Saturday, September 20, 2014

Daily Crime Reported As On 20/09/2014 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ: ಗಜಾನನ ನಾಯ್ಕ(47) ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ದಿನಾಂಕ: 19-09-2014 ರಂದು ರಾತ್ರಿ 9-30 ಗಂಟೆಯ ಸಮಯಕ್ಕೆ ಸದ್ರಿ ಗಜಾನನ ನಾಯ್ಕ ರವರು ಹೆರ್ಗಾ ಗ್ರಾಮದ ತ್ರೆಯಂಭಕೇಶ್ವರ ದೇವಸ್ಥಾನದ ಬಳಿ ಇರುವ ತನ್ನ ಮನೆಯ ಒಳಗಡೆ ಮರದ ಪಕ್ಕಾಸಿಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 28/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ: 19-09-2014 ರಂದು ರಾತ್ರಿ 8-20 ಗಂಟೆಗೆ ಅಲೆವೂರು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಬಡಿಯ ನಾಯ್ಕ ಎಂಬವರು ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 29/14 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 20/09/2014ರಂದು ಬೆಳಿಗ್ಗೆ 10:30 ಗಂಟೆಗೆ ಕುಂದಾಪುರ ತಾಲೂಕು ಕೆಂಚನೂರು  ಗ್ರಾಮದ ನೀರಿನ ಟ್ಯಾಂಕ್‌ ಬಳಿಯ ತಿರುವಿನ ರಸ್ತೆಯಲ್ಲಿ ಆಪಾದಿತ ನೊಂದಣಿ ನಂಬ್ರ ತಿಳೀಯದ ಗ್ರೇ ಬಣ್ಣದ ಕಾರನ್ನು ಅದರ ಚಾಲಕ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆ ಯಿಂದ ಚಲಾಯಿಸಿ ಕೊಂಡು ರಸ್ತೆಯ ತೀರ ಬಲಬದಿಗೆ ಬಂದು. ಕುಂದಾಪುರ ಕಡೆಯಿಂದ ವಂಡ್ಸೆ ಕಡೆಗೆ  ಹೋಗುತ್ತಿದ್ದ ಪಿರ್ಯಾದಿದಾರರರಾದ ರಾಜೇಶ ಕೆ.ಎಸ್‌ (25), ತಂದೆ ಚಂದ್ರಶೇಖರ ವಾಸ ಮಂಜುಶ್ರೀ ನಿಲಯ, ಕೆತ್ತೆಮಕ್ಕಿ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ಸವಾರಿ  ಮಾಡಿಕೊಂಡು ಹೋಗುತ್ತಿದ್ದ KA 20EG 2872ನೇ ಯಮಹಾ  ಅಲ್ಪಾ ನೇ ದ್ವಿಚಕ್ರ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ರಾಜೇಶ ಕೆ.ಎಸ್‌ ರವರ ಬಲ ಕೈಯ ಮೊಣ ಕೈಯ ಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಆಪಾದಿತನು  ಕಾರನ್ನು  ಸ್ಥಳದಲ್ಲಿ  ನಿಲ್ಲಿಸದೇ ಹೋಗಿರುತ್ತಾನೆ ಎಂಬುದಾಗಿ ರಾಜೇಶ ಕೆ.ಎಸ್‌ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪ ರಾಧ ಕ್ರಮಾಂಕ 113/2014 ಕಲಂ 279, 338  ಐ.ಪಿ.ಸಿ & 134 (ಎ) & (ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಕರಿಬಸಪ್ಪ (40), ತಂದೆ ಹನುಮಂತಪ್ಪ ವಾಸ ಲಕ್ಷ್ಮಿ ನಗೆ 2 ಕ್ರಾಸ್ ರೋಡ್ ಕೊಡವೂರು ಗ್ರಾಮ ದಿನಾಂಕ 19/09/2014 ರಂದು ಸಂಜೆ 7:35 ಗಂಟೆ ಸುಮಾರಿಗೆ ತನ್ನ ಮನೆಯಾದ ಕೊಡವೂರು ಗ್ರಾಮದ ಲಕ್ಷ್ಮೀನಗರದಿಂದ ಆಶೀರ್ವಾದದ ಕಡೆಗೆ ಧನ್ವಂತರಿ ಆಫ್ ನರ್ಸಿಂಗ್ ಕಾಲೇಜಿನ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತನ್ನ ಹಿಂದಿನಿಂದ ಕೆಎ 20ಕ್ಯೂ 4802ನೇ ಹೊಂಡಾ ಆಕ್ಟಿವಾದ ಸವಾರನು ತನ್ನ ಬಾಬ್ತು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಕರಿಬಸಪ್ಪರವರಿಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಕರಿಬಸಪ್ಪ ರವರಿಗೆ ಬಲಭುಜಕ್ಕೆ ಮತ್ತು ಸೊಂಟಕ್ಕೆ ಗುದ್ದಿದ ತೀವ್ರ ನೋವು, ತಲೆಯ ಬಲಬದಿಗೆ ರಕ್ತ ಗಾಯ ಹಾಗೂ ಎಡಕಾಲಿನ ಮೊಣಗಂಟಿನ ಹತ್ತಿರ, ಬಲ ಕೈ ಕಿರುಬೆರಳಿನ ಹತ್ತಿರ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಕರಿಬಸಪ್ಪ ಇವರು ನೀಡಿದ ದೂರಿನಂತೆ ಮಲ್ಪೆಠಾಣಾ ಅಪರಾಧ ಕ್ರಮಾಂಕ 133/2014 ಕಲಂ 279.337  ಐ. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: