Saturday, April 19, 2014

Daily Crime Reports as on 19/04/2014 at 19:30 Hrs



ಅಪಘಾತ ಪ್ರಕರಣಗಳು 

  • ಕಾರ್ಕಳ: ದಿನಾಂಕ 19/04/2014 ರಂದು ಬೆಳಿಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಕೃಷ್ಣ ಮಂದಿರದ ಬಳಿ ಪಿರ್ಯಾದಿದಾರರಾದ ಅಭಿಜಿತ್ ಹೆಗ್ಡೆ (31) ತಂದೆ ಪ್ರಭಾಕರ ಹೆಗ್ಡೆ, ವಾಸ: ರತ್ನಾ ಪ್ರಭಾ ನಿಲಯ, ಬನ್ನಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಎಂಬವರು ಕಾರ್ಕಳದಿಂದ ಬೈಪಾಸ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವರೇ ಚಲಾಯಿಸಿಕೊಂಡಿದ್ದ ಅವರ ಕೆಎ 51 ಎನ್  5201 ನೇ  ಹುಂಡೈ ಕಾರಿಗೆ ಎದುರುಗಡೆಯಿಂದ ಅಂದರೆ ಪುಲ್ಕೇರಿ ಬೈಪಾಸ್ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಲಾರಿ ನಂಬ್ರ ಕೆಎ 20 7224 ನೇಯದನ್ನು ಅದರ ಚಾಲಕ ಸದಾನಂದ ಎಂಬವರು ಅತೀವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಹೆಂಡತಿ ಅನುಷಾ ಮತ್ತು ಅತ್ತೆಯವರಾದ ಶ್ರೀಮತಿ ಶೋಭಾ ಮತ್ತು ಶ್ರೀಮತಿ ಆಶಾಲತಾ ಶೆಟ್ಟಿಯವರಿಗೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಕಾರ್ಕಳದ ಗಾಜ್ರಿಯಾ ಆಸ್ಪತ್ರೆ ಮತ್ತು ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಎಂಬುದಾಗಿ ಅಭಿಜಿತ್ ಹೆಗ್ಡೆ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/14 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

  • ಕಾರ್ಕಳ: ದಿನಾಂಕ 19/04/2014 ರಂದು ಬೆಳಗ್ಗೆ 6:00 ಗಂಟೆಗೆ ಕಾರ್ಕಳ ತಾಲೂಕು ಕುಕ್ಕೂಂದೂರು ಗ್ರಾಮದ ಮಹಾತ್ಮಾಗಾಂಧಿ ವಸತಿ ಪ್ರೌಢ ಶಾಲೆಯ ಬಳಿ ಪಿರ್ಯಾದಿದಾರರಾದ ನಯಾಜ್ ಅಹಮ್ಮದ್ (33) ತಂದೆ ಶೇಖ್ ಯೂಸುಫ್ ಸಾಹೇಬ್, ವಾಸ: ಸೀಮಾ ಮಂಜಿಲ್,  ತೆಳ್ಳಾರು,  ದುರ್ಗಾ ಗ್ರಾಮ, ಕಾರ್ಕಳ ತಾಲೂಕು ಎಂಬವರು ಇನ್ನೋವಾ ಕಾರು ನಂಬ್ರ ಕೆಎ 20 ಝಡ್ 6367 ನೇದನ್ನು ತೆಳ್ಳಾರಿನಿಂದ ಬೈಲೂರಿಗೆ ಚಲಾಯಿಕೊಂಡು  ಹೋಗುತ್ತಿರುವಾಗ ಎದುರಿನಿಂದ ಅಂದರೆ ಉಡುಪಿ ಕಡೆಯಿಂದ ಸ್ಯಾಂಟ್ರೋ ಕಾರು ನಂಬ್ರ ಕೆಎ-20 ಪಿ- 7578 ನೇ  ನೇದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂ ಗೊಂಡಿದ್ದು, ಸಾಂಟ್ರೋ ಕಾರಿನಲ್ಲಿದ್ದ ಒಂದು ಮಗುವಿಗೆ ಸಾಮಾನ್ಯ ಸ್ಚರೂಪದ ರಕ್ತಗಾಯವಾಗಿರುತ್ತದೆ ಎಂಬುದಾಗಿ ನಯಾಜ್ ಅಹಮ್ಮದ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/14 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

 
ಜೀವ ಬೆದರಿಕೆ ನೀಡಿದ ಪ್ರಕರಣಗಳು

  • ಕಾರ್ಕಳ: ದಿನಾಂಕ 18/04/2014 ರಂದು ರಾತ್ರಿ 20:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ದುರ್ಗಾದೇವಿ (73) ಗಂಡ: ದಿ ಮನೋಹರ ರಾವ್, ವಾಸ: ಪಾಲೆದಕ್ಯಾರ್ ಮನೆ, ಪರಪ್ಪಾಡಿ, ಸಾಣೂರು, ಕಾರ್ಕಳ ತಾಲೂಕು ಎಂಬವರ ವಾಸ್ತವ್ಯದ ಮನೆಗೆ, ಅವರ ಮನೆ ಹತ್ತಿರ ವಾಸವಿರುವ ಆರೋಪಿ ಸ್ಟ್ಯಾನಿ ಎಂಬವರು ಅಕ್ರಮ ಪ್ರವೇಶ ಮಾಡಿ   ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ನೀನು ಮನೆ ಬಿಟ್ಟು  ಹೋಗು, ಇಲ್ಲದಿದ್ದರೆ  ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿದೆ. ಜಮೀನು ವಿಚಾರವೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀಮತಿ ದುರ್ಗಾದೇವಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/14 ಕಲಂ ಕಲಂ 504,341,506,427 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ಕುಂದಾಪುರ: ಪಿರ್ಯಾದಿದಾರರಾದ ಅಜಿತ್ ಹಂದಾಡಿ ವಾಸ: ಲಕ್ಷ್ಮಿಕಟಾಕ್ಷ ಹಂದಾಡಿ ಬೇಳೂರು ಗ್ರಾಮ ಉಡುಪಿ  ತಾಲೂಕು ಎಂಬವರು ತಂಗಿಯೊಂದಿಗೆ ದಿನಾಂಕ 15-04-2014 ರಂದು ರಾತ್ರಿ 9:15 ಗಂಟೆಗೆ ಅವರ ಮನೆಯ ಕಡೆಗೆ ಬರುತ್ತಿರುವಾಗ ಕಟ್ಕೇರಿ ಕಾಳಿಕಾಂಬ ದೇವಸ್ಥಾನದ ಬಳಿ ದಾರಿಯಲ್ಲಿ ಆರೋಪಿತರಾದ 1)ಪ್ರವೀಣ ಶೆಟ್ಟಿ, ವಾಸ ಜನತಾಕಾಲೋನಿ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ, 2) ಗಣೇಶ ಪ್ರಸಾದ ಜನತಾಕಾಲೋನಿ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ, 3) ಸತ್ಯಾ ಜನತಾಕಾಲೋನಿ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ, 4) ನಾಗರಾಜ,  ಜನತಾಕಾಲೋನಿ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ, 5) ಮಧುಕರ ಜನತಾಕಾಲೋನಿ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ ಎಂಬವರು ಪಿರ್ಯಾದಿದಾರರನ್ನು ಉದ್ದೇಶಿಸಿ ಇದು ನಮ್ಮ ಊರು ನಾವು ಎನು ಬೇಕಾದರು ಮಾಡುತ್ತೇವೆ ನಿನ್ನನ್ನು ಕೊಲ್ಲುತ್ತೇವೆ ನಿಮ್ಮ ಕಾರನ್ನು ಸುಟ್ಟು ಹಾಕುತ್ತೇವೆ ಕೇಳುವುದಕ್ಕೆ ನೀನು ಯಾರು, ಬೇರೆ ಊರಿನವನು ನೀನ್ಯಾಕೆ ಇಲ್ಲಿ ಬರುತ್ತಿಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿದೆ ಎಂಬುದಾಗಿ ಅಜಿತ್ ಹಂದಾಡಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/14 ಕಲಂ ಕಲಂ 504,506 ಜೊತೆಗೆ34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: