Friday, September 19, 2014

ಪತ್ರಿಕಾ ಪ್ರಕಟಣೆ

ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕೆಂಜೂರು ಗ್ರಾಮದ ಬೈದಬೆಟ್ಟು ಎಂಬಲ್ಲಿ ದಿನಾಂಕ 11-09-2014 ರಂದು ರಾತ್ರಿ 8:00 ಗಂಟೆ ಸಮಯಕ್ಕೆ 3 ಜನ ಅಪರಿಚಿತ ವ್ಯಕ್ತಿಗಳು ಶ್ರೀಮತಿ ಶೆಡ್ತಿ(63 ವರ್ಷ) ಗಂಡ ದಿ. ವೆಂಕಪ್ಪ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಶ್ರೀಮತಿ ಶೆಡ್ತಿರವರ ಕೈಗಳನ್ನು ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿಸಿ ಮೈಮೇಲಿದ್ದ  7.5 ಪವನ್ ಚಿನ್ನಾಭರಣ ಮತ್ತು ನಗದು ರೂ 3,000 ವನ್ನು ದೋಚಿಕೊಂಡು ಹೋಗಿದ್ದು, ದೋಚಿಕೊಂಡು ಹೋದ ಸೊತ್ತಿನ ಒಟ್ಟು ಮೌಲ್ಯ ಸುಮಾರು 1.50,000 ಆಗಿರುತ್ತದೆ.
           ಈ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ  ರಾಜೇಂದ್ರ ಪ್ರಸಾದ್ ಐ.ಪಿ.ಎಸ್, ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಸಂತೋಷ ಕುಮಾರ್ ಇವರ ಮಾರ್ಗದರ್ಶನದಲ್ಲಿ  ಉಡುಪಿ ಉಪ - ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಪ್ರಭುದೇವ ಬಿ. ಮಾನೆ ರವರು ನೇರ ಉಸ್ತುವಾರಿಯಲ್ಲಿ ಹಾಗೂ ಸಿ.ಪಿ.ಐ ಬ್ರಹ್ಮಾವರ ಶ್ರೀ ಅರುಣ ಬಿ ನಾಯಕ ಇವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಬ್ರಹ್ಮಾವರ ವೃತ್ತ ಮತ್ತು ಬ್ರಹ್ಮಾವರ ಠಾಣೆಯ ಸಿಬ್ಬಂದಿರವರು ಮೂರು ಜನ ಆರೋಪಿಗಳಲ್ಲಿ 1. ರಾಧಕೃಷ್ಣ ಪ್ರಾಯ:24 ವರ್ಷ  ತಂದೆ ದಿ. ಮಂಜುನಾಥ ನಾಯ್ಕ  ವಾಸ. ಪೇತ್ರಿ , ಚೆರ್ಕಾಡಿ ಗ್ರಾಮ ( ಹಾಲಿ ವಾಸ: ಮೈರ್ ಕೊಮೆ ಸರ್ಕಲ್ ಬಳಿ ಹೆಗ್ಗುಂಜೆ ಗ್ರಾಮ) ಈತನು ಮಹೆಂದ್ರ ಪಿಕ್ ಆಪ್ ವಾಹನ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿ 2. ಪ್ರವೀರ ಪ್ರಾಯ 22 ವರ್ಷ ತಂದೆ, ರವಿ ವಾಸ, ಮೈರ್ ಕೊಮೆ ಮಂದರ್ತಿ, ಹೆಗ್ಗುಂಜೆ ಗ್ರಾಮ (ಈತನು ಬಸ್ ನಿರ್ವಾಹಕ ನಾಗಿದ್ದು) ಎಂಬ ಇಬ್ಬರು ಅರೋಪಿಗಳನ್ನು  ದಿನಾಂಕ 13-09-2014 ರಂದು ದಸ್ತಗಿರಿ ಮಾಡಿ ಸದ್ರಿ ಆರೋಪಿತರಿಂದ 36 ಗ್ರಾಂ ಚಿನ್ನಾಭರಣ ಮೌಲ್ಯ ರೂ 90,000=00, ನಗದು 1000=00, ಮತ್ತು ಕೃತ್ಯಕ್ಕೆ ಬಳಸಿದ ಬೊಲೆರೂ ವಾಹನ ಮೌಲ್ಯ ರೂ 2,00,000 ಆರೋಪಗಳಿಂದ ಒಟ್ಟು 2,91,000-00 ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ. ದಿನಾಂಕ: 19/09/2014 ರಂದು ಪ್ರಕರಣದ ಇನ್ನೋರ್ವ ಆರೋಪಿ ಅರವಿಂದ ಶೆಟ್ಟಿ @ ಅರು (30) ತಂದೆ: ದಿ. ಬಸವ ಶೆಟ್ಟಿ ವಾಸ: ಹೆಬ್ಬಾಡಿ ದೊಡ್ಡಮನೆ,ಮಂದರ್ತಿ ಅಂಚೆ, ಹೆಗ್ಗುಂಜೆ ಗ್ರಾಮ ಎಂಬಾತನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅರುಣ್ .ಬಿ ನಾಯಕ ಮತ್ತು ಸಿಬ್ಬಂದಿಯವರು ದಸ್ತಗಿರಿ ಮಾಡಿ ಆತನಿಂದ 16 ಗ್ರಾಂ ತೂಕದ ಚಿನ್ನದ ಚೈನ್, ಮೌಲ್ಯ ಸುಮಾರು ರೂ 40,000/-, ನಗದು ರೂ 12,000/-, ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ನಂಬ್ರ ಕೆಎ-20-ಇಡಿ-5622 ನ್ನು ಸ್ವಾಧೀನಪಡಿಸಿದ್ದು, ಸ್ವಾಧೀನಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ 1,12,000/- ಆಗಿರುತ್ತದೆ. ಆಪಾದಿತ ಅರವಿಂದ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ. ಈ ಪ್ರಕರಣ ದಾಖಲಾದ ಒಂದು ವಾರದೊಳಗೆ ಎಲ್ಲಾ ಮೂರು ಆರೋಪಿಗಳನ್ನು ದಸ್ತಗಿರಿ ಮಾಡಿ ಆಪಾದಿತರಿಂದ ರೂ 1,30,000/- ಮೌಲ್ಯದ ಚಿನ್ನಾಭರಣ, ನಗದು ರೂ 13,000/-, ಮತ್ತು ಕೃತ್ಯಕ್ಕೆ ಬಳಸಿದ ರೂ 2,60,000/- ಮೌಲ್ಯದ ಬೊಲೆರೋ ಮತ್ತು ಪಲ್ಸರ್ ವಾಹನವನ್ನು ಸ್ವಾಧೀನಪಡಿಸಕೊಳ್ಳಲಾಗಿರುತ್ತದೆ.   
          ಸದ್ರಿ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀ ಅರುಣ ಬಿ ನಾಯಕ , ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀ ಗಿರೀಶ್ ಕುಮಾರ್ ಎಸ್. ಮತ್ತು ಸಿಬ್ಬಂದಿರವರಾದ ಸುದೇಶ್ ಶೆಟ್ಟಿ, ರಮೇಶ, ಪ್ರಸಾದ್, ಜೀವನ್, ನವೀನ ನಾಯ್ಕ, ಜಯಕರ, ಲೋಕೇಶ ನಾಯ್ಕ , ಅರುಣ, ನಾಗರಾಜ,ಸುರೇಶ್ ಕುಮಾರ್ ರವರು ಭಾಗವಹಿಸಿರುತ್ತಾರೆ

No comments: