲೂಕು ಬೈಂದೂರು ಗ್ರಾಮದ ಬೆತ್ತನಕೊಡ್ಲು ಎಂಬಲ್ಲಿ ಬರುತ್ತಿರುವಾಗ ಸರ್ಕಾರಿ ಜಾಗದ ಸರ್ವೇ ನಂಬ್ರ 334 ರಲ್ಲಿ ಯಾರೋ ಅಕ್ರಮವಾಗಿ ಬೇಲಿ ಹಾಕಿದ್ದು ಅಲ್ಲಯೇ ಪಕ್ಕದಲ್ಲಿ ಆರೋಪಿತ ಶಂಕರ ದೇವಾಡಿಗ ಮತ್ತು ಇತರರು ನಿಂತು ಕೊಂಡಿದ್ದರು ಅವರಲ್ಲಿ ಈ ಜಾಗ ಅತಿಕ್ರಮಣ ಮಾಡಿದ್ದು ಯಾರು ಎಂದು ವಿಚಾರಿಸಿದಾಗ ಶಂಕರ ದೇವಾಡಿಗನು ಪಿರ್ಯಾಧಿದಾರರನ್ನು ದಾರಿಯಲ್ಲಿ ಮುಂದಕ್ಕೆ ಹೋಗದಂತೆ ತಡೆದು ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಈ ಜಾಗದ ವಿಚಾರದಲ್ಲಿ ಕೇಳಲು ನೀನು ಯಾರು  ಎಂದು ಹೇಳಿ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲಿನಿಂದ ಪಿರ್ಯಾಧಿದಾರಿಗೆ ಹಲ್ಲೆ ಮಾಡಿ ಈ ಜಾಗದ ವಿಚಾರದಲ್ಲಿ ತಲೆ ಹಾಕಿದರೆ ನಿನ್ನನ್ನು ಕೊಲ್ಲುವುದಾಗಿ ಆರೋಪಿಯು ಪಿರ್ಯಾಧಿದಾರರಿಗೆ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಮಹಾಬಲ ಬಿ ದೇವಾಡಿಗ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 199/2014 ಕಲಂ  341, 504, 324, 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಬ್ರಹ್ಮಾವರ: ದಿನಾಂಕ 26/08/2014 ರಂದು 16:30 ಗಂಟೆಗೆ ಉಡುಪಿ ತಾಲೂಕು ಹಲುವಳ್ಳಿ ಗ್ರಾಮದ ಬಾಬುರಾಯ ಆಚಾರ್ಯ ರವರ ಅಂಗಡಿ ಬಳಿ ಆರೋಪಿತರುಗಳಾದ 1). ಕೊಗ್ಗಯ್ಯ ಆಚಾರ್ (75), ತಂದೆ ದಿ: ಅನಂತ ಆಚಾರ್, ವಾಸ ಮೂಡೂರು ಹಲುವಳ್ಳೀ ಗ್ರಾಮ, 2) ಶ್ಯಾಮಲ ಆಚಾರ್ (32) ತಂದೆ ಕೊಗ್ಗಯ್ಯ ಆಚಾರ್, ವಾಸ ಮೂಡೂರು ಹಲುವಳ್ಳಿ ಗ್ರಾಮ, 3) ರುದ್ರಯ್ಯ ಆಚಾರ್ (70) ತಂದೆ ದಿ. ಅನಂತ ಆಚಾರ್ ಮುಡೂರು, ಹಲುವಳ್ಳಿ  ಗ್ರಾಮ ಉಡುಪಿ ತಾಲೂಕು, 4) ಪ್ರಶಾಂತ್ ಆಚಾರ್ (27) ತಂದೆ ರುದ್ರಯ್ಯ ಆಚಾರ್ ವಾಸ ಮೂಡೂರು, ಹಲುವಳ್ಳಿ ಗ್ರಾಮ, 5) ನಾರಾಯಣ ಆಚಾರ್ (70) ತಂದೆ ದಿ: ಮಹಾಲಿಂಗ ಆಚಾರ್, ವಾಸ ಪಟ್ಟಾಬಿ ಹಿಟ್ಟಿನ ಗಿರಣಿ ಹಿಂಬದಿ, ಗುಂಡ್ಮಿ ಸಾಸ್ತಾನ ಇವರುಗಳು ಪಿರ್ಯಾದಿದಾರರಾದ ಪ್ರಭಾಕರ ಆಚಾರ್ (30) ತಂದೆ ನರಸಿಂಹ ಆಚಾರ್ ವಾಸ ತೊನ್ನಾಸೆ, ಆರ್ಡಿ, ಅಲ್ಬಾಡಿ ಗ್ರಾಮ, ಉಡುಪಿ ತಾಲೂಕು ಇವರಿಗೆ ಸಮಾನ ಉದ್ದೇಶದಿಂದ ಅಕ್ರ ಕೂಟ ಸೇರಿ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ಬೈದು  ಕೊಚ್ಚಿ ಕೊಂದು ಹಾಕುವುದಾಗಿ ಬೆದರಿಸಿದ್ದಲ್ಲದೆ ಪಿರ್ಯಾದಿದಾರರು ಚಿಕ್ಕಪ್ಪನ ಅಂಗಡಿಗೆ ರಕ್ಷಣೆ ಪಡೆಯಲು ಹೋಗಿದ್ದು ಆರೋಪಿತರುಗಳು ಅಂಗಡಿಯಿಂದ ಹೊರಗೆ ಬಾರದಂತೆ ದಿಗ್ಬಂಧನ ಉಂಟುಮಾಡಿದ್ದಾಗಿದೆ ಎಂಬುದಾಗಿ ಪ್ರಭಾಕರ ಆಚಾರ್ ಇವರು ನೀಡಿದ ದೂರಿನಂತೆ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 176/2014 ಕಲಂ 143, 144, 147, 323, 339, 340, 504, 506 ಜೊತೆಗೆ 149 ಐಪಿಸಿ, 506 ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: