Saturday, April 19, 2014

Daily Crimes Reported as On 19/04/2014 at 17:00 Hrs



ಅಕ್ರಮ ಜಾನುವಾರು ಸಾಗಾಟ ಪ್ರಕರಣ

  • ಅಜೆಕಾರು: ದಿನಾಂಕ 18 /04/14 ರಂದು ಸಂಜೆ ಪಿರ್ಯಾದಿದಾರರಾದ ಅಕ್ಷಯ ಕುಮಾರ್‌ (24), ತಂದೆ ವಿನಯ ಕುಮಾರ್‌, ವಾಸ ಕಂಬಳದಡ್ಡ, ಕೆರ್ವಾಶೆ ಗ್ರಾಮ ಎಂಬವರು ಕೆರ್ವಾಶೆ ಗ್ರಾಮದ ಪಾಲ್ದಕ್ಯಾರು ಎಂಬಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿ ದೊರೆತಂತೆ ತನ್ನ ಸಂಗಡಿಗರೊಂದಿಗೆ ಕಾಯುತ್ತಿರುವಾಗ ರಾತ್ರಿ 08:45 ಗಂಟೆಗೆ ನೋಂದಣಿಯಾಗದ ಬೊಲೆರೊ ವಾಹನದಲ್ಲಿ 1). ಜೋಸೆಪ್‌, 2). ಪ್ರಾನ್ಸಿಸ್‌, 3) ಜಾನ್‌ ಮತ್ತು ಇತರ ಮೂವರು ಬಂದು ಅಕ್ರಮ ಜಾನುವಾರು ಸಾಗಾಟ ತಡೆಯಲು ನಿಂತವರನ್ನು ನೋಡಿ ಜೀವ ಬೆದರಿಕೆ ಹಾಕಿದ್ದು ಅದನ್ನು ತಡೆದು ನಿಲ್ಲಿಸಲು ಯತ್ನಿಸಿದರೂ ಅದನ್ನು ನಿಲ್ಲಿಸದೆ ಓಡಿಸಿ ಪರಾರಿಯಾಗಿದ್ದು ಅದನ್ನು ಹಿಂಬಾಲಿಸಿ ಕೊಂಡು ಬಂದ ಕೆಎ 20ಸಿ 1276ನೇ ಟಾಟಾ ಏಸ್‌ ಪಿಕಪ್‌ ವಾಹನ ತಡೆದು ನೋಡಿದಾಗ ಅದರಲ್ಲಿ ಚಾಲಕ ಜೋಸೆಪ್‌ ಮಾಳ ಮತ್ತು ಫ್ರಾನ್ಸಿಸ್‌ ಮಾಳ ಚೌಕಿ ಎಂಬವರು ಕಪ್ಪು ಬಣ್ಣದ ಹೋರಿಯೊಂದನ್ನು ಮಾಂಸಕ್ಕಾಗಿ ಕಡಿಯಲು ಸಾಗಿಸುತ್ತಿರುವುದು ಪತ್ತೆಯಾಗಿರುತ್ತದೆ ಎಂಬುದಾಗಿ ಅಕ್ಷಯ ಕುಮಾರ್‌ ಇವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 30/14 ಕಲಂ 8, 9, 11 ಕರ್ನಾಟಕ ಗೋಹತ್ಯಾ ನಿಷೇಧ ಕಾಯಿದೆ 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 17/04/2014ರಂದು 15:00 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಎಸ್.ಎಮ್ ಎಸ್ ನಿಲ್ಧಾಣದ ಬಳಿ ರಸ್ತೆ ದಾಟುಲು ನಿಂತುಕೊಂಡಿದ್ದ ಪಿರ್ಯಾದಿದಾರರಾದ ಪ್ರಕಾಶ್ (34), ತಂದೆ ದಿ. ಶೇಷಪ್ಪ, ವಾಸ ಎಸ್.ಎಮ್.ಎಸ್ ಜ್ಯೂನಿಯರ್ ಕಾಲೇಜಿನ ಎದುರು, ಬ್ರಹ್ಮಾವರ ಎಂಬವರ ಪರಿಚಯದ ಎಲ್ಗರ್ ಸಿಕ್ವೇರ ಎಂಬವರಿಗೆ, ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ನೊಂದಣಿ ನಂಬ್ರ ಹಾಕಿರದ ಹೊಸ ಹೋಂಡಾ ಶೈನ್ ಮೋಟಾರು ಸೈಕಲನ್ನು ಅದರ ಸವಾರ ಗಣೇಶ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎಲ್ಗರ್ ಸಿಕ್ವೇರ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿದೆ  ಎಂಬುದಾಗಿ ಪ್ರಕಾಶ್ ರವರು ನೀಡಿದ ದೂರಿನಂತೆ  ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 89/14 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಕಳವು  ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಗಿರಿಜಾ ಶಂಕರ (36) ತಂದೆ ಕೆ.ಆರ್ ದೇವರಾಜನ್ ವಾಸ ರಾಮನಗರ, ಬೆಂಗಳೂರು ಎಂಬವರು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಪ್ರವಾಸದ ಬಗ್ಗೆ ಮಲ್ಪೆ ಬೀಚಿಗೆ ಬಂದಿದ್ದು, ದಿನಾಂಕ 18/04/2014 ರಂದ 10:00 ಗಂಟೆಗೆ ಕೊಡವೂರು ಗ್ರಾಮದ ವಡಬಾಂಡೇಶ್ವರದ ವಿಧ್ಯಾ ಹೋಮ್ ಗೆಸ್ಟ್ ಹೌಸ್ ನ  ರೂಂ ನಲ್ಲಿ ಮಲಗಲು ಹೋಗುವಾಗ 2 ಮೊಬೈಲ್, ಕ್ಯಾಮರಾ ಹಾಗೂ ಲೆನ್ಸ್, ನಗದು 7000 ನ್ನು ರೂಂ ನ ಹಾಲ್ ನಲ್ಲಿ ಇಟ್ಟು ಒಳಗಡೆ ರೂಂ ನಲ್ಲಿ ಮಲಗಿದ್ದು 19/04/2014 ರಂದು ಬೆಳಿಗ್ಗೆ 02:00 ಗಂಟೆ ಸಮಯಕ್ಕೆ ನೀರು ಕುಡಿಯಲು ಎದ್ದು ನೋಡಿದಾಗ ಹೊರಗಡೆ ಹಾಲ್ ನಲ್ಲಿ ಇಟ್ಟಿದ್ದ 2 ಮೊಬೈಲ್ ಮೌಲ್ಯ 6000, ಕ್ಯಾಮರ ಜೊತೆಗೆ ಲೆನ್ಸ್ ಮೌಲ್ಯ 60000, ಮತ್ತು ನಗದು 7000 ರೂಪಾಯಿ ಇಲ್ಲದಿದ್ದು ಸದ್ರಿ ಸೊತ್ತುಗಳನ್ನು ಯಾರೋ ಕಳ್ಳುರು ಕಿಟಕಿಯಿಂದ ಬಾಗಿಲಿನ ಚಿಲಕ ತೆಗೆದು ಕಳವು ಮಾಡಿಕೊಂಡು ಹೋಗಿದ್ದು ಕಳವು ಆದ ವಸ್ತುವಿನ ಅಂದಾಜು ಮೌಲ್ಯ ರೂ 73,000/- ಆಗಿರುತ್ತದೆ ಎಂಬುದಾಗಿ ಗಿರಿಜಾ ಶಂಕರ ರವರು ನೀಡಿದ ದೂರಿನಂತೆ  ಮಲ್ಪೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 81/14 ಕಲಂ 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: