Sunday, September 28, 2014

Daily Crime Reported As On 28/09/2014 At 17:00Hrs


ಅಪಘಾತ ಪ್ರಕರಣಗಳು
  • ಕಾರ್ಕಳ: ದಿನಾಂಕ 27/09/2014 ರಂದು 18:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಜೋಡು ರಸ್ತೆ ಸಮೀಪದ ಮಟನ್ ರಸ್ತೆ ಕೂಡು ರಸ್ತೆ ಬಳಿ, ಕಾರ್ಕಳ ಕಡೆಯಿಂದ ಜೋಡು ರಸ್ತೆ ಕಡೆಗೆ ಸುಶಾಂತರವರು, ತನ್ನ ಬಾಬ್ತು ಸ್ಕೂಟಿ ನಂಬ್ರ KA 19EH 3099ನೇದರಲ್ಲಿ ವನಿತಾ ಎಂಬವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಅದೇ ದಿಕ್ಕಿನಲ್ಲಿ ಮುಂದುಗಡೆಯಿಂದ KA 20EA 1830ನಂಬ್ರದ ಮೋಟಾರು ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ದಿವಾಕರ ಎಂಬವರು ಯಾವುದೇ ಸೂಚನೆ ನೀಡದೆ, ಅತಿವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೆಲೇ ಬಲಕ್ಕೆ ತಿರುಗಿಸಿದಾಗ ಸ್ಕೂಟಿಯು ಮೋಟಾರು ಸೈಕಲ್ ನಂಬ್ರ KA 19EH 3099ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟಿ ಸಮೇತ ರಸ್ತೆಗೆ ಬಿದ್ದು, ಸಹ ಸವಾರಳಾದ ವನಿತಾರವರ ತಲೆಗೆ ಪೆಟ್ಟಾಗಿದ್ದು, ಕೈಕಾಲಿಗೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಮಹಮ್ಮದ್ ಶರೀಪ್, (37) ತಂದೆ ರಹೀಂ, ವಾಸ ರಿಮ್‌‌ಶಾ ಮಂಜಿಲ್, ಬಂಗ್ಲೆ ಗುಡ್ಡೆ, ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 174/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕೊಲ್ಲೂರು: ದಿನಾಂಕ 28.09.2014ರಂದು ಪಿರ್ಯಾದಿದಾರರಾದ ಚಂದ್ರ ಬಳೆಗಾರ (47) ತಂದೆ ದಿ. ರಾಮಯ್ಯ ಬಳೆಗಾರ ವಾಸ ಹೆಗ್ಡೆ ಹಕ್ಲು ಕೊಲ್ಲೂರು ಗ್ರಾಮ ಕುಂದಾಪುರ ತಾಲೂಕು ಇವರು ಕೊಲ್ಲೂರು ಮಯೂರ ಬಾರ್ ಎದುರು ರಸ್ತೆಯ ಬಳಿ ನಿಂತಿದ್ದಾಗ ಬೆಳಿಗ್ಗೆ 10.30ಗಂಟೆಗೆ ಆಪಾದಿತ ಬಸ್ ನಂಬ್ರ ಕೆಎ 20ಬಿ 4671 ನೇ APM ಬಸ್ಸನ್ನು ಇದರ ಚಾಲಕ ಗುರುರಾಜ ಪೂಜಾರಿಯವರು ಕೊಲ್ಲೂರು ಕಡೆಯಿಂದ ಕುಂದಾಪುರದ ಕಡೆಗೆ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಕುಂದಾಪುರದ ಕಡೆಯಿಂದ ಕೊಲ್ಲೂರು ಕಡೆಗೆ ಹೋಗುತ್ತಿದ್ದ ರಿಡ್ಜ್ ಕಾರು ನಂಬ್ರ ಕೆಎ 20ಪಿ 8008ನೇದಕ್ಕೆ ಎದುರಿನಿಂದ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸಂತೋಷ ಶೆಟ್ಟಿ ಮತ್ತು ಪ್ರಯಾಣಿಕರಾದ ಆದರ್ಶ, ಶ್ರೀಮತಿ ಸುಲೇಕಾ ಮತ್ತು ಚಿಕ್ಕ ಮಗು ಹಾಗೂ ಆದರ್ಶರ ಕುಟುಂಬದವರಿಗೆ ತಲೆ, ಮುಖ ಮತ್ತು ಕೈ-ಕಾಲುಗಳಿಗೆ ರಕ್ತ ಗಾಯ ಉಂಟಾಗಿರುತ್ತದೆ. ಎರಡು ವಾಹನದ ಎದುರು ಬಲಭಾಗ ಜಖಂಗೊಂಡಿದ್ದು ಗಾಯಾಳುಗಳನ್ನು ಒಂದು ಕಾರಿನಲ್ಲಿ ಆಪಾದಿತ ಬಸ್‌ ಚಾಲಕ ಮತ್ತು ದೂರುದಾರ ಸೇರಿಕೊಂಡು  ಚಿಕಿತ್ಸೆಗೆ ಕಳುಹಿಸಿದ್ದು. ಈ ಅಪಘಾತಕ್ಕೆ APM ಬಸ್ ನಂಬ್ರ ಕೆಎ 20ಬಿ 4671ನೇ ಚಾಲಕ ಗುರುರಾಜ ಪೂಜಾರಿಯವರ ವೇಗದ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಚಂದ್ರ ಬಳೆಗಾರ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ 61/2014 ಕಲಂ 279, 337,  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕುಂದಾಪುರ: ದಿನಾಂಕ 28/09/2014ರಂದು ಬೆಳಿಗ್ಗೆ 10:40 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿಯ ರಾ.ಹೆ 66 ರಸ್ತೆಯಲ್ಲಿ, ಪಿರ್ಯಾದಿದಾರರಾದ ಪ್ರತಾಪ್ ಚಂದ್ರ ಶೆಟ್ಟಿ (29), ತಂದೆ ಕೃಷ್ಣಪ್ಪ ಶೆಟ್ಟಿ, ವಾಸ ಬಡಾಕೆರೆ, ನಾವುಂದ ಗ್ರಾಮ ಕುಂದಾಪುರ ತಾಲೂಕು KA 20EF 9513ನೇ ಬುಲೆಟ್‌ ಬೈಕ್‌ನ್ನು ಸವಾರಿ ಮಾಡಿಕೊಂಡು  ಕುಂದಾಪುರ  ಕಡೆಯಿಂದ  ನಾವುಂದ ಕಡೆಗೆ ಹೋಗುತ್ತಿರುವಾಗ, ಆಪಾದಿತ  ಕೈಯುಮ್  ನಿಸಾರ್‌ ಖಾನ್ ಎಂಬವರು MP-11-TR-D-5627 ನೇ ತಾತ್ಕಾಲಿಕ  ನೊಂದಣಿಯ  ಟೆಂಪೋ  ಟ್ರಾವೆಲ್ಲರ್‌  ವಾಹನವನ್ನು ಬೈಂದೂರು  ಕಡೆಯಿಂದ  ಕುಂದಾಪುರ ಕಡೆಗೆ  ಕಡೆಗೆ ಅತೀವೇಗ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ  ಬಂದಾಗ, ಪಿರ್ಯಾದಿದಾರರು ಈ ಅಪಘಾತ ತಪ್ಪಿಸಲು ರಸ್ತೆಯ ಬಲಬದಿಗೆ ಅಂದರೆ ಪೂರ್ವ ದಿಕ್ಕಿಗೆ  ಚಲಾಯಿಸಿದರೂ ಸದ್ರಿ ಟೆಂಪೋ ಟ್ರಾವೆಲ್ಲರ್‌ ನ ಮುಂಭಾಗದ ಎಡಬದಿಯ ಶೇಪ್‌ ಪಿರ್ಯಾದಿಯ ವಾಹನಕ್ಕೆ ತಾಗಿದ  ಪರಿಣಣಾಮ ಪಿರ್ಯಾದಿದಾರರು ವಾಹನ ಸಮೇತ  ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ   ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಪ್ರತಾಪ್ ಚಂದ್ರ ಶೆಟ್ಟಿ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 117/2014 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಕಳವು ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಸಾಬೀರ್ ಶೇಖ್ (49), ತಂದೆ ಶೇಖ್ ಮೂಸ, ವಾಸ ಮಾರ್ಸ್ ಓರಿಯನ್, ಜಯದೇವ್ ಮೊಟಾರ್ಸ್ ಹಿಂಬದಿ ಇಂದ್ರಾಳಿ ಇವರು ಉಡುಪಿ ರಾಜ್ ಟವರ್ಸ್ ಎಂಬಲ್ಲಿ ಸೆಲೆಕ್ಟ್ ಲೇಡಿಸ್ ಟೈಲರ್ಸ್ ಅಂಗಡಿ ಇಟ್ಟುಕೊಂಡಿದ್ದು ದಿನಾಂಕ 27.09.2014 ರಂದು ಪಿರ್ಯಾದಿದಾರರ ಹೆಂಡತಿ ರಶೀದಾ ಬಾನು ರವರು ಸಮಯ ಸುಮಾರು 10:25 ಗಂಟೆಗೆ ವ್ಯಾನಿಟಿ ಬ್ಯಾಗನ್ನು ತಮ್ಮ ಅಂಗಡಿಯ ಹೊಲಿಯುವ ಮೆಷಿನ್ ಮೇಲೆ ಇಟ್ಟು ಹಿಂಬದಿಯಲ್ಲಿದ್ದ ವರ್ಕ್ ಶಾಪ್‌ಗೆ ಹೋಗಿ ವಾಪಾಸು ಅಂಗಡಿಗೆ ಬಂದು ನೋಡುವಾಗ ಅಂಗಡಿಯಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ಕಳವಾಗಿದ್ದು, ವ್ಯಾನಿಟಿ ಬ್ಯಾಗ್ ನಲ್ಲಿ ಸುಮಾರು 8000/- ರೂಪಾಯಿ ನಗದು, ಮಗುವಿನ 2.5 ಗ್ರಾಂ ತೂಕದ ಚಿನ್ನದ ಉಂಗುರ, ರಿಪೇರಿಗೆಂದು ತಂದಿದ್ದ 1 ಗಂಡಸರ ವಾಚ್ ಮತ್ತು 4 ಲೇಡಿಸ್ ವಾಚ್ ಹಾಗೂ ನೋಕಿಯಾ ಮೋಬೈಲ್ ಅನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 17.000/-ರೂಪಾಯಿಗಳಾಗಿರುತ್ತದೆ ಎಂಬುದಾಗಿ ಸಾಬೀರ್ ಶೇಖ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ  280/ 14 ಕಲಂ 379  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ದಿನಾಂಕ 27/09/2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಬಿಟ್ಟು ಪೂಜಾರಿ (45) ತಂದೆ ದಿ. ಅಣ್ಣು ಪೂಜಾರಿ, ವಾಸ ಬೈಲುಮನೆ, ಕನ್ನರ್ಪಾಡಿ ದೇವಸ್ಥಾನದ ಬಳಿ, ಕಡೆಕಾರು ಗ್ರಾಮ ಇವರು ಕೆಲಸಕ್ಕೆ ಹೋಗಿದ್ದು ಅವರ ಮನೆಯಾದ ಕಡೆಕಾರು ಗ್ರಾಮದ ಕನ್ನರ್ಪಾಡಿ ದೇವಸ್ಥಾನದ ಬಳಿ ಇರುವ ಬೈಲು ಮನೆ ಎಂಬಲ್ಲಿ  ಪಿರ್ಯಾದಿದಾರರ ತಾಯಿಯಾದ ಗಿರಿಜಾ ಪೂಜಾರ್ತಿ (90) ರವರ ಮನೆಯಲ್ಲಿಯೇ ಇದ್ದು ಸಂಜೆ 6:30 ಗಂಟೆಗೆ ಪಿರ್ಯಾದಿದಾರರು ಕೆಲಸ ಮುಗಿಸಿ ಮನೆಗೆ ಬಂದು ನೋಡುವಾಗ ಅವರ ತಾಯಿ ಮನೆಯ ಒಳಗೆ ಬಿದ್ದುಕೊಂಡಿದ್ದು, ಸದ್ರಿಯವರಿಗೆ ನೀರು ಕೊಟ್ಟು ಉಪಚರಿಸಿ ನಂತರ ಸರಕಾರಿ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಾಯಿ ಗಿರಿಜಾ ಪೂಜಾರ್ತಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಗಿರಿಜಾ ಪೂಜಾರ್ತಿಯವರು ಬಿಸಿ ಗಂಜಿ ಊಟ ಮಾಡಲು ಗಂಜಿ ಹಾಕಿಕೊಳ್ಳುತ್ತಿರುವಾಗ ಬಿಸಿ ಗಂಜಿ ನೀರು ಮೈಮೇಲೆ ಬಿದ್ದು ಸುಟ್ಟು ಹೋಗಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಬಿಟ್ಟು ಪೂಜಾರಿ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 45/2014 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: