Thursday, July 24, 2014

Daily Crime Reports on 24/07/2014 at 07:00 Hrs



 ಹಲ್ಲೆ ಪ್ರಕರಣಗಳು   
  • ಕೊಲ್ಲೂರು: ದಿನಾಂಕ :22.07.2014 ರಂದು ಬೆ 09.45 ಗಂಟೆಗೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ವಂಡ್ಸೆ ಜಡ್ಡು ಎಂಬಲ್ಲಿ ಶ್ರೀಮತಿ ಲಕ್ಷ್ಮೀ  ಪೂಜಾರ್ತಿ (53) ಗಂಡ:ಮುತ್ತ ಪೂಜಾರಿ ವಾಸ:ವಂಡ್ಸೆ ಜಡ್ಡು,ಚಿತ್ತೂರು ಗ್ರಾಮ   ಕುಂದಾಪುರ ತಾಲೂಕುರವರು ತಮ್ಮ ಮನೆಯ ದನಗಳನ್ನು ಕೊಟ್ಟಿಗೆಯಿಂದ ಹೊರಗೆ ತಂದು ಹೊಲದ ಕಡೆಗೆ  ಮೇಯಲು ಎಬ್ಬಿಕೊಂಡು ಹೋಗುತ್ತಾ  ದಾರಿಯಲ್ಲಿ  ಆಪಾದಿತರಾದ 1)ಶ್ರೀಮತಿ ಗಿರಿಜಾ ಪೂಜಾರ್ತಿ 2) ರವಿರಾಜ  ಗದ್ದೆಯ ಬಳಿ ತಲುಪುತ್ತಿರುವಾಗ ಗದ್ದೆಯಲ್ಲಿದ್ದ   ಆಪಾದಿತರು ಅವರುಗಳ ನಡುವಿನ ಜಾಗದ ತಕರಾರಿನ ದ್ವೇಷದ ಬಗ್ಗೆ ದೂರುದಾರರಿಗೆ ತೊಂದರೆ ನೀಡುವ ಸಮಾನ ಉದ್ದೇಶದಿಂದ ದೂರುದಾರರಿಗೆ  ನೀನು ನನ್ನ ಗದ್ದೆಯ ಒಳಗೆ ಬರಬೇಡ ಎಂದು ಆಪಾದಿತೆ ಒಂದೆನೆಯವರು ಹೇಳಿದ್ದು ಅಲ್ಲದೆ  ಏಕಾಎಕಿ ಓಡಿ ಬಂದು ದೂರುದಾರರಿಗೆ ಮರದ ದೊಣ್ಣೆಯಿಂದ  ಹೊಡೆದಿದ್ದು ಆ ಸಮಯ ಆಪಾದಿತ 2ನೇಯವರು ಕೂಡಾ ಓಡಿ ಬಂದು ದೂರುದಾರರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ.   ಗಾಯಗೊಂಡಿದ್ದ ದೂರುದಾರರು ಚಿಕಿತ್ಸೆಗೆ ಕುಂದಾಪುರದ ಚಿನ್ಮಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಇದಕ್ಕೆ ಪ್ರತಿಯಾಗಿ ಶ್ರೀಮತಿ ಗಿರಿಜಾ ಪೂಜಾರ್ತಿ (58) ಗಂಡ:ಮಹಾಲಿಂಗ ವಾಸ:ಹಾಡಿಮನೆ ಜಡ್ಡು,ಚಿತ್ತೂರು ಗ್ರಾಮ ಕುಂದಾಪುರ ತಾಲೂಕುರವರು ಆಪಾದಿತರಾದ 1)ಶ್ರೀಮತಿ ಲಕ್ಷ್ಮೀ 2)ಶ್ರೀಮತಿ ಗೀತಾರವರುಗಳ ವಿರುದ್ಧ ಪ್ರತಿ ದೂರು ನೀಡಿದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು ಅಲ್ಲದೆ ಇಬ್ಬರೂ ಸೇರಿ ಸಬ್ಬಲು ಮತ್ತು ಮರದ ಕೋಲಿನಿಂದ ದೂರುದಾರರಿಗೆ ಹೊಡೆದು ಗಾಯಗೊಳಿಸಿದ್ದು ದೂರುದಾರರು ಚಿಕಿತ್ಸೆಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತರೆ. ಈ ಬಗ್ಗೆ  ದೂರು ಪ್ರತಿದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2014 ಕಲಂ 324, ಜೊತೆಗ 34 ಐಪಿಸಿಯಂತೆ  ಹಾಗೂ 54/2014 ಕಲಂ ಕಲಂ:504, 506,324 ಜೊತೆಗೆ 34ಐಪಿಸಿಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಪಘಾತ ಪ್ರಕರಣಗಳು  
  • ಕೋಟ: ಬ್ರಹ್ಮಾವರ: ಪಿರ್ಯಾದಿದಾರರಾದ ರವೀಂದ್ರ ಮಧ್ಯಸ್ಥ (38) ತಂದೆ:  ಸೂರ್ಯನಾರಾಯಣ,ವಾಸ- ಕಲ್ಮಾಡಿ ರೋಡ್ ಕೋಟ ,ಕೋಟತಟ್ಟು  ಗ್ರಾಮ ,ಉಡುಪಿ ತಾಲೂಕು  ಮತ್ತು ಜಿಲ್ಲೆರವರು ದಿನಾಂಕ 23/07/2014 ರಂದು ಉಡುಪಿ ತಾಲೂಕು ಮಣೂರು ಗ್ರಾಮದ ಬೊಬ್ಬರ್ಯಕಟ್ಟೆ  ಬಳಿ ಇರುವ ಜ್ಯೋತಿ ಜನರಲ್ ಸ್ಟೋರ್ ಬಳಿ ನಿಂತಿರುವಾಗ ಸುಮಾರು 18:15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯಲ್ಲಿ ಮದ್ಯ ವಯಸ್ಸಿನ  ವ್ಯಕ್ತಿಯೊಬ್ಬರು ಸೈಕಲ್‌ನ್ನು  ತಳ್ಳಿಕೊಂಡು  ಬಂದು ರಸ್ತೆಯನ್ನು  ದಾಟಲು  ನಿರ್ಮಾಣ ಹಂತದ ರಸ್ತೆಯಲ್ಲಿ ಪೂರ್ವ ಬದಿಯಲ್ಲಿ ನಿಂತಿರುವಾಗ,  ಎಂ.ಹೆಚ್- 11 ಎ.ಎಲ್-5866 ನೇ  ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕ ರಾಜ ಕುಮಾರ್ ಸೋನಾಲ್‌ಕರ್ ಎಂಬವರು  ಉಡುಪಿ ಕಡೆಯಿಂದ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸರ್ವಿಸ್ ರಸ್ತೆಯಲ್ಲಿ ಮುಂದೆ ಹೋಗುವ ಬದಲು ಏಕಾಏಕಿ  ನಿರ್ಮಾಣ ಹಂತದ ರಸ್ತೆಗೆ  ಚಲಾಯಿಸಿದ ಪರಿಣಾಮ ರಸ್ತೆಯನ್ನು  ದಾಟಲು  ನಿಂತಿದ್ದ  ಸಂಜೀವ ಮೊಗವೀರ (50) ಎಂಬವರಿಗೆ  ಸೈಕಲ್ ಸಮೇತ ಹಿಂದಿನ ಬಲಬದಿಯ ಟಯರ್ ಡಿಕ್ಕಿಯಾಗಿ, ವ್ಯಕ್ತಿಯು ಟಯರ್ ಅಡಿಗೆ ಸಿಕ್ಕಿ ಹಾಕಿಕೊಂಡು  ತೀವ್ರ ರಕ್ತ ಗಾಯಗೊಂಡು ಸ್ಥಳದಲ್ಲಿ ಮೃತ ಪಟ್ಟಿರುವುದಾಗಿದೆ. ಬಗ್ಗೆ ರವೀಂದ್ರ ಮಧ್ಯಸ್ಥರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/2014 ಕಲಂ 279,  304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 23/07/2014 ರಂದು ಸಮಯ ಸುಮಾರು 18:00 ಗಂಟೆಗೆ  ಕುಂದಾಪುರ  ತಾಲೂಕು  ಕೊಟೇಶ್ವರ  ಗ್ರಾಮದ ಸರಕಾರಿ   ಶಾಲೆಯ  ಬಳಿಯ  ಶಾಂತರಾಮ  ಸ್ಟೂಡಿಯೋ  ಎದುರುಗಡೆ ರಸ್ತೆಯಲ್ಲಿ,  ಆಪಾದಿತ  ಆಸೀಪ್  ಎಂಬವರು  KA19-D-2311 ನೇ  ಲಾರಿಯನ್ನು ,  ಬೀಜಾಡಿ  ವೈ  ಜಂಕ್ಷನ್‌  ಕಡೆಯಿಂದ ಕೊಟೇಶ್ವರ  ಕಡೆಗೆ  ತೆಂಕು ಪೇಟೆ ರಸ್ತೆಯಲ್ಲಿ  ಅತೀವೇಗ  ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು  ಬಂದು  ಏಕಾಏಕಿ ರಸ್ತೆಯ  ತೀರ  ಬಲಬದಿಗೆ  ಚಲಾಯಿಸಿ,   ಕೊಟೇಶ್ವರ  ಪೇಟೆ  ಕಡೆಯಿಂದ ಬೀಜಾಡಿ ವೈ  ಜಂಕ್ಷನ್  ಕಡೆಗೆ  ನಡೆದುಕೊಂಡು  ಹೋಗುತ್ತಿದ್ದ  ಶ್ರೀನಿವಾಸ  ಭಟ್,  ಮಾನಸ  ಹಾಗೂ  ರವೀಂದ್ರ   ಎಂಬವರಿಗೆ  ಡಿಕ್ಕಿ  ಹೊಡೆದ  ಪರಿಣಾಮ    ಶ್ರೀನಿವಾಸ  ಭಟ್ ರವರ  ತಲೆಗೆ ತಲೆಗೆ,  ಕೈ  ಕಾಲುಗಳಿಗೆ ರಕ್ತಗಾಯ ಹಾಗೂ  ಜಖಂ  ಉಂಟಾಗಿ ಮೃತಪಟ್ಟಿದ್ದು, ಮಾನಸ  ಎಂಬವರು  ಗಾಯಗೊಂಡು  ಕೊಟೇಶ್ವರ  ಎನ್‌.ಆರ್‌  ಆಚಾರ್ಯ   ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು  ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆ.ಎಂ.ಸಿ  ಆಸ್ಪತ್ರೆಗೆ   ಹೋಗಿದ್ದು,  ಗಾಯಾಳು ರವೀಂದ್ರ ಎಂಬವರು ಕೊಟೇಶ್ವರ  ಎನ್‌.ಆರ್‌  ಆಚಾರ್ಯ   ಆಸ್ಪತ್ರೆಯಲ್ಲಿ   ಒಳ್ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ G.R.   ಗಣೇಶ್  ಮೂರ್ತಿ ತಂದೆ : ದಿ  ಕೆ. ರಾಜ ಭಟ್‌ ವಾಸ: ಕಾಂತೇಶ್ವರ  ರಸ್ತೆ,  ಗೋಪಾಡಿ  ಗ್ರಾಮ ಕೊಟೇಶ್ವರ  ಅಂಚೆ,  ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2014 ಕಲಂ 279,337   304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕುಂದಾಪುರ: ದಿನಾಂಕ 23/07/2014 ರಂದು ಸಮಯ ಸುಮಾರು 19:45  ಗಂಟೆಗೆ  ಕುಂದಾಪುರ  ತಾಲೂಕು ಕರ್ಕುಂಜೆ    ಗ್ರಾಮದ ನೇರಳಕಟ್ಟೆ  ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ  ರಸ್ತೆಯಲ್ಲಿ,  ಆಪಾದಿತ  ಶೇಖರ   ಎಂಬವರು KA-51-B- 3130 ನೇ  ಬಸ್‌  ನ್ನು  ತಲ್ಲೂರು  ಕಡೆಯಿಂದ  ನೇರಳಕಟ್ಟೆ  ಕಡೆಗೆ  ಅತೀವೇಗ  ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು  ಬಂದು  ರಸ್ತೆಯ  ತೀರ  ಎಡಬದಿಗೆ  ಚಲಾಯಿಸಿ,  ರಸ್ತೆಯ  ಬಲ ಬದಿಯಲ್ಲಿ ನಡೆದುಕೊಂಡು ಹೋಗತ್ತಿದ್ದ  ಪಿರ್ಯಾದಿ ಎನ್‌ ಪಾಂಡುರಂಗ  ನಾಯಕ್‌ (55)ತಂದೆ  ವಾಮ ನಾಯಕ್‌ ವಾಸ: ದೇವಸ್ಥಾನದ  ಹತ್ತಿರ, ನೇರಳಕಟ್ಟೆ  ಕರ್ಕುಂಜೆ ಗ್ರಾಮ  ಕುಂದಾಪುರ  ತಾಲೂಕು ರವರಿಗೆ  ಎದುರುಗಡೆಯಿಂದ ಅಪಘಾತ  ಮಾಡಿದ ಪರಿಣಾಮ  ಪಿರ್ಯಾದಿದಾರರ  ಎಡಭುಜಕ್ಕೆ ಒಳನೋವು  ಹಾಗೂ ರಕ್ತಗಾಯ  ಉಂಟಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಗೆ   ದಾಖಲಾಗಿರುತ್ತಾರೆ. ಈ ಬಗ್ಗೆ ಎನ್‌ ಪಾಂಡುರಂಗ ನಾಯಕ್‌ ರವರು ನೀಡಿದ ದೂರಿನಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 
ಅಸ್ವಾಭಾವಿಕ ಮರಣ  ಪ್ರಕರಣ 
  • ಪಡುಬಿದ್ರಿ: ದಿನಾಂಕ. 22.07.2014 ರಂದು ಸಂಜೆ 5:00 ಗಂಟೆಗೆ ಇನ್ನಾ ಗ್ರಾಮದ ಅಡ್ವೆ ಎಂಬಲ್ಲಿ ಪಿರ್ಯಾದಿ ಕೆ. ಶಾಂತಾರಾಮ ಶೆಣೈ(64)ತಂದೆ:ದಿ.ಕೆ ವೆಂಕಟೇಶ್ ಶೆಣೈ, ವಾಸ:407 ಕ್ಲಾಸಿಕ್ ಪಾರಾ ಡೈಸ್, ಕೆ.ಎಸ್ ರಾವ್ ರೋಡ್, ಮಂಗಳೂರು ರವರ ಬಾವ ವಿಶ್ವನಾಥ ಕಾಮತ್ (54)ಎಂಬವರು(ಹೆಂಡತಿಯ ತಮ್ಮ) ಒಮ್ಮೇಲೆ ರಕ್ತದೊತ್ತಡ ಜಾಸ್ತಿಯಾಗಿ ಸ್ಮತಿ ತಪ್ಪಿದ್ದರಿಂದಲೂ ಅಸ್ವಸ್ಥಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾದವರು ದಿನಾಂಕ. 23.07.2014 ರಂದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 11:30 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 23/2014 ಕಲಂ 174 ಸಿ.ಆರ್. ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಗೋ ಹತ್ಯೆ ಪ್ರಕರಣ  
  • ಅಮಾಸೆಬೈಲು: ಪಿರ್ಯಾದಿ ದೇಜಪ್ಪ ಪೊಲೀಸ್ ಉಪನಿರೀಕ್ಷಕರು  ಶಂಕರನಾರಾಯಣ ಪೊಲೀಸ್ ಠಾಣೆ ದಾರರು ದಿನಾಂಕ 23/07/2014 ರಂದು ಸಿಬ್ಬಂದಿಯವರೊಂದಿಗೆ ಸಿದ್ದಾಪುರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಿದ್ದಾಪುರ ಗ್ರಾಮದ ಹೆಗ್ಗೋಡ್ಲು ಎಂಬಲ್ಲಿ ಅಶ್ರಪ್‌ ಎಂಬವರ ಮನೆಯ ಅಂಗಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನವನ್ನು ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಸಂಜೆ 5-15 ಗಂಟೆಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಾಹಿತಿ ನಿಜವಾಗಿದ್ದು ನಾವುಗಳು ಸ್ಥಳಕ್ಕೆ ದಾಳಿ ಮಾಡಿ ಸುತ್ತುವರಿದು ನೋಡಲಾಗಿ ಒಂದು ಅಲ್ಯುಮೀನಿಯಂ ಬೋಗಣಿಯಲ್ಲಿ ಮಾಂಸ ತುಂಬಿಸಿದ್ದು ಹಾಗೂ ಹತ್ತಿರದಲ್ಲಿ ಒಂದು ಪ್ಲಾಸ್ಟಕ್‌ ಚೀಲವಿತ್ತು ಅದನ್ನು ನೋಡಲಾಗಿ ಅದರಲ್ಲಿ ಪ್ರಾಣಿಯ ತಲೆಯಿದ್ದು ಅದರ ಚರ್ಮ ತೆಗೆದಿರುವುದು ಕಂಡು ಬಂತು,ಮತ್ತು ಆ ಚೀಲದಲ್ಲಿ ಒಂದು ಕಾಲು ಇದ್ದು ಇದನ್ನು ನೋಡಿದರೆ ದನದ ಕರುವಿನ ಕಾಲು ಎಂಬಂತಿತ್ತು  ಚೀಲದಲ್ಲಿ ಒಟ್ಟು ಮಾಂಸದ ತೂಕ 26 ಕೆಜಿ ಆಗಬಹುದು ಸದ್ರಿ ಆರೋಪಿತರಲ್ಲಿ ಹೆಸರು ವಿಳಾಸ ವಿಚಾರಿಸಲಾಗಿ ಅಶ್ರಪ್‌ ,ಶಂಕರ ಜಿ ಎಂಬುದಾಗಿ ತಿಳಿಸಿರುತ್ತಾರೆ ನಂತರ ಅವರ ಕೈಯಲ್ಲಿದ್ದ ಮಚ್ಚು ಮತ್ತು ಮಾಂಸವನ್ನು ಕಡಿಯಲು ಉಪಯೋಗಿಸಿದ ಮರದ ಕೊರಡು,ಮಾಂಸ ತುಂಬಿದ ಪ್ಲಾಸ್ಟಿಕ್‌  ಚೀಲ ಮತ್ತು ಬೋಗಣೆ ಯನ್ನು ವಶ ಪಡಿಸಿಕೊಂಡು  ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/14 ಕಲಂ ಕಲಂ 4,5,7 ಕರ್ನಾಟಕ ಗೋಹತ್ಯಾ ನಿಷೇಧ ಹಾಗೂ ಪ್ರತಿಭಂದಕ ಕಾಯ್ದೆ 1964 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಮನುಷ್ಯ ಕಾಣೆ ಪ್ರಕರಣ  
  • ಬ್ರಹ್ಮಾವರ:ದಿನಾಂಕ: 23/07/2014 ರಂದು 09.30 ಗಂಟೆಗೆ ಉಡುಪಿ ತಾಲೂಕು ಹಾರಾಡಿ ಗ್ರಾಮದ ಹಾರಾಡಿ ಹೊಳೆಯಲ್ಲಿ ಪಿರ್ಯಾದಿ ಅವಿನಾಶ್ ಸುವರ್ಣ (23) ತಂದೆ: ಪುರಂದರ ಪುತ್ರನ್ ವಾಸ: ಸುವರ್ಣ, ಸಾಲಿಕೇರಿ ಅಂಚೆ,  ಹಾರಾಡಿ ಗ್ರಾಮ ಉಡುಪಿರವರ  ತಾಯಿಯ ತಮ್ಮಂದಿರಾದ ಸುರೇಶ ಸುವರ್ಣ (37), ಹಾಗೂ ಜಯಕರ ಸುವರ್ಣ (32) ಎಂಬವರೊಂದಿಗೆ ಮಿನುಗಾರಿಕೆಗೆ ದೋಣಿಯಲ್ಲಿ ಹೋಗುವಾಗ ಒಮ್ಮೆಲೆ ಜೋರಾಗಿ ಮಳೆ ಹಾಗೂ ಗಾಳಿ ಬಂದು ಆಕಸ್ಮಿಕವಾಗಿ ಅವರು ಹೋಗುತ್ತಿದ್ದ ದೋಣಿ ಮಗುಚಿ ಮೂವರು ನೀರಿನಲ್ಲಿ ಮುಳುಗಿದ್ದು, ಪಿರ್ಯಾದಿದಾರರನ್ನು ಗೋಪಾಲ ಸುವರ್ಣ ಹಾಗೂ ಅವರ ಹೆಂಡತಿ ರೋಹಿಣಿ ಎಂಬವರು ಪಾರು ಮಾಡಿದ್ದು,  ಸುರೇಶ ಸುವರ್ಣ ಹಾಗೂ ಜಯಕರ ಸುವರ್ಣ ಎಂಬವರು ನೀರಿನಲ್ಲಿ ಮುಳುಗಿ ಕಾಣೆಯಾಗಿರುವುದಾಗಿದೆ. ಈ ಬಗ್ಗೆ  ಅವಿನಾಶ್ ಸುವರ್ಣರವರು ನೀಡಿದ ದೂರಿನಂತೆ  ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108 /2014 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: