Sunday, July 27, 2014

Daily Crime Reported As On 27/07/2014 At 19:30 Hrs

ಅಸ್ವಾಭಾವಿಕ ಮರಣ ಪ್ರಕರಣಗಳು 
  • ಕೋಟಾ: ಉದಯ ತಂದೆ-ಮಹಾಬಲ ವಾಸ- ಪ.ಪಂ ಕಾಲೋನಿ ಕಾವಡಿ ಅಂಚೆ & ಗ್ರಾಮ ಉಡುಪಿ ತಾಲುಕುರವರ ಮಾವ ಚಂದ್ರ ಎಂಬುವರು ದಿನಾಂಕ 26/07/2014 ರಂದು, ಮಧ್ಯಾಹ್ನ15:30ಗಂಟೆಗೆ ಮಧುವನ,ಎಂ.ಜಿ ಕಾಲೋನಿಯಲ್ಲಿರುವ ತನ್ನ ಸಂಬಂದಿಕರ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು, ರಾತ್ರಿ ಕಾವಡಿ ಕಡೆಯಿಂದ ಮಧುವನ ಕಡೆಗೆ ರೈಲ್ವೆ ಟ್ರ್ಯಾಕ್‌ನಲ್ಲಿ ನೆಡೆದು ಕೊಂಡು ಹೋಗುತಿರುವಾಗ, ಕಾವಡಿ ರೈಲ್ವೆ ಬ್ರೀಜ್ ಬಳಿ ಯಾವುದೋ ರೈಲು ಡಿಕ್ಕಿಹೊಡೆದ ಪರಿಣಾಮ ತೀವ್ರ ರಕ್ತಗಾಯಗೊಂಡು ಸ್ಥಳದಲ್ಲಿ ಮೃತ ಪಟ್ಟಿದ್ದು ಮೃತ ಶರೀರವನ್ನು ರೈಲ್ವೆ ಇಲಾಖೆ ಟ್ರ್ಯಾಕ್‌ಮೇನ್ ನಾಗರಾಜ ಮಡಿವಾಳ ಎಂಬುವವರು ದಿನಾಂಕ-27/07/2014 ರಂದು ಬೆಳಿಗ್ಗೆ 01:05 ಗಂಟೆಗೆ ನೋಡಿರುವುದಾಗಿದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಉದಯರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 37/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ: ದಿನಾಂಕ 27/07/2014 ರಂದು ಬೆಳಿಗ್ಗೆ 06:30 ಗಂಟೆಯ ಸಮಯಕ್ಕೆ ಸಂತೋಷ ಖಾರ್ವಿ ಎಂಬವರು ಕುಂದಾಫುರ ತಾಲೂಕು ಹೊಸಾಡು ಗ್ರಾಮದ ಕಂಚುಗೋಡು ಸಮುದ್ರ ಕಿನಾರೆಗೆ ಹೋದಾಗ ಸಮುದ್ರ ಕಿನಾರೆಯಲ್ಲಿ ಸುಮಾರು 35 ರಿಂದ 40 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದ್ದು, ಮೃತನು ಒಂದು ದಿನದ ಹಿಂದೆ ಸಮುದ್ರದ ನೀರಿನಲ್ಲಿ ಮುಳುಗಿ ಮೃತ ಪಟ್ಟಿರಬಹುದಾಗಿದೆ ಎಂಬುದಾಗಿ ಸಂತೋಷ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2014 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಉಡುಪಿ: ಅಜಿತ್‌  ಪಡಿಯಾರ್‌ ತಂದೆ: ಅಶೋಕ್‌ ಪಡಿಯಾರ್‌, ವಾಸ 2-73-58 ಇಂದಿರಾನಗರ ,3ನೇ ಕ್ರಾಸ್‌ ,76 ಬಡಗುಬೆಟ್ಟು ಗ್ರಾಮ ಉಡುಪಿರವರ ಪರಿಚಯದ ವಿಕಾಸ್‌ ಕಿಣಿ ಎಂಬವರು ದಿನಾಂಕ 26/07/2014 ರಂದು ರಾತ್ರಿ ಸುಮಾರು 10.00 ಗಂಟೆ ಸಮಯಕ್ಕೆ ಉಡುಪಿಯಿಂದ ಮಣಿಪಾಲ ಕಡೆಗೆ ತನ್ನ  ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಎಸ್‌ 9439 ನೇದನ್ನು   ಸವಾರಿ ಮಾಡಿಕೊಂಡು ಹೋಗಿ  ಕಡಿಯಾಳಿ ಓಕುಡೆ ಟವರ್ಸ್‌ ಮುಂಭಾಗದ ದ್ವಿಪಥ ರಸ್ತೆಯ ಡಿವೈಡರ್‌ ಬಳಿ U ಟರ್ನ ಮಾಡುವರೇ ನಿಂತಿದ್ದಾಗ, ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಕೆಎ 20 Z 7824 ನೇ ಕಾರಿನ ಚಾಲಕ ಮನೋಹರ್‌ ಕಾರಂತರವರು ತನ್ನ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ವಿಕಾಸ್‌ ಕಿಣಿ ಎಂಬವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಎಡಕಾಲು,ಮೊಣಕಾಲು ಗಂಟಿನ ಕೆಳಗೆ ಕೋಲು ಕಾಲಿಗೆ ತೀವ್ರ ಒಳಜಖಂ ಹಾಗೂ ಎಡ ಕೈ ಮತ್ತು ಎಡ ಕೆನ್ನೆಗೆ ತರಚಿದ ಗಾಯವಾಗಿದ್ದವರನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ದಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಅಜಿತ್‌ ಪಡಿಯಾರ್‌ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2014  ಕಲಂ. 279, 338  ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 26-07-2014 ರಂದು ರಾತ್ರಿ 8:00 ಗಂಟೆ ಸಮಯಕ್ಕೆ ಆರೋಪಿಯು ತನ್ನ ಮೋಟಾರು ಸೈಕಲ್‌ನ್ನು ಕುಂದಾಪುರ ತಾಲೂಕು ಕುಂದಾಪುರ ಹೋಬಳಿಯ ಕೊಡ್ಲಾಡಿ ಗ್ರಾಮದ ಜಡ್ಡುಮಕ್ಕಿಕೋಡ್ಲು ಎಂಬಲ್ಲಿ ಮೂಡುಬಗೆ -ಕಂಜಿಮನೆ ತಾರು ರಸ್ತೆಯ ತಿರುವಿನಲ್ಲಿ ಕಂಜಿಮನೆ ಕಡೆಯಿಂದ ಮೂಡು ಬಗೆ ಕಡೆಗೆ  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಥಳದಲ್ಲಿ ಎಡಬದಿಯ ಮಣ್ಣು ರಸ್ತೆಯಲ್ಲಿ ಮೂಡುಬಗೆ ಕಡೆಯಿಂದ ಕಂಜಿಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಶಂಕರ ತಂದೆ ನರಸಿಂಹ ನಾಯ್ಕ ವಾಸ: ಜಡ್ಡುಮಕ್ಕಿಕೊಡ್ಲು ಬಾಂಡ್ಯ ಅಂಚೆ, ಕೊಡ್ಲಾಡಿ ಗ್ರಾಮ ಕುಂದಾಪುರ ತಾಲೂಕುರವರ ಬಲಕಾಲಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ ಎಂದು ಆರೋಪಿಯು ಅಪಾಘಾತವೆಸಗಿ ಬೈಕ್‌ಸಮೇತ ಸಹಸವಾರನೊಂದಿಗೆ ಸ್ಥಳದಿಂದ ಪರಾರಿ ಆಗಿರುತ್ತಾರೆ ಎಂಬುದಾಗಿ ಶಂಕರರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2014 ಕಲಂ. 279, 337 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಅಮಾಸೆಬೈಲು: ಕೇಶವ ಮೇಲಿನಸರ ,ಅರಗ ಪೋಸ್ಟ್ ತೀರ್ಥಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆರವರ ತಂಗಿ ರತ್ನಾ ಎಂಬವರನ್ನು ಸುಮಾರು 20 ವರ್ಷಗಳ ಹಿಂದೆ ಕುಂದಾಪುರ ತಾಲೂಕು ಜಡ್ಡಿನಗದ್ದೆ ಬೊಳ್ಮನೆಯ ವಾಸಿ ಮಂಜು ಎಂಬವರಿಗೆ ವಿವಾಹ ಮಾಡಿಕೊಟ್ಟಿದ್ದು, 1 ಗಂಡು, 1 ಹೆಣ್ಣು ಮಕ್ಕಳಿರುತ್ತಾರೆ. ಇತ್ತ್ತೀಚೆಗೆ ರತ್ನಾ ಹಾಗೂ ಮಂಜುರವರ ನಡುವೆ ಸರಿ ಇಲ್ಲದೇ ಇದ್ದು, ದಿನಾಂಕ 25/07/2014 ರಂದು ರತ್ನಾಳ ಗಂಡ ಮಂಜು, ರತ್ನಾಳ ಗಂಡನ ಅಕ್ಕಂದಿರಾದ ಅಕ್ಕಯ್ಯ, ಮತ್ತು  ಬಾಬಿ,  ಹಾಗೂ ಪ್ರಭಾಕರ ಎಂಬವರು ಸೇರಿ ರತ್ನಾರವರಿಗೆ ನೀನು ಸಾಯಿ ಎಂದು ಬೈದು ಮನೆಯಿಂದ ಹೊರಗೆ ಹಾಕಿದ್ದು, ಅದರಿಂದ ಮನನೊಂದ ರತ್ನಾಳು ದಿನಾಂಕ 26/07/2014 ರಂದು ಬೆಳಿಗ್ಗೆ 07:00 ಗಂಟೆಗೆ ವಿಷ ಪದಾರ್ಥ ಸೇವಿಸಿದವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27/07/2014 ರಂದು  ಬೆಳಿಗ್ಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕೇಶವ ಮೇಲಿನಸರರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2014 ಕಲಂ 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: